ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್-ಪೊಲೀಸರ ಮುಖಾಮುಖಿ; ಸಾವು-ನೋವಿಲ್ಲ (Encounter | Maoists | Chhattisgarh | Dantewada district)
Bookmark and Share Feedback Print
 
ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯ ಕಿರಾಂದೂಲ್ ಸಮೀಪ 75ರಷ್ಟು ಭದ್ರತಾ ಸಿಬ್ಬಂದಿಗಳು ಮತ್ತು ಮಾವೋವಾದಿ ಗುಂಪಿನ ನಡುವೆ ಬುಧವಾರ ಬೆಳಿಗ್ಗೆ ಎನ್‌ಕೌಂಟರ್ ನಡೆದಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ.

ಈ ಪ್ರದೇಶದಲ್ಲಿ ಭಾರೀ ಮಳೆ ಬರುತ್ತಿರುವ ಕಾರಣ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸ್ಥಳಕ್ಕೆ ಧಾವಿಸುವುದು ಸಾಧ್ಯವಾಗಿಲ್ಲವಾದರೂ, ಇತ್ತೀಚಿನ ಮಾಹಿತಿಗಳ ಪ್ರಕಾರ ಪೊಲೀಸರು ಸುರಕ್ಷಿತವಾಗಿದ್ದಾರೆ.

ಭದ್ರತಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಮುಗಿಸಿ ಅವರು ವಾಪಸ್ ಬರುತ್ತಿದ್ದಾರೆ ಎಂದು ಬಾಸ್ತಾರ್ ವಲಯದ ಐಜಿ ಟಿ.ಜೆ. ಲಾಂಗ್‌ಕುಮೇರ್ ತಿಳಿಸಿದ್ದಾರೆ.

ಈ ಹಿಂದಿನ ವರದಿಯಲ್ಲಿ ಘಟನೆಯಲ್ಲಿ ಕನಿಷ್ಠ ಆರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿತ್ತು.

ದಂತೇವಾಡದಿಂದ 40 ಕಿಲೋಮೀಟರ್ ದೂರದಲ್ಲಿನ ಕಿರಾಂಡಲ್ ಸಮೀಪದ ಗೂಮಿಯಾಪಾಲ್ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ಸುಮಾರು 200 ಮಂದಿಯಷ್ಟಿದ್ದ ನಕ್ಸಲರು ಅವರ ಕಮಾಂಡರ್ ಗಣೇಶ್ ಅಲೈಕ್ ಎಂಬಾತನ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಗುಂಡಿನ ಮಳೆಗರೆಯಲಾಗಿದೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸ್ಪಷ್ಟನೆ ನೀಡಿರುವ ಪೊಲೀಸರು, ಯಾವುದೇ ಭದ್ರತಾ ಸಿಬ್ಬಂದಿ ಕಾಣೆಯಾಗಿಲ್ಲ. ನಮ್ಮ ಕಡೆಯಲ್ಲಿ ಸಾವು-ನೋವು ಸಂಭವಿಸಿಲ್ಲ. ನಕ್ಸಲರಿಗೆ ಪ್ರಾಣಹಾನಿ ನಡೆದಿರುವ ಕುರಿತು ಕೂಡ ಯಾವುದೇ ಖಚಿತ ಮಾಹಿತಿಯಿಲ್ಲ ಎಂದಿದ್ದಾರೆ.

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ವರ್ಷ ಪ್ರಮುಖವಾಗಿ ಮೂರು ದಾಳಿಗಳನ್ನು ನಡೆಸಿರುವ ಕೆಂಪು ಉಗ್ರರು 150ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಏಪ್ರಿಲ್ 6ರಂದು 76, ಮೇ 17ರಂದು 44 ಹಾಗೂ ಜೂನ್ 29ರಂದು ನಡೆಸಿದ ದಾಳಿಯಲ್ಲಿ 26 ಮಂದಿ ಪೊಲೀಸ್ ಸಿಬ್ಬಂದಿಗಳು ಮತ್ತು ನಾಗರಿಕರನ್ನು ನಕ್ಸಲರು ಕೊಂದು ಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ