ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆಯಲ್ಲಿ ಕೊನೆಗೂ ಬಾಯ್ಬಿಟ್ಟ ಸಚಿವ ಅಳಗಿರಿ! (M K Alagiri | Parliament | Srikant Jena | DMK)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ವರ್ಷ ಕಳೆದ ನಂತರ ತನ್ನ ಮೊದಲ ಪ್ರಶ್ನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.

ಈ ಹಿಂದೆ ಅಧಿವೇಶನದ ಸಂದರ್ಭದಲ್ಲಿ ಸದನಗಳಿಂದ ಹೊರಗೇ ಬಹುತೇಕ ಉಳಿದು ಬಿಡುತ್ತಿದ್ದ, ಇಲ್ಲವೇ ಉತ್ತರಿಸಲು ನಿರಾಕರಿಸುತ್ತಿದ್ದ ಸಚಿವರು, ಇಂದು ಪ್ರಶ್ನೆಯೊಂದಕ್ಕೆ ಉತ್ತರಿಸುವ ಮೂಲಕ ತನ್ನ ರೂಢಿಯನ್ನು ಮುರಿದರು.

'ಪ್ರಶ್ನೆ ಸಂಖ್ಯೆ 161. 'A'ಯಿಂದ 'E'ವರೆಗಿನ ಪ್ರಶ್ನೆಗಳು ಸದನದ ಮುಂದೆ ಬಂದಿದೆ' ಎಂದು ಪ್ರಶ್ನೋತ್ತರ ಅವಧಿಯಲ್ಲಿ ತನ್ನ ಮೊದಲ ಪ್ರಶ್ನೆಗೆ ಅಳಗಿರಿ ಉತ್ತರಿಸಿದರು.

ನಂತರ ಇತರ ಸದಸ್ಯರು ಎತ್ತಿದ ಉಪ ಪ್ರಶ್ನೆಗಳಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಶ್ರೀಕಾಂತ್ ಜೇನಾ ಅವರು ಉತ್ತರಿಸಿದರು. ಪ್ರತಿ ಪ್ರಶ್ನೆಗೂ ಉತ್ತರಿಸುವಾಗ ಜೇನಾ ತನ್ನ ಸೀನಿಯರ್ ಅಳಗಿರಿಯಿಂದ ಅನುಮತಿ ಪಡೆದುಕೊಳ್ಳುತ್ತಿರುವುದು ಗಮನ ಸೆಳೆಯಿತು.

ಅಳಗಿರಿಯವರಲ್ಲಿ ಪ್ರಶ್ನೆ ಕೇಳಿದವರು ಕಾಂಗ್ರೆಸ್ ಸದಸ್ಯ ಚರಣ್ ದಾಸ್ ಮಹಾಂತ್. ಈ ಸಂದರ್ಭವನ್ನು ಸಚಿವರ ಲೇವಡಿಗೂ ಅವರು ಪರೋಕ್ಷವಾಗಿ ಬಳಸಿಕೊಂಡರು.

ನನ್ನ ಪ್ರಶ್ನೆಯು ಈ ದಿನದ ಮೊದಲ ಪ್ರಶ್ನೆಯಾಗಿರುವುದು ಮತ್ತು ಸಚಿವರು ಪ್ರಶ್ನೆಯೊಂದಕ್ಕೆ ಮೊದಲ ಬಾರಿ ನನ್ನ ಪ್ರಶ್ನೆಗೇ ಉತ್ತರಿಸುತ್ತಿರುವುದು ನನ್ನ ಅದೃಷ್ಟ ಎನ್ನುವ ಮೂಲಕ ಅಳಗಿರಿ ಕುರಿತು ಕುಹಕವಾಡಿದರು.

ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತ ಹೊಂದಿರದೇ ಇದ್ದ ಕಾರಣ ಸಚಿವ ಅಳಗಿರಿ ಕಲಾಪದಿಂದ ದೂರ ಉಳಿಯುತ್ತಿರುವುದನ್ನು ಗಮನಿಸಿದ್ದ ಸ್ಪೀಕರ್ ಮೀರಾ ಕುಮಾರ್, ಅವರಿಗೆ ದುಭಾಷಿಯನ್ನು ಒದಗಿಸುವುದಾಗಿ ಹೇಳಿದ್ದರು.

ಆದರೆ ಬಳಿಕ ತಾನು ತಮಿಳಿನಲ್ಲೇ ಉತ್ತರಿಸಲು ಅವಕಾಶ ನೀಡುವಂತೆ ಮಾಡಿದ್ದ ಮನವಿಯನ್ನು ಪುರಸ್ಕರಿಸದ ಸ್ಪೀಕರ್, ಅದರ ಬದಲಿಗೆ ತಾವು ಪ್ರಮುಖ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿರುವ ದಾಖಲೆಯಿಂದ ಉತ್ತರವನ್ನು ಓದಿ ಹೇಳಿ. ಬಳಿಕ ನಿಮ್ಮ ಜೂನಿಯರ್ ಸಚಿವರು ಇತರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸೂಚನೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ