ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಲಿಂಗಕಾಮ ನಿಷೇಧಿಸಿ: ಸರಕಾರಕ್ಕೆ ಖಾಪ್ ಪಂಚಾಯಿತಿ (homosexuality | Khap panchayats | same gotra marriages | Hindu Marriage)
Bookmark and Share Feedback Print
 
ಸಗೋತ್ರ ಮದುವೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಾ ಬಂದಿರುವ ಖಾಪ್ ಪಂಚಾಯಿತಿಗಳು, ಸಲಿಂಗಕಾಮ ಮತ್ತು ಬಾಡಿಗೆ ಗರ್ಭದ ವಿರುದ್ಧ ಕಾನೂನುಗಳನ್ನು ತರಬೇಕು ಮತ್ತು ಸ್ವಘೋಷಿತ ಜಾತಿ ಸಂಘಟನೆಗಳಿಗೆ ಕಾನೂನು ಮಾನ್ಯತೆ ನೀಡಬೇಕೆಂದು ಆಗ್ರಹಿಸಿವೆ.

ಸಗೋತ್ರ ವಿವಾಹಕ್ಕೆ ನಿಷೇಧ ಹೇರುವ ಮೂಲಕ ಕಾನೂನಿಗೆ ತಿದ್ದುಪಡಿ ಮಾಡದೇ ಇದ್ದರೆ ತಾವು ಡಿಸೆಂಬರ್ 21ರಂದು ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಹರ್ಯಾಣಾದ ರೋಹ್ಟಕ್ ಜಿಲ್ಲೆಯಿಂದ 30 ಕಿಲೋ ಮೀಟರ್ ದೂರದಲ್ಲಿರುವ ಮೇಹಮ್ ಎಂಬಲ್ಲಿ ಸಭೆ ಸೇರಿದ ಖಾಪ್ ಪಂಚಾಯಿತಿಗಳ 'ಮಹಾ ಪಂಚಾಯಿತಿ' ಇದೇ ಸಂದರ್ಭದಲ್ಲಿ ಬೆದರಿಕೆ ಹಾಕಿದೆ.

ಸುಮಾರು ಐದು ಗಂಟೆಗಳ ಕಾಲ ನಡೆದ ಈ ಶಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಲಿಂಗಕಾಮ ಮತ್ತು ಬಾಡಿಗೆ ತಾಯ್ತನವನ್ನು ನಿಷೇಧಿಸುವುದು, ನ್ಯಾಯಾಂಗ ಅಧಿಕಾರದ ಜತೆ ಖಾಪ್ ಪಂಚಾಯಿತಿಗಳಿಗೆ ಲೋಕ ಅದಾಲತ್ ಸ್ಥಾನಮಾನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.

ರಾಜ್ಯದಲ್ಲಿ ತಮ್ಮ ಸಾಮಾಜಿಕ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಹೇಳಿಕೊಂಡಿರುವ ಖಾಪ್ ಪಂಚಾಯಿತಿಗಳು, ಇದಕ್ಕಾಗಿ ಸಂಬಂಧಪಟ್ಟವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ಅಶ್ಲೀಲ-ನೀಲಿ ಚಿತ್ರಗಳಿಗೆ (pornography) ಸಂಬಂಧಪಟ್ಟ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಖಾಪ್‌ಗಳು ಬೆಂಬಲ ವ್ಯಕ್ತಪಡಿಸಿವೆ.

ಸಗೋತ್ರ ಮದುವೆಗಳನ್ನು ನಿಷೇಧಿಸುವ ವಿಚಾರದಲ್ಲಿ ಸರಕಾರದ ಆಶಯ ಏನೆಂದು ಪ್ರಶ್ನಿಸಿರುವ ಹರ್ಯಾಣ ಮಾಜಿ ಮುಖ್ಯಮಂತ್ರಿ ಹುಕುಂ ಸಿಂಗ್, ಸರಕಾರ ಬಯಸಿದ್ದಲ್ಲಿ ಕಾನೂನಿಗೆ ತಿದ್ದುಪಡಿ ಮಾಡುವುದು ಕೇವಲ ಗಂಟೆಗಳ ಕೆಲಸ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ