ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ? (CBI | Narendra Modi | Amit Shah | Congress bureau of investigation)
Bookmark and Share Feedback Print
 
ಕಾಂಗ್ರೆಸ್ ಅಣತಿಯಂತೆ ಕಾರ್ಯಾಚರಿಸುತ್ತಿದೆ ಎಂಬ ಆರೋಪ ಹೊತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಂಧಿಸಲು ಅಡಿಪಾಯ ಹಾಕುತ್ತಿದೆಯೇ? ಅದರ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದಾಗ ಮೇಲಿನ ವಿಚಾರ ಮತ್ತಷ್ಟು ಖಚಿತವಾಗುತ್ತಿದೆ.

ಗುಜರಾತ್ ಗೃಹಸಚಿವರಾಗಿದ್ದ ಅಮಿತ್ ಶಾ ವಿರುದ್ಧ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣವನ್ನು ಹೊರಿಸಿ, ಜೈಲಿಗೆ ತಳ್ಳಿರುವ ಸಿಬಿಐ ಇದೀಗ ಗೃಹ ಸಚಿವಾಯದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಮೋದಿಯನ್ನು ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಬಯಸುತ್ತಿದೆ.

ಮೋದಿಯನ್ನು ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಪ್ರಸಕ್ತ ಅಮಿತ್ ವಿಚಾರಣೆ ನಡೆಸುತ್ತಿರುವ ಸಿಬಿಐ ತಂಡವು ತನ್ನ ಪ್ರಧಾನ ಕಚೇರಿಗೆ ಮನವಿ ಮಾಡಿಕೊಳ್ಳಲಿದೆ ಎಂದು ವರದಿಗಳು ಹೇಳಿವೆ.

ಮೂಲಗಳ ಪ್ರಕಾರ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ಕುರಿತು ಮೋದಿಯವರಲ್ಲಿ ಕೆಲವೊಂದು ಮಾಹಿತಿಗಳಿರಬಹುದು ಎಂಬ ನಿಟ್ಟಿನಲ್ಲಿ ಸಿಬಿಐ ವಿಚಾರಣೆಗೆ ಮುಂದಾಗಲಿದೆ.

ಅಲ್ಲದೆ ತನಿಖೆಯಿಂದ ತಪ್ಪಿಸಿಕೊಳ್ಳಲು ಉನ್ನತ ಪೊಲೀಸ್ ಅಧಿಕಾರಿಗಳು ಯತ್ನಿಸಿರುವುದು ಮೋದಿಯವರ ಅರಿವಿನಲ್ಲಿತ್ತೇ ಮತ್ತು ಸೊಹ್ರಾಬುದ್ದೀನ್ ಹತ್ಯೆಯ ಸಂಬಂಧ ಅಮಿತ್ ಶಾ ನೀಡಿರುವ ಆದೇಶದಲ್ಲಿ ಮೋದಿ ಪಾತ್ರವೇನು ಎಂಬುದನ್ನು ಸಿಬಿಐ ಪ್ರಶ್ನಿಸಲಿದೆ.

ಇದು ಎರಡನೇ ಬಾರಿ...
ಒಂದು ವೇಳೆ ಸಿಬಿಐ ಮೋದಿಗೆ ಸಮನ್ಸ್ ನೀಡಿದಲ್ಲಿ, ಒಂದೇ ವರ್ಷದಲ್ಲಿ ಮುಖ್ಯಮಂತ್ರಿ ಎರಡನೇ ಬಾರಿ ಸಮನ್ಸ್ ಪಡೆದುಕೊಂಡಂತಾಗುತ್ತದೆ. ಇತ್ತೀಚೆಗಷ್ಟೇ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಕುರಿತು ವಿಶೇಷ ತನಿಖಾ ದಳ (ಸಿಟ್) ಮೋದಿಯವರನ್ನು ವಿಚಾರಣೆ ನಡೆಸಿತ್ತು.

2002ರಲ್ಲಿ ನಡೆದಿದ್ದ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಸಿಟ್ ತಂಡವು ಮೋದಿಯವರನ್ನು ಮಾರ್ಚ್ 27ರಂದು ಸತತ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...
ನಿನ್ನೆಯಷ್ಟೇ ಅಮಿತ್ ಶಾ ಅವರನ್ನು ಸಾಬರಮತಿ ಜೈಲಿನಲ್ಲಿ ವಿಚಾರಣೆ ನಡೆಸಿದ್ದ ಸಿಬಿಐ, ಇಂದು ಎರಡನೇ ಸುತ್ತಿನ ವಿಚಾರಣೆ ನಡೆಸುತ್ತಿದೆ. ಆದರೆ ಆರೋಪಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ನಿನ್ನೆ ಸುಮಾರು ಆರು ಗಂಟೆಗಳ ಕಾಲ ಅಮಿತ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಸುಮಾರು 37 ಪ್ರಶ್ನೆಗಳನ್ನು ಮಾಜಿ ಸಚಿವರಲ್ಲಿ ಕೇಳಲಾಗಿತ್ತು. ಆದರೆ ತಾನು ಸೊಹ್ರಾಬುದ್ದೀನ್ ಹತ್ಯಾ ಪ್ರಕರಣದಲ್ಲಿ ಭಾಗಿಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ