ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿಯ ಕಾಲು ಕತ್ತರಿಸಿದ ಪತಿ ಕಾಲಿನೊಂದಿಗೆ ಪರಾರಿ! (Man chops off wife's leg | Siddhappa | Ramanamma | Nellore)
Bookmark and Share Feedback Print
 
ಗಂಡನ ಅಕ್ರಮ ಸಂಬಂಧದ ಕುರಿತು ಆಗಾಗ ಜಗಳ ಮಾಡುತ್ತಿದ್ದ ಪತ್ನಿಗೆ ಮತ್ತು ಬರಿಸುವ ಔಷಧಿ ಕುಡಿಸಿ ಕಾಲನ್ನೇ ಕತ್ತರಿಸಿದ ವ್ಯಕ್ತಿಯೊಬ್ಬ ಅದರೊಂದಿಗೆ ಪರಾರಿಯಾಗಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.

ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ. ಸಿದ್ದಪ್ಪ ಎಂಬ ಕಟುಕ ತನ್ನ ಪತ್ನಿ ರಮಣಮ್ಮಳ ಕಾಲನ್ನೇ ಕತ್ತರಿಸಿ ಇದೀಗ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿವಾಹೇತರ ಸಂಬಂಧ ಹೊಂದಿದ್ದ ಸಿದ್ದಪ್ಪನಲ್ಲಿ ಪ್ರತಿದಿನ ಪತ್ನಿ ರಮಣಮ್ಮ ಜಗಳ ತೆಗೆಯುತ್ತಿದ್ದಳು. ಇದರಿಂದ ಕುಪಿತಗೊಂಡಿದ್ದ ಸಿದ್ದಪ್ಪ ಕಳೆದ ಭಾನುವಾರ ಪತ್ನಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಮಿಶ್ರಣ ಮಾಡಿ ಕೊಟ್ಟಿದ್ದ.

ಇದ್ಯಾವುದನ್ನೂ ತಿಳಿಯದ ರಮಣಮ್ಮ ಗಂಡ ಪ್ರೀತಿಯಿಂದ ನೀಡಿದ್ದನ್ನು ಕುಡಿದಿದ್ದಳು. ಆದರೆ ತಲೆ ತಿರುಗುತ್ತಿದೆ ಎಂದಾಗ, ಏನೂ ಆಗಲ್ಲ; ಮಲಗು, ಸರಿಹೋಗತ್ತೆ ಎಂದು ಸಿದ್ದಪ್ಪ ಹೇಳಿದ್ದ.

ಸ್ವಲ್ಪವೇ ಹೊತ್ತಿನಲ್ಲಿ ಪ್ರಜ್ಞೆ ತಪ್ಪಿದ ಪತ್ನಿಯ ಕಾಲನ್ನು ಕತ್ತಿಯಿಂದ ಕಡಿದು ತುಂಡರಿಸಿದ್ದಾನೆ. ಬಳಿಕ ಕಾಲನ್ನು ಹಿಡಿದುಕೊಂಡೇ ಪರಾರಿಯಾಗಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಕಾಲು ಕತ್ತರಿಸಿದ ನಂತರ ತೀವ್ರ ರಕ್ತಸ್ರಾವವಾಗಿತ್ತಾದರೂ, ಆಸ್ಪತ್ರೆಗೆ ದಾಖಲಿಸಿದ ಕಾರಣ ಬಲಿಪಶು ಜೀವ ಉಳಿಸಿಕೊಂಡಿದ್ದಾಳೆ.

ಅಕ್ರಮ ಸಂಬಂಧದ ಕುರಿತು ಆಗಾಗ ತಗಾದೆ ತೆಗೆಯುತ್ತಿದ್ದೆ, ಅದೇ ಕಾರಣಕ್ಕೆ ನನ್ನ ಕಾಲನ್ನು ಮಲಗಿರುವಾಗ ಕತ್ತರಿಸಿದ್ದಾನೆ ಎಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರಮಣಮ್ಮ ಆರೋಪಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ