ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತಲ್ಲಿ ಸಿಬಿಐಗೆ ವಿಚಾರಣೆ ನಡೆಸಲು ಇಷ್ಟವಿಲ್ಲವಂತೆ! (CBI | Gujarat | Sohrabuddin Sheikh | Amit Shah)
Bookmark and Share Feedback Print
 
ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದ ಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಕೇಂದ್ರೀಯ ತನಿಖಾ ದಳವು, ಪ್ರಕರಣವನ್ನು ಗುಜರಾತಿನಿಂದ ಹೊರಗಡೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದೆ.

ಗುಜರಾತಿನಲ್ಲಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ರಾಜ್ಯದ ಹೊರಗಡೆ ಪ್ರಕರಣವನ್ನು ಸ್ಥಳಾಂತರಗೊಳಿಸಬೇಕು ಎಂದು ಸಿಬಿಐ ತನ್ನ ಸ್ಟೇಟಸ್ ರಿಪೋರ್ಟ್‌ನಲ್ಲಿ ಮನವಿ ಮಾಡಿದೆ ಎಂದು ಟಿವಿ ವರದಿಗಳು ಹೇಳಿವೆ.

ಅದೇ ಹೊತ್ತಿಗೆ ಸೊಹ್ರಾಬುದ್ದೀನ್ ಕೊಲೆಯ ಸಾಕ್ಷಿ ತುಳಸೀರಾಂ ಪ್ರಜಾಪತಿಯನ್ನು ಕೊಂದು ಹಾಕಿರುವ ಪ್ರಕರಣವನ್ನು ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಆಗಸ್ಟ್ 7ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ವಿಚಾರಣೆಗೆ ಸಹಕರಿಸುತ್ತಿಲ್ಲ, ಆದರೆ ಅವರನ್ನು ಸೂಕ್ತವಾಗಿ ವಿಚಾರಣೆ ನಡೆಸುವ ಅಗತ್ಯವಿದೆ. ಅದಕ್ಕಾಗಿ ಪ್ರಕರಣವನ್ನು ರಾಜ್ಯದಿಂದ ಹೊರಗಡೆ ಸ್ಥಳಾಂತರಿಸುವಂತೆ ಸಿಬಿಐ ಮನವಿ ಮಾಡಿಕೊಂಡಿದೆ.

ಸಿಬಿಐ ಕೇಳುವ ಬಹುತೇಕ ಪ್ರಶ್ನೆಗಳಿಗೆ ಅಮಿತ್ ಶಾ ಅವರು ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ. ನನಗೆ ನೆನಪಿಲ್ಲ, ನನಗೆ ಗೊತ್ತಿಲ್ಲ ಎಂಬಂತಹ ಉತ್ತರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಗುಜರಾತಿನ ಮೊದಲ ಐಪಿಎಸ್ ಮಹಿಳಾ ಅಧಿಕಾರಿ ಗೀತಾ ಜೋಹ್ರಿಯವರಿಗೆ ಪ್ರಕರಣ ಸಂಬಂಧ ಸಿಬಿಐ ಸಮನ್ಸ್ ಜಾರಿ ಮಾಡಿತ್ತು.

ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಿಟ್ ತಂಡದಲ್ಲಿದ್ದ ಗೀತಾ, ಆಗಸ್ಟ್ 10ರಂದು ಸಿಬಿಐ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಅದೇ ರೀತಿ ಗುಜರಾತ್ ಮಾಜಿ ಡಿಜಿಪಿ ಪಿ.ಸಿ. ಪಾಂಡೆಯವರಿಗೂ ಸಮನ್ಸ್ ನೀಡಲಾಗಿದ್ದು, ಆಗಸ್ಟ್ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ