ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಗಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮರು ಆಯ್ಕೆ (Congress president | Sonia Gandhi | AICC | Rajiv Gandhi)
Bookmark and Share Feedback Print
 
ಸಂಸತ್ತಿನ ಮಳೆಗಾಲದ ಅಧಿವೇಶನ ಮುಕ್ತಾಯಗೊಂಡ ನಂತರ ಆಗಸ್ಟ್ ಅಂತ್ಯದೊಳಗೆ ಸತತ ಮೂರನೇ ಬಾರಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮರು ಆಯ್ಕೆ ನಡೆಯುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿನ ಚುನಾವಣೆಯ ದಿನಾಂಕಗವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪ್ರಕಟಿಸಲಿದೆ. ಆದರೆ ಇದುವರೆಗೂ ಪಕ್ಷವು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕಾರ್ಯಕಾರಿ ಸಮಿತಿಯು ದಿನಾಂಕ ನಿಗದಿಪಡಿಸಿದ ಕೆಲವೇ ದಿನಗಳೊಳಗೆ ಸೋನಿಯಾ ಮರು ಆಯ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ನಿಗದಿಯಾಗಿದ್ದಂತೆ ಎಲ್ಲವೂ ನಡೆಯುತ್ತಿದ್ದರೆ ಜುಲೈ 25ರೊಳಗೆ ಸೋನಿಯಾ ಮರು ಆಯ್ಕೆ ನಡೆಯಬೇಕಿತ್ತು. ಆದರೆ ಇತರ ರಾಜಕೀಯ ಚಟುವಟಿಕೆಗಳಿಂದಾಗಿ ಇದು ಸಾಧ್ಯವಾಗಿರಲಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ ನಂತರ ಸೀತಾರಾಮ್ ಕೇಸರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ 1998ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಸೋನಿಯಾ ಅಧಿನಾಯಕಿಯಾಗಿ ದಶಕ ಪೂರೈಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. 125 ವರ್ಷಗಳ ಇತಿಹಾಸ ಹೊಂದಿರುವ ಪಕ್ಷಕ್ಕೆ ಇಷ್ಟೊಂದು ದೀರ್ಘ ಅವಧಿ ಯಾರೊಬ್ಬರೂ ಅಧ್ಯಕ್ಷರಾಗಿ ಮುಂದುವರಿದಿರಲಿಲ್ಲ.

1885ರಲ್ಲಿ ಪಕ್ಷ ಸ್ಥಾಪನೆಗೊಂಡ ಸ್ಥಳ ಮುಂಬೈಯಲ್ಲೇ 125ನೇ ವರ್ಷದ ಸರ್ವಸದಸ್ಯರ ಸಭೆ ನಡೆಸಬೇಕು ಎಂದು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಾಜ್ಯವನ್ನು ಮುಷ್ಠಿಯಲ್ಲಿಟ್ಟುಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಈಗಾಗಲೇ ಕೇಂದ್ರದ ನಾಯಕತ್ವಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಬಹುತೇಕ ಮುಂಬೈಯಲ್ಲೇ ಸಭೆ ನಡೆಯಲಿದೆ.

ಒಂದು ಹಂತದಲ್ಲಿ ಕ್ಷೀಣಿಸಿ ಹೋಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಜೀವ ತುಂಬಿದ ಸೋನಿಯಾ ಗಾಂಧಿಯವರೇ ಮತ್ತೆ ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಈ ಹಿಂದೆಲ್ಲ ಸೋನಿಯಾರವರ ಪಟ್ಟಾಭಿಷೇಕಕ್ಕೆ ಹಲವರ ಆಕ್ಷೇಪಗಳಿದ್ದವಾದರೂ, ಪ್ರಸಕ್ತ ಸ್ಥಿತಿಯಲ್ಲಿ ಅಂತಹ ಯಾರೊಬ್ಬರೂ ಪಕ್ಷದ ಮುಖ್ಯವಾಹಿನಿಯಲ್ಲಿ ಕಾಣಸಿಗುತ್ತಿಲ್ಲ. ಹಾಗಾಗಿ 12 ವರ್ಷಗಳ ನಂತರವೂ ಸೋನಿಯಾ ಗಾಂಧಿಯೇ ಅಧಿನಾಯಕಿಯಾಗಿ ಮುಂದುವರಿಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ