ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೌಚಾಲಯ ಕ್ಲೀನ್ ಮಾಡೆಂದ ಶಾಲೆ; ಬಾಲಕಿ ಆತ್ಮಹತ್ಯೆ (clean school toilet | Saharanpur | Lakshmi | Reena)
Bookmark and Share Feedback Print
 
ಶುಲ್ಕ ಪಾವತಿಸದ ಬಾಲಕಿಗೆ ಶಾಲೆ ನೀಡಿದ ಶಿಕ್ಷೆಯಿಂದ ತೀವ್ರ ಅಪಮಾನಗೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯಿದು. ಸ್ವತಃ ಪ್ರಾಂಶುಪಾಲನ ಚಿತಾವಣೆಯಿಂದ ಮೂರನೇ ತರಗತಿಯ ಪುಟ್ಟ ಬಾಲಕಿ ಶವವಾಗಿ ಹೋಗಿದ್ದಾಳೆ.

ಉತ್ತರ ಪ್ರದೇಶದ ಸಹಾರಾಂಪುರ್ ಜಿಲ್ಲೆಯ ಬಾಲ್ಸುವಾ ಗ್ರಾಮದಲ್ಲಿ ನಡೆದ ಘಟನೆಯಿದು. ಇಲ್ಲಿನ ದಿನಗೂಲಿ ಕಾರ್ಮಿಕ ದಂಪತಿಯ 13ರ ಹರೆಯದ ಪುತ್ರಿ ಲಕ್ಷ್ಮಿ ಶಾಲೆಯ ಶುಲ್ಕ ಪಾವತಿ ಮಾಡಿರಲಿಲ್ಲ. ಅದಕ್ಕೆ ಕಾರಣವೂ ಇತ್ತು.
ರೀನಾ ತನ್ನ ಮಗನ ಜತೆ...
PR

ತೀರಾ ಬಡ ಕುಟುಂಬದಿಂದ ಬಂದ ಹುಡುಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಭಾರೀ ಸಾಧನೆ ಮೆರೆಯುತ್ತಿದ್ದುದನ್ನು ಕಂಡು ಜಿಲ್ಲಾಡಳಿತವು ಮೆಚ್ಚಿಕೊಂಡಿತ್ತು. ಇದೇ ಕಾರಣದಿಂದ ಆಕೆಯ ಕೈಯಿಂದ ಶುಲ್ಕ ಪಡೆಯದಂತೆ ಖಾಸಗಿ ಶಾಲೆಯೊಂದಕ್ಕೆ ಸೂಚನೆ ನೀಡಲಾಗಿತ್ತು.

ಆದರೆ ಇದು ಒಳಗಿಂದೊಳಗೆ ಶಾಲೆಯ ಮಾಲಕ ಹಾಗೂ ಪ್ರಾಂಶುಪಾಲ ರಾಜೇಶ್ ಪವಾರ್ ಎಂಬಾತನಿಗೆ ನುಂಗಲಾರದ ತುತ್ತಾಗಿತ್ತು. ಉಚಿತವಾಗಿ ಶಿಕ್ಷಣ ನೀಡಬೇಕಲ್ಲ ಎಂದು ಕುದಿಯುತ್ತಿದ್ದ ಆತ, ಲಕ್ಷ್ಮಿಯ ತಾಯಿ ರೀನಾರನ್ನು ಶಾಲೆಯ ಶೌಚಾಲಯ ಶುಚಿಗೊಳಿಸುವಂತೆ ಹೇಳಿದ್ದ.

ಆದರೆ ಲಕ್ಷ್ಮಿಯ ತಾಯಿ ಇದಕ್ಕೆ ನಿರಾಕರಿಸಿದ್ದರು. ಆದರೆ ಪ್ರತಿಯಾಗಿ ಬೆದರಿಕೆ ಹಾಕಿದ್ದ ಪವಾರ್, ಲಕ್ಷ್ಮಿ ಇದೇ ಶಾಲೆಯಲ್ಲಿ ಮುಂದುವರಿಯಬೇಕಾದರೆ ನೀನು ಬಂದು ಇಲ್ಲಿ ಶೌಚಾಲಯ ತೊಳೆಯಬೇಕು. ನಿನಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ವೇತನವನ್ನು ನೀಡುತ್ತೇವೆ. ತಪ್ಪಿದಲ್ಲಿ ಶುಲ್ಕವನ್ನು ದ್ವಿಗುಣಗೊಳಿಸಲಾಗುತ್ತದೆ ಎಂದಿದ್ದ.

ಇದರಿಂದ ತೀವ್ರವಾಗಿ ನೊಂದುಕೊಂಡ ಬಾಲಕಿ ಲಕ್ಷ್ಮಿ ಸ್ವತಃ ತಾನೇ ಶೌಚಾಲಯ ಶುಚಿಗೊಳಿಸುವುದಾಗಿ ಪ್ರಾಂಶುಪಾಲರಲ್ಲಿ ಹೇಳಿದ್ದಳು. ಅದರಂತೆ ಶಾಲಾ ಅವಧಿ ಮುಕ್ತಾಯವಾದ ನಂತರ ಬಾಲಕಿ ಕೆಲಸ ಮಾಡುತ್ತಿದ್ದಳು.

ಆದರೆ ಒಂದು ದಿನ ಶಾಲೆಯ ಆವರಣದಲ್ಲಿದ್ದ ನಾಯಿಯ ಶೌಚವನ್ನೂ ತೆಗೆಯುವಂತೆ ಪವಾರ್ ಒತ್ತಡ ಹೇರಿದ್ದ. ಇದನ್ನೆಲ್ಲ ಗಮನಿಸಿದ್ದ ಆಕೆಯ ಸಹಪಾಠಿಗಳು ಹೀಯಾಳಿಕೆಯ ಮಾತುಗಳನ್ನಾಡಲು ತೊಡಗಿದ್ದರು. ನನ್ನ ಶೂಗಳನ್ನು ಕ್ಲೀನ್ ಮಾಡು, ಅದು ಮಾಡು, ಇದು ಮಾಡೆಂದು ಅವಮಾನ ಮಾಡುತ್ತಿದ್ದರು.

ಸುಮಾರು ಒಂಬತ್ತು ದಿನಗಳ ಕಾಲ ತನ್ನ ಶಾಲೆಯ ಹಿಂಸೆಯನ್ನು ಸಹಿಸಿಕೊಂಡ ಬಾಲಕಿ ಕೊನೆಗೂ ತೆಗೆದುಕೊಂಡ ನಿರ್ಧಾರ ಆತ್ಮಹತ್ಯೆ.

ಶುಲ್ಕಕ್ಕೆ ಹಣವಿರಲಿಲ್ಲ...
ನನ್ನ ಮಗಳ ಶಾಲೆಯ ಶುಲ್ಕವನ್ನು ಪಾವತಿಸುವಷ್ಟು ಹಣ ನನ್ನಲ್ಲಿ ಇರಲಿಲ್ಲ. ಆದರೆ ಅದಕ್ಕಾಗಿ ಶೌಚಾಲಯ ಶುಚಿಗೊಳಿಸಬೇಕೆಂಬ ಶಾಲೆಯ ಬೇಡಿಕೆಗೆ ನಾನು ಮಣಿದಿರಲಿಲ್ಲ. ಮಗಳು ನನ್ನ ಮಾತು ಕೇಳದೆ, ಶಾಲೆ ಮುಗಿದ ನಂತರ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದಳು. ಶಾಲೆಯ ಆಡಳಿತವು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಮಗಳನ್ನು ಕಳೆದುಕೊಂಡಿರುವ ತಾಯಿ ರೀನಾ ದುಃಖಿತರಾಗಿ ಹೇಳಿಕೊಂಡಿದ್ದಾರೆ.

ಶಾಲೆಯಿಂದ ಇಷ್ಟೊಂದು ಅನ್ಯಾಯಗಳು ನಡೆಯುತ್ತಿದ್ದರೂ, ಸಂಬಂಧಪಟ್ಟವರು ಸುಮ್ಮನಿದ್ದರು. ಇದೀಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನಗೆ ನ್ಯಾಯ ಒದಗಿಸಿ ಎಂದು ರೀನಾ ಅಲವತ್ತುಕೊಂಡಿದ್ದಾರೆ.

ಪ್ರಾಂಶುಪಾಲನ ಉದ್ಧಟತನ...
ಘಟನೆಗೆ ಕನಿಷ್ಠ ವಿಷಾದ ವ್ಯಕ್ತಪಡಿಸುವ ಗೋಜಿಗೂ ಪ್ರಾಂಶುಪಾಲ ಪವಾರ್ ಮುಂದಾಗಿಲ್ಲ. ಬದಲಿಗೆ ಉದ್ಧಟತನ ಮೆರೆದಿದ್ದಾನೆ.

ನಾವು ಯಾವತ್ತೂ ಟಾಯ್ಲೆಟ್ ಶುಚಿಗೊಳಿಸವು ಬಾಲಕಿಗೆ ಹೇಳಿರಲಿಲ್ಲ. ಆಕೆಯ ತಾಯಿಯೇ ಹೇಳಿರಬಹುದು. ಅದು ನಮಗೆ ಹೇಗೆ ಗೊತ್ತಾಗಬೇಕು ಎಂದು ಪವಾರ್ ಪ್ರಶ್ನಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ