ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನರೇಂದ್ರ ಮೋದಿ ಹೇಳಿಕೆಗಳು ಕೇವಲ ನಾಟಕ: ಕಾಂಗ್ರೆಸ್ (Congress | Narendra Modi | CBI | Gujarat)
Bookmark and Share Feedback Print
 
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣವನ್ನು ಗುಜರಾತಿನಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂಬ ಸಿಬಿಐ ಮನವಿಯ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ದಾಳಿ ಮಾಡುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯದ್ದು ಕೇವಲ ನಾಟಕ ಎಂದು ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದೆ.

ಗೋದ್ರಾ ಹಿಂಸಾಚಾರಕ್ಕೆ ಸಂಬಂಧಪಟ್ಟ ನೂರಾರು ಪ್ರಕರಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಮೋದಿಗೆ ಅವಮಾನವಾಗಿರಲಿಲ್ಲವೇ ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದರು.

ಪ್ರಕರಣದ ವರ್ಗಾವಣೆಗಾಗಿ ಸುಪ್ರೀಂ ಕೋರ್ಟಿನಲ್ಲಿ ಸಿಬಿಐ ಮಾಡಿಕೊಂಡಿರುವ ಮನವಿಯನ್ನು ಸಮರ್ಥಿಸಿಕೊಂಡಿರುವ ಅವರು, ಗುಜರಾತ್ ಸರಕಾರದ ಕಾನೂನು ಕ್ರಮ ಜರುಗಿಸುವ ಸಂಸ್ಥೆಯು ವಿಶ್ವಾಸವನ್ನು ಕಳೆದುಕೊಂಡ ನಂತರ ಮೋದಿಯೀಗ ಗುಜರಾತ್ ನ್ಯಾಯಾಂಗಕ್ಕೆ ಅಪಮಾನವಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.

ಮೋದಿ ಸಮರ್ಥನೆಗೆ ಹೆಸರಾದವರು ಎಂದೂ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ. ಇದು ಪ್ರಕರಣವನ್ನು ಭಾವ ತೀವ್ರತೆಗೆ ಕೊಂಡೊಯ್ಯುವ ನಾಟಕವಲ್ಲದೆ ಮತ್ತೇನಲ್ಲ. ನಿಜವಾಗಿಯೂ ಗುಜರಾತಿನ ಜನತೆಯ ಮೇಲೆ ಬಹುದೊಡ್ಡ ಅಪಮಾನ ಸುರಿಯಲ್ಪಟ್ಟಿದ್ದು ಗೋದ್ರಾ ಗಲಭೆಯ ನೂರಾರು ಪ್ರಕರಣಗಳು ಮಹಾರಾಷ್ಟ್ರಕ್ಕೆ ವರ್ಗಾವಣೆಗೊಂಡದ್ದು ಎಂದು ನುಡಿದರು.

ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ಅವರು ಕಾನೂನಿನ ಒತ್ತಡವನ್ನು ತರಲು ಯತ್ನಿಸುತ್ತಿದ್ದಾರೆ ಎಂದು ಗುಜರಾತಿನಲ್ಲಿ ಪ್ರಕರಣ ಮೂರು ವರ್ಷಗಳ ಕಾಲ ವಿಚಾರಣೆ ನಡೆದ ನಂತರ ಸಿಬಿಐಗೆ ಸುಪ್ರೀಂ ಕೋರ್ಟ್ ಹಸ್ತಾಂತರಿಸಿದ ಎನ್‌ಕೌಂಟರ್ ಪ್ರಕರಣದ ಕುರಿತು ಸಿಂಘ್ವಿಯವರು ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

ಗುಜರಾತ್ ರಾಜ್ಯ ಸರಕಾರವು ಪ್ರಕರಣದ ದಾರಿ ತಪ್ಪಿಸುತ್ತಿದೆ ಮತ್ತು ಪ್ರಾಸಿಕ್ಯೂಷನ್ ಉದ್ದೇಶವನ್ನು ತಿರುಚುತ್ತಿದೆ ಎಂಬುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್, ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಬಾರದು ಎಂಬ ಗುಜರಾತ್ ಪೊಲೀಸರ ಸತತ ಮನವಿಯನ್ನು ತಿರಸ್ಕರಿಸಿತ್ತು ಎಂದು ಕಾಂಗ್ರೆಸ್ ನಾಯಕ ಬೆಟ್ಟು ಮಾಡಿ ತೋರಿಸಿದರು.

ಸಿಬಿಐಯನ್ನು ಕೇಂದ್ರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೂ ಬಿಜೆಪಿ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಪ್ರಕರಣವು ಸಿಬಿಐಗೆ ವರ್ಗಾವಣೆಗೊಂಡ ಆರು ತಿಂಗಳ ನಂತರ ಬಿಜೆಪಿ ಇದನ್ನು ಹೇಳುತ್ತಿದೆ. ಬಿಜೆಪಿಯು ರಾಜಕೀಯ ಅವಕಾಶವಾದಿತನವನ್ನು ಪ್ರದರ್ಶಿಸುತ್ತಿದ್ದು, ಸುಪ್ರೀಂ ಕೋರ್ಟನ್ನು ನಿಂದಿಸುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ