ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಹತ್ಯೆಗೆ ಸಿಪಿಎಂ ಆತ್ಮಾಹುತಿ ದಳ ರಚನೆ: ಮಮತಾ (CPM | suicide squad | Trinamool Congress | Mamata Banerjee)
Bookmark and Share Feedback Print
 
ರಾಜಕೀಯವಾಗಿ ತನ್ನ ವಿರುದ್ಧ ಹೋರಾಡಲು ಅಸಮರ್ಥವಾಗಿರುವ ಸಿಪಿಎಂ ನನ್ನನ್ನು ಮುಗಿಸಲು ಸಂಚು ರೂಪಿಸಿದ್ದು, ಅದಕ್ಕಾಗಿ ಆತ್ಮಹತ್ಯಾ ದಳವೊಂದನ್ನು ರಚಿಸುವ ಬಗ್ಗೆ ಮಾತುಕತೆ ನಡೆಸಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಸ್ಥಾಪಿತ ಹಿತಾಸಕ್ತಿಗಳನ್ನು ಹೊಂದಿರುವ ಸಿಪಿಎಂ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು -- ನಾನು ಎಲ್ಲಾ ಪಕ್ಷಗಳ ಬಗ್ಗೆ ಮಾತನಾಡುತ್ತಿಲ್ಲ, ಅವುಗಳು ನನ್ನನ್ನು ಕೊಂದು ಹಾಕಲು ಪಿತೂರಿ ನಡೆಸುವುದಕ್ಕಾಗಿ ಸಭೆಯೊಂದನ್ನು ನಡೆಸಿವೆ. ಇಂತಹ ಸಭೆಯೊಂದು ನಡೆದಿದೆ ಎಂಬುದನ್ನು ನೀವು ವಿಚಾರಣೆ ನಡೆಸಿದರೆ ತಿಳಿಯುತ್ತದೆ ಎಂದು ಕೊಲ್ಕತ್ತಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬ್ಯಾನರ್ಜಿ ಹೇಳಿದ್ದಾರೆ.

ತನ್ನನ್ನು ಹತ್ಯೆಗೈಯುವ ಸಲುವಾಗಿ ಆತ್ಮಹತ್ಯಾ ದಳವೊಂದನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಈ ಸಭೆಯಲ್ಲಿ ಸಿಪಿಎಂ ಚರ್ಚೆ ನಡೆಸಿದೆ. ಅದಕ್ಕಾಗಿ ಅಗತ್ಯವಿರುವ ಹಣವನ್ನು ಪಾವತಿ ಮಾಡಲಾಗುತ್ತದೆ ಎಂದು ಅದು ಭರವಸೆ ನೀಡಿದೆ ಎಂದೂ ಅವರು ಆರೋಪಿಸಿದರು.

ಸಿಪಿಎಂ ಸಚಿವರು ಮತ್ತು ನಾಯಕರು ನನ್ನ ಚಲನವಲನಗಳನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ನನ್ನ ಕಾರ್ಯಕ್ರಮಗಳ ಬಗ್ಗೆ ಅವರು ವಿಚಾರಣೆ ನಡೆಸುತ್ತಿದ್ದಾರೆ. ನನ್ನನ್ನು ಕೊಂದು ಹಾಕುವ ಪಿತೂರಿಯೊಂದು ಪ್ರಗತಿಯಲ್ಲಿದೆ ಎಂದು ಆರೋಪಿಸಿರುವ ಮಮತಾ, ಇದು ನ್ಯಾಯಯುತ ರಾಜಕೀಯವೇ ಎಂದು ಪ್ರಶ್ನಿಸಿದ್ದಾರೆ.

ಅವರು ಧೈರ್ಯವಿದ್ದರೆ ನನ್ನ ವಿರುದ್ಧ ರಾಜಕೀಯ ಹೋರಾಟ ನಡೆಸಲಿ. ಹೆದರು ಪುಕ್ಕಲರವರು ಎಂದರು.

ತನ್ನನ್ನು ಮಾತ್ರವಲ್ಲದೆ ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಶುಭೇಂದು ಅಧಿಕಾರಿಯವರನ್ನು ಕೂಡ ಮುಗಿಸಲು ಸಿಪಿಎಂ ಆತ್ಮಹತ್ಯಾ ದಳವನ್ನು ರಚಿಸಿದೆ ಎಂದಿದ್ದಾರೆ.

ಇಂತಹ ಆತ್ಮಾಹುತಿ ದಳಗಳನ್ನು ರಚಿಸಲಾಗಿದೆ ಎಂಬ ಮಾಹಿತಿ ನಿಮಗೆ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ, ಪಶ್ಚಿಮ ಮಿಡ್ನಾಪುರದಲ್ಲಿ ಸಶಸ್ತ್ರ ಪಡೆಗಳನ್ನೊಳಗೊಂಡ ಶಿಬಿರಗಳನ್ನು ಸಿಪಿಎಂ ಯಾಕೆ ನಿರ್ಮಿಸುತ್ತಿದೆ? ಯಾಕೆಂದರೆ ಅದು ನನ್ನನ್ನು ಕೊಲ್ಲಲು ಎಂದರು.
ಸಂಬಂಧಿತ ಮಾಹಿತಿ ಹುಡುಕಿ