ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮರ್ಯಾದಾ ಹತ್ಯೆಗಳು ಭಾರತಕ್ಕೆ ಕಳಂಕ: ಚಿದಂಬರಂ (Honour killings | Home Minister | P Chidambaram | India)
Bookmark and Share Feedback Print
 
ಮರ್ಯಾದಾ ಹತ್ಯೆಗಳನ್ನು ಖಂಡಿಸಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಇಂತಹ ಕೃತ್ಯಗಳು ಭಾರತದ ಗೌರವಕ್ಕೆ ಚ್ಯುತಿಯಾಗಿದ್ದು, ನಾಚಿಕೆಗೇಡಿನ ವಿಚಾರ ಎಂದಿದ್ದಾರೆ.

ಮರ್ಯಾದಾ ಹತ್ಯೆಗಳು ದೇಶಕ್ಕೆ ಅಪಖ್ಯಾತಿ ಮತ್ತು ಕಳಂಕವನ್ನು ತರುತ್ತಿವೆ. ದಲಿತರು ಮಧ್ಯಾಹ್ನದ ಊಟವನ್ನು ಬೇಯಿಸುತ್ತಾರೆ ಎಂಬ ಕಾರಣಕ್ಕೆ ಕೆಲವು ಕಡೆ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ ಪ್ರಕರಣಗಳೂ ಇವೆ. ಸಾಮಾಜಿಕ ಅಪರಾಧಗಳಾದ ಅಸ್ಪ್ರಶ್ಯತೆಗಳು ದೇಶದಲ್ಲಿ ಮುಂದುವರಿಯುವುದಾದರೆ ನಮ್ಮ ಶೇ.9ರ ಆರ್ಥಿಕ ಪ್ರಗತಿ ಅಥವಾ 14 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ವಿನಿಮಯಗಳ ಉಪಯೋಗವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಮಧುರೈಯಲ್ಲಿ ಕಾಂಗ್ರೆಸ್ ನಾಯಕ ಪಿ. ಕಾಕ್ಕನ್ ಅವರ ಹುಟ್ಟುಹಬ್ಬದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಚಿದಂಬರಂ, ಇಂತಹ ಸಾಮಾಜಿಕ ಪಿಡುಗುಗಳು ನಮ್ಮ ಹೃದಯದಿಂದ ದೂರವಾದ ನಂತರವಷ್ಟೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆ ಅಥವಾ ಕುಟುಂಬಗಳ ಗೌರವದ ಹೆಸರಿನಲ್ಲಿ ಕ್ರೂರ ಅಪರಾಧಗಳನ್ನು ಎಸಗಲಾಗುತ್ತಿದೆ. 21ನೇ ಶತಮಾನದಲ್ಲೂ ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದಾದರೆ ನಾವು ಅಪಮಾನದಿಂದ ತಲೆ ತಗ್ಗಿಸಲೇಬೇಕು. ಇದು ನಮಗೆ ಖಂಡಿತಾ ತಕ್ಕುದಲ್ಲ, ಯುವಜನತೆ ಇದರಿಂದ ಹೊರಗೆ ಬರಬೇಕು ಎಂದೂ ಸಚಿವರು ಕರೆ ನೀಡಿದ್ದಾರೆ.

ಅದೇ ಹೊತ್ತಿಗೆ ಇಂತಹ ಕುಖ್ಯಾತ ಸಂಸ್ಕೃತಿಯನ್ನು ಹತ್ತಿಕ್ಕಲು ರಾಜ್ಯ ಸರಕಾರಗಳಿಗೆ ಸಚಿವರು ಸಲಹೆ ನೀಡಿದ್ದಾರೆ. ಒಬ್ಬ ದಲಿತ ಯುವಕ ಮತ್ತು ಮುಸ್ಲಿಂ ಯುವತಿಯನ್ನು ಗೌರವ ಹತ್ಯೆ ಹೆಸರಿನಲ್ಲಿ ಉತ್ತರ ಪ್ರದೇಶದ ಮೀರತ್ ಸಮೀಪದ ಗ್ರಾಮವೊಂದರಲ್ಲಿ ಕೊಂದು ಹಾಕಿದ ವರದಿಯನ್ನು ಇತ್ತೀಚೆಗಷ್ಟೇ ಓದಿದ್ದೆ. ಹರ್ಯಾಣದಲ್ಲಿ ವಾರೆಂಟ್ ಅಧಿಕಾರಿಯೊಬ್ಬರ ಹತ್ಯೆ, ದೆಹಲಿಯಲ್ಲಿ ವಿವಾಹಿತ ಜೋಡಿಯ ಕೊಲೆ -- ಹೀಗೆ ಇಂತಹ ಘಟನೆಗಳಿಂದ ನಾನು ತೀವ್ರ ಅಪಮಾನಕ್ಕೊಳಗಾಗಿದ್ದೇನೆ, ನೊಂದುಕೊಂಡಿದ್ದೇನೆ ಎಂದರು.

ಮರ್ಯಾದಾ ಹತ್ಯೆಗಳನ್ನು ತಡೆಗಟ್ಟಲು ನೂತನ ಕಾನೂನೊಂದನ್ನು ತರುವ ಬಗ್ಗೆ ತನ್ನದೇ ನಿಲುವನ್ನು ವ್ಯಕ್ತಪಡಿಸಿರುವ ಸಚಿವರು, ಮರ್ಯಾದಾ ಹತ್ಯೆಗಳಿಗೆ ಹೊಸ ಕಾನೂನು ರಚಿಸುವುದು ಉತ್ತರವಲ್ಲ; ಮರ್ಯಾದಾ ಹತ್ಯೆಯೆಂದರೆ ಅದು ಕೊಲೆ. ಇದನ್ನು ಕೊಲೆಯೆಂದೇ ಪರಿಗಣಿಸಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ