ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇವಲ ವರದಕ್ಷಿಣೆ ಬೇಡಿಕೆ ಅಪರಾಧ ಅಲ್ಲ: ಸುಪ್ರೀಂ (demand of dowry | Supreme Court | torture | Marriage)
Bookmark and Share Feedback Print
 
ಮಹಿಳೆಯೊಬ್ಬಳು ಮಾನಸಿಕ ಅಥವಾ ದೈಹಿಕ ಹಿಂಸೆಯಿಂದಾಗಿ ಸಾವನ್ನಪ್ಪದ ಹೊರತು ಕೇವಲ ವರದಕ್ಷಿಣೆ ಬೇಡಿಕೆಗಾಗಿ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ತೀರ್ಮಾನಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ವರದಕ್ಷಿಣೆ ಬೇಡಿಕೆ ಸಂಬಂಧ ಬಲಿಪಶು ಸಾವನ್ನಪ್ಪಲು ವ್ಯಕ್ತಿ ನೀಡಿರುವ ಕಿರುಕುಳ ಕಾರಣ ಎಂಬುದಕ್ಕೆ ಪುಷ್ಠಿ ನೀಡುವ ಪುರಾವೆಗಳನ್ನು ಪ್ರಾಸಿಕ್ಯೂಷನ್ ನೀಡಬೇಕು ಎಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠವು ಹೇಳಿದೆ.

ವರದಕ್ಷಿಣೆ ಕಿರುಕುಳ ಸಾವು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹೀಗಿದೆ.

ಅಮರ್ ಸಿಂಗ್‌ಗೆ 25,000 ರೂಪಾಯಿ ಹಣ ಅಥವಾ ಸ್ಕೂಟರ್ ಕೊಡಬೇಕೆಂಬ ವರದಕ್ಷಿಣೆ ಬೇಡಿಕೆಯಲ್ಲಿ ಜಗದೀಶ್ ಮತ್ತು ಗೋರ್ದಾನಿಯವರ ಪಾತ್ರವಿರುವುದನ್ನು ಪ್ರಾಸಿಕ್ಯೂಷನ್ ತನ್ನ 2, 4 ಮತ್ತು 5ನೇ ಪುರಾವೆಗಳಲ್ಲಿ ತೋರಿಸಿದೆ. ಆದರೆ ಭಾರತೀಯ ದಂಡ ಸಂಹಿತೆ 498ಎ ಮತ್ತು 304ಬಿ ಪ್ರಕಾರ ವರದಕ್ಷಿಣೆ ಪಡೆದುಕೊಳ್ಳುವುದು ಮಾತ್ರ ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದಂಡ ಸಂಹಿತೆ 498ಎ ಮತ್ತು 304ಬಿ ಪ್ರಕಾರ ಶಿಕ್ಷೆ ನೀಡಬೇಕೆಂದಾದರೆ, ಅಲ್ಲಿ ಗಂಡ ಅಥವಾ ಗಂಡನ ಸಂಬಂಧಿಕರಿಂದ ಮಹಿಳೆಗೆ ಕಿರುಕುಳ ಅಥವಾ ಚಿತ್ರಹಿಂಸೆಯಂತಹ ಕೃತ್ಯಗಳು ನಡೆದಿರಬೇಕು ಎಂದು ಪೀಠವು ತನ್ನ ತೀರ್ಪಿನಲ್ಲಿ ವಿವರಿಸಿದೆ.

1993ರ ಮಾರ್ಚ್ 8ರಂದು ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದ ನೂತನ ವಧು ಸಂತೋಷ್ ಕುರಿತು ನ್ಯಾಯಾಲಯವು ಈ ತೀರ್ಪು ನೀಡಿದೆ.

ವರದಕ್ಷಿಣೆ ಕಿರುಕುಳದಲ್ಲಿ ಸಾವನ್ನಪ್ಪಿದ ಸಂತೋಷಾಳ ಅತ್ತೆ ಗೋರ್ದಾನಿ ಮತ್ತು ಬಾವ ಜಗದೀಶ್ ಅವರನ್ನು ಖುಲಾಸೆಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು, ಗಂಡ ಅಮರ್ ಸಿಂಗ್ ದೋಷಿಯೆಂಬುದನ್ನು ಪುನರುಚ್ಛರಿಸಿದೆ.

ಈ ಮೂರೂ ಮಂದಿಯನ್ನು ವರದಕ್ಷಿಣೆ ಸಾವು ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ತಪ್ಪಿತಸ್ಥರು ಎಂದು ಹೇಳಿತ್ತು. ಆದರೆ ರಾಜಸ್ತಾನ ಹೈಕೋರ್ಟ್ ಜಗದೀಶ್ ಮತ್ತು ಗೋರ್ದಾನಿಯವರನ್ನು ದೋಷಮುಕ್ತಗೊಳಿಸಿ, ಅಮರ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ