ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂತಾರಾಜ್ಯ ಜಲ ವಿವಾದಗಳಲ್ಲಿ ಎಚ್ಚರಿಕೆಯ ನಡಿಗೆ: ಕರುಣಾ (inter-state water disputes | Tamil Nadu | M Karunanidhi | Karnataka)
Bookmark and Share Feedback Print
 
ಅಂತಾರಾಜ್ಯ ಜಲ ವಿವಾದಗಳ ಕುರಿತು ತಮಿಳುನಾಡು ಎಚ್ಚರಿಕೆಯ ನಡೆಯನ್ನು ಅನುಸರಿಸಲಿದೆ ಎಂದಿರುವ ಮುಖ್ಯಮಂತ್ರಿ ಎಂ. ಕರುಣಾನಿಧಿ, ಜಲಕ್ಷಾಮದಿಂದ ಬಳಲುತ್ತಿರುವ ರಾಜ್ಯವು ತನ್ನ ಅಗತ್ಯಗಳಿಗಾಗಿ ನೆರೆ ರಾಜ್ಯಗಳ ಜತೆ ಸಂಪೂರ್ಣ ಸ್ವತಂತ್ರ ನಿಲುವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚೆನ್ನೈ ನಗರಕ್ಕೆ ಕುಡಿಯುವ ನೀರಿಗಾಗಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಉಪ್ಪು ನೀರು ಪರಿವರ್ತನಾ ಸ್ಥಾವರವನ್ನು ಮಿಂಜೂರ್ ಎಂಬಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪಕ್ಕದ ರಾಜ್ಯಗಳ ಜತೆ ಅತ್ಯುತ್ತಮ ಸಂಬಂಧ ಹೊಂದಿರುವುದರಿಂದ ಮಾತ್ರ ಇಂತಹ ವಿವಾದಗಳನ್ನು ಪರಿಹರಿಸಲು ಸಾಧ್ಯವಿದೆ ಎಂದರು.

ಕರ್ನಾಟಕ ಜತೆಗಿನ ಕಾವೇರಿ ಅಥವಾ ಆಂಧ್ರಪ್ರದೇಶದ ಜತೆಗಿನ ಕೃಷ್ಣ ವಿವಾದವಾಗಿರಬಹುದು, ನಾವು ಈ ರಾಜ್ಯಗಳ ಜತೆ ನೀರಿಗಾಗಿ ಸ್ವತಂತ್ರ ನಿಲುವುಗಳನ್ನು ಹೊಂದಿದ್ದೇವೆ. ಈ ರಾಜ್ಯಗಳ ಜತೆಗೆ ನಾವು ಅತ್ಯುತ್ತಮ ಸಂಬಂಧವನ್ನು ಮುಂದುವರಿಸುತ್ತಾ, ನಮ್ಮ ಹಕ್ಕುಗಳ ವಿಚಾರ ಬಂದಾಗ ಕಾನೂನು ಅವಲಂಬನೆಯನ್ನು ಆಶ್ರಯಿಸುತ್ತೇವೆ ಎಂದು ನುಡಿದರು.

ಕೇರಳದ ಜತೆ ಮುಲ್ಲಾಪೆರಿಯಾರ್, ಕರ್ನಾಟಕದ ಜತೆ ಕಾವೇರಿ ಮತ್ತು ಆಂಧ್ರಪ್ರದೇಸದ ಜತೆ ಪಾಲಾರ್ ಜಲ ವಿವಾದಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ತಮಿಳುನಾಡು ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರೂ, ಅತ್ಯುತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.

ಅದೇ ಹೊತ್ತಿಗೆ ಪಕ್ಕದ ರಾಜ್ಯಗಳು ಎದುರಿಸುವ ಸಮಸ್ಯೆಗಳನ್ನೂ ತಾನು ಅರ್ಥ ಮಾಡಿಕೊಂಡಿರುವುದಾಗಿ ಕರುಣಾನಿಧಿ ಹೇಳಿಕೊಂಡಿದ್ದಾರೆ.

ನಾವು ನೀರಿಗಾಗಿ ಆಶ್ರಯಿಸಿರುವ ರಾಜ್ಯಗಳಲ್ಲಿ ಮಳೆ ಕಡಿಮೆಯಾದರೆ ಅವರೂ ನೀರಿನ ಕೊರತೆಯನ್ನು ಎದುರಿಸುತ್ತಾರೆ. ಆಗ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ತಮಿಳುನಾಡಿಗೆ ನೀರನ್ನು ಹರಿಸಲು ಅವರಿಗೂ ಅಸಾಧ್ಯವಾಗುತ್ತದೆ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ರಾಜ್ಯ ಸರಕಾರವು ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯತ್ನವನ್ನು ನಡೆಸುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ