ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರಿಂದ ಯುವಕರಿಗೆ ಡ್ರಗ್ಸ್; ಗಲಭೆಗೆ ಪ್ರಚೋದನೆ (stone pelting | Kashmir violent protests | heroin | India)
Bookmark and Share Feedback Print
 
ಕಾಶ್ಮೀರ ಕಣಿವೆಯ ಯುವಕರು ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟ ನಡೆಸುತ್ತಾ ಅಶಾಂತಿ ಸೃಷ್ಟಿಸುತ್ತಿರುವುದರ ಹಿಂದೆ ಅಫ್ಘಾನ್ ಹೆರಾಯಿನ್ ಮತ್ತು ಇತರ ಮಾದಕದ್ರವ್ಯಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಬಳಸುತ್ತಿರುವ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ.

ಜಮ್ಮು-ಕಾಶ್ಮೀರ ಪೊಲೀಸರು ಅಶಾಂತಿಯಲ್ಲಿ ತೊಡಗಿದ್ದ ಯುವಕರನ್ನು ಬಂಧಿಸಿದ್ದು, ಅವರಲ್ಲಿ ಕೆಲವರು ತಮ್ಮ ವಿಚಾರಣೆ ಸಂದರ್ಭದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ದೇಶ ವಿರೋಧಿ ಶಕ್ತಿಗಳು ಅಶಾಂತಿ ಸೃಷ್ಟಿಸಲು ಡ್ರಗ್ಸ್ ಬಳಸುತ್ತಿರುವುದು ಇದರಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀದಿಗಳಲ್ಲಿ ಹಿಂಸಾಚಾರ ನಿರತರಾಗಿರಬೇಕು ಮತ್ತು ಕಲ್ಲುತೂರಾಟ ನಡೆಸಬೇಕು ಎಂಬ ಪ್ರತಿಫಲದ ಷರತ್ತಿನ ಮೇಲೆ ಸ್ಥಳೀಯ ಡ್ರಗ್ಸ್ ಪೂರೈಕೆದಾರನೊಬ್ಬ ಅಫ್ಘಾನ್‌ನಲ್ಲಿನ ಹೆರಾಯಿನ್ ಮತ್ತು ಇತರ ಡ್ರಗ್ಸ್‌ಗಳನ್ನು ಸ್ಥಳೀಯ ಯುವಕರಿಗೆ ಒದಗಿಸುತ್ತಿದ್ದ ಎಂಬುದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದು ಬಹಿರಂಗವಾಗುತ್ತಿದ್ದಂತೆ ಪೊಲೀಸರು ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಬಹುತೇಕ ಮಂದಿ ದಾಳಿಗೂ ಮೊದಲು ತಪ್ಪಿಸಿಕೊಂಡಿದ್ದು, ಶ್ರೀನಗರದ ಖನ್ಯಾರ್ ಬಳಿಯ ಓರ್ವ ವ್ಯಾಪಾರಿ ಶೆಜಾದ್ ಎಂಬಾತ ಮಾತ್ರ ಸೆರೆ ಸಿಕ್ಕಿದ್ದಾನೆ.

ಯುವಕರಿಗೆ ಸಿಗರೇಟುಗಳಲ್ಲಿ ಚರಸ್ ಸೇರಿದಂತೆ ಇತರ ಸ್ಟೀರಾಯ್ಡ್‌ಗಳು ಮತ್ತು ಡ್ರಗ್ಸ್‌ಗಳನ್ನು ನೀಡಲಾಗುತ್ತಿರುವುದು ಕೂಡ ನಮ್ಮ ಗಮನಕ್ಕೆ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಭಯೋತ್ಪಾದಕರಾಗಿದ್ದು, ನಂತರ ತಮ್ಮ ಶಿಕ್ಷೆಯನ್ನು ಪೂರೈಸಿದ ನಂತರ ನಿರುದ್ಯೋಗಿಗಳಾಗಿರುವ ಯುವಕರು ಕೂಡ ಶ್ರೀನಗರದ ಹೊರವಲಯದಲ್ಲಿದ್ದಾರೆ. ಆ ಯುವಕರು ಪ್ರತ್ಯೇಕತಾವಾದಿ ಸಂಘಟನೆಗಳು ಸೇರಿದಂತೆ ಇತರ ಭಾರತ ವಿರೋಧಿ ಶಕ್ತಿಗಳ ಡ್ರಗ್ಸ್ ಆಮಿಷಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಖಚಿತ ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಒಂದು ದಾಳಿಯಲ್ಲಿ ನೂರಾರು ಸಿರಿಂಜುಗಳನ್ನು, ಹೆರಾಯಿನ್ ಸೀಸೆಗಳನ್ನು, ಸ್ಟೀರಾಯ್ಡ್‌ ಮತ್ತು ನೋವು ನಿವಾರಕ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸುವ ಮೂಲಕ ಭಾರತದ ಆಡಳಿತದಲ್ಲಿ ಜನತೆ ನಲುಗುತ್ತಿದ್ದಾರೆ ಎಂಬ ಭಾವನೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಕಣಿವೆ ರಾಜ್ಯವನ್ನು ಪಾಕಿಸ್ತಾನದ ತೆಕ್ಕೆಗೆ ಸೇರಿಸಲು ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳು ಯತ್ನಿಸುತ್ತಿದ್ದು, ಅದಕ್ಕಾಗಿ ವಿವಿಧ ತಂತ್ರಗಳನ್ನು ಸ್ಥಳೀಯ ಯುವಕರ ಮೇಲೆ ಪ್ರಯೋಗಿಸುತ್ತಾ ಬಂದಿವೆ.
ಸಂಬಂಧಿತ ಮಾಹಿತಿ ಹುಡುಕಿ