ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಪರಾಧ ತಡೆಗೆ ಗಲ್ಲು ಶಿಕ್ಷೆ ಬೇಕೇಬೇಕು: ಬಾಲಕೃಷ್ಣನ್ (Death penalty | NHRC | KG Balakrishnan | Ajmal Kasab)
Bookmark and Share Feedback Print
 
ಭಾರತದಲ್ಲಿ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂಬ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ಜಿ. ಬಾಲಕೃಷ್ಣನ್, ತರಹೇವಾರಿ ಅಪರಾಧಗಳು ಹೆಚ್ಚುತ್ತಿರುವ ನಮ್ಮ ದೇಶದಲ್ಲಿ ಭೀತಿಯ ಪರಿಣಾಮವನ್ನುಂಟು ಮಾಡುವ ನಿಟ್ಟಿನಲ್ಲಿ ಈ ಶಿಕ್ಷೆ ಮುಂದುವರಿಯುವ ಅಗತ್ಯವಿದೆ ಎಂದಿದ್ದಾರೆ.

ಶಿಕ್ಷೆಯ ಪರಮಾವಧಿ ಎಂದೇ ಗುರುತಿಸಲ್ಪಡುವ ಗಲ್ಲುಶಿಕ್ಷೆ ಅಪರೂಪವಾಗಿ ನೀಡಲ್ಪಡುತ್ತಿದ್ದು, ಪ್ರಮಾದವಾಗದಂತೆ ಈ ಸಂಬಂಧ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕ್ರೂರ ಕೃತ್ಯಗಳನ್ನೆಸಗಿದವರಿಗಷ್ಟೇ ಈ ಶಿಕ್ಷೆ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಅದೇ ಹೊತ್ತಿಗೆ ಇದು ತಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನಾಗಿ ಈ ಮಾತನ್ನು ಹೇಳುತ್ತಿಲ್ಲ, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಬಾಲಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ಭಾರತವು ಮರಣದಂಡನೆಯನ್ನು ರದ್ದುಗೊಳಿಸುವ ಹಂತಕ್ಕೆ ತಲುಪಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ ಗಲ್ಲು ಶಿಕ್ಷೆಯ ಕುರಿತು ಈ ಅಭಿಪ್ರಾಯ ಸರಿಯಲ್ಲ. ಆದರೆ ನನ್ನಲ್ಲಿ ವೈಯಕ್ತಿಕವಾಗಿ ನೀವು ಪ್ರಶ್ನಿಸುವಿರಾದರೆ ನನ್ನ ಪ್ರಕಾರ ನೇಣು ಶಿಕ್ಷೆ ಮುಂದುವರಿಯಬೇಕು. ಇದು ಸಮಾಜದ ಮೇಲೆ ಅಪರಾಧ ಕೃತ್ಯ ಎಸಗದಂತೆ ಭಯದ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಸಂದರ್ಶನವೊಂದರಲ್ಲಿ ನುಡಿದರು.

ಹಲವು ದೇಶಗಳು ಮರಣ ದಂಡನೆ ಶಿಕ್ಷೆಯನ್ನು ರದ್ದುಪಡಿಸಿವೆ ಎನ್ನುವುದನ್ನು ಉಲ್ಲೇಖಿಸುತ್ತಾ, ಭಾರತದಲ್ಲಿ ವಿವಿಧ ರೀತಿಯ ಕ್ರಿಮಿನಲ್ ಕೃತ್ಯಗಳು ಹೆಚ್ಚುತ್ತಲೇ ಇವೆ. ಹಾಗಾಗಿ ಅಂತಹ ಜನರನ್ನು ತಡೆಯುವ ನಿಟ್ಟಿನಲ್ಲಿ ಗಲ್ಲು ಶಿಕ್ಷೆಯ ಅಗತ್ಯವಿದೆ ಎಂದರು.

ಪ್ರಸಕ್ತ ಮರಣದಂಡನೆಗಾಗಿ ಕಾಯುತ್ತಿರುವವರಲ್ಲಿ ಸಂಸತ್ ದಾಳಿ ತಪ್ಪಿತಸ್ಥ ಅಫ್ಜಲ್ ಗುರು ಪ್ರಮುಖ. ಈತನೂ ಸೇರಿದಂತೆ ಸುಮಾರು 24 ಮಂದಿ ಮರಣ ದಂಡನೆಗಾಗಿ ಸರಕಾರದ ಅಂಕಿತಕ್ಕಾಗಿ ಕಾಯುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ