ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಕಣಿವೆಯಲ್ಲಿ ಮತ್ತೆ ಹಿಂಸಾಚಾರ; ಐವರು ಬಲಿ (Kashmir violence | Srinagar | security forces | India)
Bookmark and Share Feedback Print
 
ಭಾರೀ ಪ್ರತಿಭಟನೆ, ಕಲ್ಲುತೂರಾಟಗಳ ಹಿನ್ನೆಲೆಯಲ್ಲಿ ರಕ್ಷಣಾ ಪಡೆಗಳು ಮತ್ತು ಸ್ಥಳೀಯರ ನಡುವಿನ ಘರ್ಷಣೆಯಲ್ಲಿ ಐವರು ಸಾವನ್ನಪ್ಪಿದ್ದು, ಕಾಶ್ಮೀರ ಕಣಿವೆಯ ಪ್ರಮುಖ ನಗರಗಳಲ್ಲಿ ಶನಿವಾರ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.

ಜಮ್ಮು-ಕಾಶ್ಮೀರದ ಹಲವೆಡೆ ಇಂತಹ ಹಿಂಸಾಪೂರಿತ ಪ್ರತಿಭಟನೆಗಳು ನಡೆಯುತ್ತಿರುವ ಬಗ್ಗೆ ವರದಿಗಳು ಬಂದಿವೆ.
PTI

ನಿನ್ನೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ 70 ಮಂದಿಯಲ್ಲಿ ಇಬ್ಬರು ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರನ್ನು ಬಾರಾಮುಲ್ಲಾ ಜಿಲ್ಲೆಯ ಮೊಹಮ್ಮದ್ ರಫೀಕ್ ಮತ್ತು ಮೊಹಮ್ಮದ್ ಸಿದ್ಧಿಕಿ ಎಂಬ 30ರ ಹರೆಯದ ಇಬ್ಬರು ಯುವಕರು ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣ್ ಎಂಬಲ್ಲಿನ ಕ್ರೀರಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ್ದ 17 ಹರೆಯದ ಯುವತಿ ಗುಲ್ಸಾನಾ ಎಂಬಾಕೆ ಕೂಡ ಗುಂಡಿಗೆ ಬಲಿಯಾಗಿದ್ದಾಳೆ. ನಿನ್ನೆಯಷ್ಟೇ ಇಬ್ಬರು ಯುವಕರು ಬಲಿಯಾಗಿದ್ದರು. ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ ಎರಡು ದಿನಗಳಲ್ಲಿ ಐದಕ್ಕೇರಿದೆ ಎಂದು ವರದಿಗಳು ಹೇಳಿವೆ.

ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ನಾಗರಿಕರನ್ನು ಮನೆ ಬಿಟ್ಟು ಹೊರಗೆ ಬರದಂತೆ ಸೂಚಿಸಲಾಗಿದೆ.

ಮಾಧ್ಯಮದ ಮಂದಿಗೆ ನೀಡಲಾಗಿದ್ದ ಕರ್ಫ್ಯೂ ಪಾಸ್‌ಗಳನ್ನು ಕೂಡ ರದ್ದು ಪಡಿಸಲಾಗಿದೆ. ಈ ರೀತಿ ಕರ್ಫ್ಯೂ ಪಾಸ್‌ಗಳನ್ನು ಅಧಿಕಾರಿಗಳು ರದ್ದುಗೊಳಿಸುತ್ತಿರುವುದು ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿ. ಶ್ರೀನಗರದಲ್ಲಿ ಸೇನೆಯನ್ನು ನಿಯೋಜಿಸಿದ್ದ ಜುಲೈ ಆರರಂದು ಕೂಡ ಪಾಸ್‌ಗಳನ್ನು ಅಮಾನತುಗೊಳಿಸಲಾಗಿತ್ತು.

ನಗರದ ಹಲವೆಡೆ ರಕ್ಷಣಾ ಪಡೆಗಳ ಮೇಲೆ ಕಲ್ಲು ತೂರಾಟದಲ್ಲಿ ನಿರತರಾಗಿದ್ದ ಜನರ ಮೇಲೆ ನಿನ್ನೆ ಗುಂಡು ಹಾರಿಸಲಾಗಿತ್ತು. ಇಲ್ಲಿನ ಹಲವು ಪೊಲೀಸ್ ಠಾಣೆಯ ಮೇಲೂ ನಾಗರಿಕರ ಗುಂಪುಗಳು ದಾಳಿ ನಡೆಸಿದ್ದವು.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಿಂದ 55 ಕಿಲೋ ಮೀಟರ್ ದೂರದಲ್ಲಿರುವ ಸೋಪೋರೆ ಎಂಬಲ್ಲಿನ ಅರಾಂಪುರ ಗ್ರಾಮದಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಗುಂಪಿನ ಮೇಲೆ ರಕ್ಷಣಾ ಪಡೆಗಳು ಶುಕ್ರವಾರ ಹಾರಿಸಿದ ಗುಂಡಿಗೆ ಶೌಕತ್ ಅಹ್ಮದ್ ಛೋಪನ್ ಮತ್ತು ಮೊಹಮ್ಮದ್ ಅಹ್ಸಾನ್ ಗನಾಯ್ ಎಂಬಿಬ್ಬರು ಬಲಿಯಾಗಿದ್ದರು. ಘಟನೆಯಲ್ಲಿ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ