ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುವತಿಯರಿಲ್ಲಿ ಬುರ್ಖಾ ಹಾಕ್ಕೊಂಡು ಜಿಮ್‌ಗೂ ಹೋಗ್ತಾರೆ! (women go to the gym in a burqa | Saifee Parveen | Sehat Gym | Muslim Women)
Bookmark and Share Feedback Print
 
ಇಲ್ಲಿ ದೈಹಿಕ ದೃಢತೆಯನ್ನುವುದೇ ಪ್ರಮುಖ ವಿಚಾರವಾಗಿರುವುದರಿಂದ ಬುರ್ಖಾದಿಂದ ತೊಂದರೆಯಾಗುತ್ತಿದೆ ಎಂಬುದು ಪ್ರಶ್ನೆಯೇ ಅಲ್ಲ. ತರಬೇತಿ ನೀಡುತ್ತಿರುವವರು ಪುರುಷರು ಎಂಬುದೂ ಅವರಿಗೆ ಹಿನ್ನಡೆಯಾಗಿಲ್ಲ. ಅಲ್ಲಿನ ಮುಸ್ಲಿಂ ಮುಖಂಡರೂ ಇದಕ್ಕೆ ಸಾಥ್ ನೀಡಿರುವುದು ಮತ್ತೊಂದು ಹೆಗ್ಗಳಿಕೆ.

ಜಿಮ್ ಎನ್ನುವುದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಅನೇಕ ಮುಸ್ಲಿಂ ಮಹಿಳೆಯರ ದಿನಚರಿಯಾಗಿ ಮಾರ್ಪಟ್ಟಿದೆ. ಅದಕ್ಕಾಗಿ ಅವರಲ್ಲಿ ಯಾವುದೇ ಹಿಂಜರಿಕೆಯಿಲ್ಲ. ಇದರಿಂದ ನಮ್ಮ ಧರ್ಮಕ್ಕೆ ಯಾವುದೇ ರೀತಿಯಲ್ಲಿ ಅಪಚಾರ ಎಸಗಿದಂತಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
PR

ನಾವು ನಮ್ಮ ಧರ್ಮವನ್ನು ಚಾಚೂ ತಪ್ಪದೆ ಅನುಸರಿಸುತ್ತೇವೆ. ಜಿಮ್ ಮಾಡುವಾಗಲೂ ನಾವು ಬುರ್ಖಾವನ್ನು ತೆಗೆಯುವುದಿಲ್ಲ. ಇದಕ್ಕೆ ನಮ್ಮ ಕುಟುಂಬವೂ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ. ಇನ್ನಷ್ಟು ಯುವತಿಯರು ನಮ್ಮನ್ನು ಬೆಂಬಲಿಸಿ, ಸೇರಿಕೊಳ್ಳಬೇಕು ಎಂದು ನಾನು ಹೇಳ ಬಯಸುತ್ತಿದ್ದೇನೆ ಎಂದು ದಿನಾ ಜಿಮ್‌ಗೆ ಹೋಗುತ್ತಿರುವ ಸೈಫೀ ಫರ್ವೀನ್ ಕರೆ ನೀಡಿದ್ದಾಳೆ.

ಅಲಹಾಬಾದ್‌ನ ಕರೇಲಿ ಮೊಹಲ್ಲಾದಲ್ಲಿನ 'ಸೇಹತ್ ಜಿಮ್'ಗೆ ಫರ್ವೀನ್‌ಳಂತೆ ಹಲವು ಮುಸ್ಲಿಂ ಯುವತಿಯರು ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ಬಂದು ದೈಹಿಕ ವ್ಯಾಯಾಮಗಳನ್ನು ಮಾಡುತ್ತಾರೆ. ಅವರಿಗೆ ಮನೆಯವರೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಮುಸ್ಲಿಂ ಮಹಿಳೆಯರು ಮುಂದೆ ಬರಬಾರದು ಎಂದು ಹೇಳುವವರೂ ನಮ್ಮ ನಡುವೆ ಹಲವರಿದ್ದಾರೆ. ಆದರೆ ನಾವು ಹಾಗೆ ಯೋಚಿಸುವುದಿಲ್ಲ. ಅವರು ಶೈಕ್ಷಣಿಕ ಅಥವಾ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂಬ ನಿಟ್ಟಿನಲ್ಲಿ ಹೆತ್ತವರು ಮತ್ತು ಸಹೋದರರು ಬೆಂಬಲಿಸಬೇಕು, ಪ್ರೋತ್ಸಾಹ ನೀಡಬೇಕು ಎಂದು ಫರ್ವೀನ್ ಸಹೋದರ ಆಬಿದ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ಅಭಿಪ್ರಾಯವನ್ನು ಸಯ್ಯದ್ ಜಾಫರ್ ಜೈದಿ ಎಂಬ ಇಮಾಮ್ ಕೂಡ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಲಾರರು. ಇಸ್ಲಾಂ ಮಹಿಳೆಯರ ದೈಹಿಕ ಕಸರತ್ತುಗಳನ್ನು ಪ್ರತಿಬಂಧಿಸುವುದಿಲ್ಲ. ಯಾರಾದರೂ ಬುರ್ಖಾ ಧರಿಸಿಯೇ ಜಿಮ್‌ಗೆ ಹೋಗುತ್ತಾರಾದರೆ, ಅದನ್ನು ತಡೆಯಲಾಗದು. ಇದರಿಂದಾಗಿ ಆರೋಗ್ಯ ವೃದ್ಧಿಸುವುದಾದರೆ, ಇಸ್ಲಾಂ ಅವಕಾಶ ನೀಡುತ್ತದೆ ಎಂದು ಇಮಾಮ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ