ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಮ್ಮು ನಾಗರಿಕರಿಗೆ ಪಾಕ್ ಪ್ರಚೋದನೆ ಗೊತ್ತು: ಕೇಂದ್ರ
(Pak elements | anti-India elements | Pakistan | Jammu and Kashmir)
ಜಮ್ಮು-ಕಾಶ್ಮೀರದ ಜನತೆಗೆ ರಾಜ್ಯದಲ್ಲಿನ ಕೆಲವು ನಿರ್ದಿಷ್ಟ ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೆ ಪಾಕಿಸ್ತಾನದಲ್ಲಿನ ಭಾರತ ವಿರೋಧಿ ಶಕ್ತಿಗಳು ಪ್ರಚೋದನೆ ನೀಡುತ್ತಿರುವ ವಿಚಾರ ತನ್ನ ಅರಿವಿನಲ್ಲಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.
ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಹಲವು ಕಾರಣಗಳನ್ನು ಮುಂದಿಟ್ಟು ಭಾರತ ವಿರೋಧಿ ಶಕ್ತಿಗಳು ನಾಗರಿಕರನ್ನು ಪ್ರಚೋದಿಸುತ್ತಿವೆ ಎಂದು ರಾಜ್ಯಸಭೆಗೆ ಗೃಹ ಸಚಿವಾಲಯದ ರಾಜ್ಯ ಸಚಿವ ಅಜಯ್ ಮೇಕನ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿಂದೆ ಪಾಕ್ ಕೈವಾಡವಿದೆ ಎಂದು ಇತ್ತೀಚೆಗಷ್ಟೇ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದರು. ಸ್ಥಳೀಯ ಯುವಕರಿಗೆ ಕಲ್ಲು ತೂರಾಟ ನಡೆಸುವ ಮೂಲಕ ಅಹಿತಕರ ವಾತಾವರಣ ಸೃಷ್ಟಿಸಲು ಭಯೋತ್ಪಾದಕ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿವೆ ಎನ್ನುವುದು ಅವರ ಆರೋಪವಾಗಿತ್ತು.
ಈ ಬಗ್ಗೆ ಇಂದು ರಾಜ್ಯ ಸಚಿವ ಮೇಕನ್ ರಾಜ್ಯಸಭೆಗೆ ಮಾಹಿತಿ ನೀಡಿದರು.
ಸರ್ವಪಕ್ಷಗಳ ಹುರಿಯತ್ ಕಾನ್ಫರೆನ್ಸ್ (ಅಬ್ಬಾಸ್) ಮತ್ತು ಸರ್ವಪಕ್ಷಗಳ ಹುರಿಯತ್ ಕಾನ್ಫರೆನ್ಸ್ (ಗಿಲಾನಿ) ಸಂಘಟನೆಗಳ ಮಾಧ್ಯಮ ಹೇಳಿಕೆಗಳು ಹಾಗೂ ಗಡಿ ಪ್ರದೇಶದಾದ್ಯಂತ ಸಕ್ರಿಯವಾಗಿರುವ ಲಷ್ಕರ್ ಇ ತೋಯ್ಬಾಗಳ ಕಾರ್ಯಾಚರಣೆಯ ಬಗ್ಗೆ ಅರಿವಿದೆ ಎಂದರು.
2009ರ ಅವಧಿಯಲ್ಲಿ ಕಾಶ್ಮೀರದೊಳಕ್ಕೆ ಹರಿದು ಬಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಹಣದ ನಿರ್ದಿಷ್ಟ ಪ್ರಮಾಣವನ್ನು ಅಂದಾಜಿಸಲಾಗಿಲ್ಲ. ಆದರೆ 76,84,600 ರೂಪಾಯಿ ನಗದು ಮತ್ತು 50,000 ರೂಪಾಯಿ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಹವಾಲಾ ಮೂಲಕ ಸಾಗಿಸಲು ಯತ್ನಿಸಲಾಗಿತ್ತು ಎಂದು ಮೇಕನ್ ತಿಳಿಸಿದ್ದಾರೆ.
668 ಎಕೆ 47 ರೈಫಲುಗಳು, ಪಿಕಾ ಬಂದೂಕುಗಳು, ಸ್ನಿಪರ್ ರೈಫಲುಗಳು, 1,142 ಶಸ್ತ್ರಾಗಾರಗಳು, 59,333 ಮದ್ದುಗುಂಡುಗಳ, ಆರ್‌ಡಿಎಸ್ಕ್ ಸೇರಿದಂತೆ ಸ್ಫೋಟಕ ವಸ್ತುಗಳು, 56,15,071 ರೂಪಾಯಿ ಭಾರತೀಯ ಹಣ, ಪಾಕಿಸ್ತಾನಿ ಕರೆನ್ಸಿ, ನಕಲಿ ನೋಟು ಮತ್ತಿತರ ಪರಿಕರಗಳನ್ನು ಭಯೋತ್ಪಾದಕರಿಂದ ವಶಕ್ಕೆ ಪಡೆಯಲಾಗಿದೆ.