ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಮಾಜಿಕ ವಿಭಜನೆಯೇ ಆರೆಸ್ಸೆಸ್ ಉದ್ದೇಶ: ಕಾಂಗ್ರೆಸ್ (RSS | Congress | Hindu terror | Manish Tiwari)
Bookmark and Share Feedback Print
 
ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವೇ ಸಮಾಜವನ್ನು ವಿಭಜಿಸುವುದು ಮತ್ತು ಇದು ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಹಿಂದೂ ಸಂಘಟನೆಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ನವದೆಹಲಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮತ್ತು ಮೋಹನ್ ಪ್ರಕಾಶ್ ಆರೆಸ್ಸೆಸ್ ಮೇಲೆ ಈ ಆರೋಪವನ್ನು ಮಾಡಿದ್ದಾರೆ.

ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡ ಸಂಘಟನೆಗಳ ಕೃತ್ಯಗಳನ್ನು ತಳ್ಳಿ ಹಾಕುವುದು ಅಥವಾ ಅಂತಹ ಸಂಘಟನೆಗಳ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳುವ ಮೂಲಕ ಆರೆಸ್ಸೆಸ್ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಅದರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಭಾರೀ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ತಿಪ್ಪರಲಾಗ ಹಾಕುತ್ತಿದೆ ಎಂದು ತಿವಾರಿ ಅಭಿಪ್ರಾಯಪಟ್ಟರು.

ಆರೆಸ್ಸೆಸ್‌ನ ಅಂಗ ಸಂಘಟನೆಗಳು ಭಯೋತ್ಪಾದನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಬಹಿರಂಗವಾಗುತ್ತಿದ್ದಂತೆ ಅದರಿಂದ ದೂರ ಸರಿಯುವ ಮೂಲಕ ಅದು ನುಣುಚಿಕೊಳ್ಳುತ್ತಿದೆ. ಸಂಘಟನೆಯ ಪ್ರಮುಖ ಹುದ್ದೆಗಳಲ್ಲಿರುವ ಕೆಲವರು ಮಾತ್ರ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಬಿಂಬಿಸಲು ಅದು ಬಯಸುತ್ತಿದೆ. ಆದರೆ ಆ ಪ್ರಮುಖ ವ್ಯಕ್ತಿಗಳು ತಮ್ಮ ಮೇಲಿನವರ ಆಶೀರ್ವಾದದೊಂದಿಗೆ ಕುಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ನೇರವಾಗಿ ಆರೋಪಿಸಿದರು.

ಆಗಾಗ ಬಾಂಬ್ ತಯಾರಿಸುತ್ತಿರುವ ಸಂದರ್ಭದಲ್ಲಿ ಆರೆಸ್ಸೆಸ್‌ನ ಎಷ್ಟು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ವಿವರಿಸುವಂತೆ ಮತ್ತೊಬ್ಬ ವಕ್ತಾರ ಮೋಹನ್ ಪ್ರಕಾಶ್ ಆಗ್ರಹಿಸಿದ್ದಾರೆ.

ಆರೆಸ್ಸೆಸ್ ಉದ್ದೇಶವೇ ಸಮಾಜವನ್ನು ವಿಭಜಿಸುವುದು ಎಂದಿರುವ ಪ್ರಕಾಶ್, ಕೆಲವು ಘಟನೆಗಳು ನಡೆದಿರುವ ಸಮಯ-ಸಂದರ್ಭಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಅವರು ಸಮುದಾಯಗಳ ನಡುವೆ ಅಸಮಾಧಾನ ಹುಟ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಎಲ್ಲವೂ ಮುಸ್ಲಿಮರ ಓಟಿಗಾಗಿ..
'ಹಿಂದೂ ಭಯೋತ್ಪಾದನೆ' ಎಂಬ ಶಬ್ದವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿರುವ ಆರೆಸ್ಸೆಸ್ ಸಿದ್ಧಾಂತವಾದಿ ಬಾಬುರಾವ್ ವೈದ್ಯ, ಇದೆಲ್ಲ ಮುಸ್ಲಿಮರ ಮತ ಬ್ಯಾಂಕ್‌ಗೆ ಕನ್ನ ಹಾಕಲು ನಡೆಸಲಾಗುತ್ತಿರುವ ಯತ್ನ ಎಂದು ತಿರುಗೇಟು ನೀಡಿದ್ದಾರೆ.

'ಹಿಂದೂ ಭಯೋತ್ಪಾದನೆ' ಎಂಬ ಶಬ್ದವು ಮಾಧ್ಯಮಗಳಲ್ಲಿ ಈಗ ಸ್ಥಾನ ಪಡೆದುಕೊಂಡಿದೆಯಾದರೂ, ಇದರ ಸಂಶೋಧಕ ಯಾರೆಂದು ಯಾರಿಗೂ ಗೊತ್ತಿಲ್ಲ. ಆದರೂ ಕೆಲವರು ಇದರ ಕೀರ್ತಿಯನ್ನು ಶರದ್ ಪವಾರ್ ಅವರಿಗೆ ನೀಡಿದರೆ, ಇತರರು ಇದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರತ್ತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದರು.

'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಬಳಸಿ ಹಿಂದೂಗಳನ್ನು ತುಚ್ಛೀಕರಿಸುವ ಮೂಲಕ ಮುಸ್ಲಿಮರ ಮತವನ್ನು ಪಡೆಯಲು ಕೆಲವು ಪಕ್ಷಗಳು ಯತ್ನಿಸುತ್ತಿರುವ ಷಡ್ಯಂತ್ರದ ಭಾಗವಿದು. 3,000 ಸಿಖ್ಖರನ್ನು ಅಂದು ದೆಹಲಿಯಲ್ಲಿ ಕೊಂದು ಹಾಕಿದ್ದನ್ನು ನಾವು ಕಾಂಗ್ರೆಸ್ ಭಯೋತ್ಪಾದನೆ ಎಂದು ಕರೆಯಬಹುದೇ ಎಂದು ವೈದ್ಯ ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ