ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ಅಧಿಕಾರಿಗಳು ಚುನಾವಣಾ ಕಣಕ್ಕೆ: ಮೋದಿ ಲೇವಡಿ (Narendra Modi | Congress | CBI | Amit Shah)
Bookmark and Share Feedback Print
 
ಗುಜರಾತಿನಲ್ಲಿನ ಮುಂಬರುವ ಚುನಾವಣೆಗಳಲ್ಲಿ ಸಿಬಿಐ ಅಧಿಕಾರಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ ಎನ್ನುವ ಮೂಲಕ ಸಿಬಿಐ ಅಂದರೆ 'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ಎಂದು ಆರೋಪಿಸುತ್ತಾ ಬಂದಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಮತ್ತೊಂದು ಸುತ್ತಿನ ವಾಕ್ ಪ್ರಹಾರ ನಡೆಸಿದ್ದಾರೆ.

ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯೆಗೆ ಸಂಬಂಧಿಸಿದಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾರನ್ನು ಸಿಬಿಐ ಬಂಧಿಸಿದ ನಂತರ ಮೊದಲ ಬಾರಿ ಸಾರ್ವಜನಿಕ ಭಾಷಣ ಮಾಡಿರುವ ಮೋದಿ, ಕಾಂಗ್ರೆಸ್ ಮತ್ತು ಸಿಬಿಐ ವಿರುದ್ಧ ತೀಕ್ಷ್ಣ ಟೀಕೆಗಳನ್ನು ಮಾಡಿದರು.
PTI

ಮುಂಬರುವ ಗುಜರಾತಿನ ಸ್ಥಳೀಯ ಚುನಾವಣೆಗಳಲ್ಲಿ ನಾವು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಾಣುವುದು ಬಹುತೇಕ ಸಾಧ್ಯವಿಲ್ಲ. ಯಾಕೆಂದರೆ ಅವರ ಸ್ಥಾನವನ್ನು ಸಿಬಿಐ ಅಧಿಕಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅವರನ್ನೇ ಚುನಾವಣಾ ಕಣಕ್ಕೂ ಕಾಂಗ್ರೆಸ್ ಇಳಿಸಬಹುದು. ಆ ಪಕ್ಷಕ್ಕೆ ಮುಂಬರುವ ನಗರಪಾಲಿಕೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಸರಕಾರದ ವಿರುದ್ಧ ಜನತೆಯ ಬಳಿ ಹೋಗಲು ಯಾವುದೇ ವಿಷಯಗಳಿಲ್ಲ ಎಂದಿದ್ದಾರೆ.

ಅಹಮದಾಬಾದ್‌ನ ಇಶಾನ್‌ಪುರ್‌ನಲ್ಲಿನ ಅಹಮದಾಬಾದ್ ಮಹಾನಗರ ಪಾಲಿಕೆಯ 'ಭೈರೋನ್ ಸಿಂಗ್ ಶೇಖಾವತ್' ಮೇಲ್ಸೇತುವೆಯನ್ನು ಉದ್ಘಾಟಿಸಿದ ನಂತರ ಮೋದಿ ಮಾತನಾಡುತ್ತಿದ್ದರು.

ನಾವು, ಗುಜರಾತಿ ಜನರು ಯಾರನ್ನೂ ರೇಗಿಸುವವರಲ್ಲ. ಆದರೆ ನಮ್ಮನ್ನು ಯಾರಾದರೂ ಕಿಚಾಯಿಸಿದರೆ ಖಂಡಿತಾ ಅವರನ್ನು ಸುಮ್ಮನೆ ಬಿಡುವ ಜಾಯಮಾನವೂ ನಮ್ಮದಲ್ಲ ಎಂದಿರುವ ಗುಜರಾತ್ ಮುಖ್ಯಮಂತ್ರಿ, ಸಿಬಿಐ ಸಹಕಾರವಿಲ್ಲದೆ ಕಾಂಗ್ರೆಸ್ ಎದುರು ಕನಿಷ್ಠ ಭರವಸೆಯೂ ಇಲ್ಲ; ಗುಜರಾತಿ ಜನರನ್ನು ಗೆಲ್ಲಲು ಕಾಂಗ್ರೆಸ್‌ಗೆ ಯಾವುದೇ ವಿಚಾರಗಳಿಲ್ಲ ಎಂಬುದು ಕಳೆದ ವಾರದ ಬೆಳವಣಿಗೆಗಳಿಂದ (ಅಮಿತ್ ಬಂಧನ) ನಿಜವಾಗಿದೆ ಎಂದರು.

ಅಭಿವೃದ್ಧಿಯ ಹರಿಕಾರ ಎಂದೇ ಹೆಸರು ಪಡೆದುಕೊಂಡಿರುವ ಮೋದಿ ದೆಹಲಿಯ ಕಾಂಗ್ರೆಸ್ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಕಳೆದ ನಾಲ್ಕು ವರ್ಷಗಳಿಂದ ದೆಹಲಿ ಸರಕಾರ ಸಿದ್ಧತೆ ನಡೆಸುತ್ತಿದ್ದರೂ, ಇನ್ನೂ ಪೂರ್ತಿಗೊಂಡಿಲ್ಲ. ಇದೇ ಕಾರ್ಯವನ್ನು ಅಹಮದಾಬಾದ್ ಮಹಾನಗರ ಪಾಲಿಕೆಗೆ ಏನಾದರೂ ನೀಡುತ್ತಿದ್ದರೆ, ಅದನ್ನು ಕೇವಲ ಎರಡೇ ವರ್ಷಗಳಲ್ಲಿ ಪೂರ್ತಿಗೊಳಿಸುತ್ತಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ