ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಜೈಲಲ್ಲಿ ನೊಣ ಹೊಡೆಯುತ್ತಿಲ್ಲ, ಸಿದ್ಧತೆಯಲ್ಲಿದ್ದಾನೆ! (Bombay High Court | Pakistan | Ajmal Kasab | Mumbai attack)
Bookmark and Share Feedback Print
 
ವಿಶೇಷ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ಶಿಕ್ಷೆಯಿಂದ ಪಾರಾಗಬೇಕು ಎಂಬ ಕುರಿತು ಗಂಭೀರ ಚಿಂತನೆಯಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾನಂತೆ.

ಇತ್ತೀಚೆಗಷ್ಟೇ ಕಸಬ್‌ನನ್ನು ಆರ್ಥರ್ ರೋಡ್ ಸೆಂಟ್ರಲ್ ಜೈಲಿನಲ್ಲಿ ಭೇಟಿ ಮಾಡಿದ್ದ ಆತನ ವಕೀಲರುಗಳಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಇದನ್ನು ಬಹಿರಂಗಪಡಿಸಿದ್ದಾರೆ. ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮಾಡಲಿರುವ ಮೇಲ್ಮನವಿ ಸಿದ್ಧತೆಯಲ್ಲಿರುವ ವಕೀಲರು, ತಮ್ಮ ಕಕ್ಷಿದಾರನ ಅಭಿಪ್ರಾಯ ಪಡೆಯಲು ಜೈಲಿಗೆ ಹೋಗಿದ್ದರು.
PTI

ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಅಗತ್ಯವಿರುವ ಕೆಲವು ಮಾಹಿತಿಗಳನ್ನು ನೋಟ್ ಮಾಡಿಕೊಳ್ಳಲು ನನಗೆ ಒಂದು ಪೆನ್ ಮತ್ತು ಕಾಗದದ ಅಗತ್ಯವಿದೆ. ಅದನ್ನು ಒದಗಿಸಿ ಎಂದು ನಮ್ಮಲ್ಲಿ ಕೇಳಿಕೊಂಡಿದ್ದ. ಆತನ ಮನವಿಯನ್ನು ನಾವು ಜೈಲು ಅಧಿಕಾರಿಗಳಿಗೆ ತಿಳಿಸಿದೆವು. ಅದರಂತೆ ಆತನಿಗೆ ಪೆನ್ನು-ಪೇಪರ್ ನೀಡಲಾಗಿದೆ ಎಂದು ಶಾ ತಿಳಿಸಿದ್ದಾರೆ.

ಇಬ್ಬರೂ ವಕೀಲರ ಮೇಲೆ ನನಗೆ ಸಂಪೂರ್ಣ ಭರವಸೆಯಿದೆ. ನೀವು ನೀಡಿದ ಯಾವುದೇ ರೀತಿಯ ಕಾನೂನು ಸಲಹೆಗಳನ್ನು ಪಾಲಿಸಲು ಸಿದ್ಧನಿದ್ದೇನೆ ಎಂದು ಕಸಬ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ನಾವೀಗ 1,500 ಪುಟಗಳ ತೀರ್ಪು ಮತ್ತು ನಮಗೆ ಒದಗಿಸಲಾದ ಆರೋಪ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಮೇಲ್ಮನವಿಯನ್ನು ಸಿದ್ಧಗೊಳಿಸಿ, ಸಲ್ಲಿಸಲಾಗುತ್ತದೆ ಎಂದು ವಿವರಣೆ ನೀಡಿದರು.

ಆಗಸ್ಟ್ 4ರಂದು ಕೊನೆಯ ದಿನವಾಗಿದ್ದ ಮೇಲ್ಮನವಿ ದಿನಾಂಕವನ್ನು ನ್ಯಾಯಾಲಯವು ಆಗಸ್ಟ್ 12ಕ್ಕೆ ಮುಂದೂಡಿದೆ. ಈ ಸಂದರ್ಭದಲ್ಲಿ ಕಸಬ್ ಮೇಲಿನ ಮರಣ ದಂಡನೆಯನ್ನು ಖಚಿತಗೊಳಿಸುವುದು, ಕಸಬ್ ಮೇಲ್ಮನವಿ ಮತ್ತು ಖುಲಾಸೆಗೊಂಡಿರುವ ಇಬ್ಬರು ಆರೋಪಿಗಳ ಕುರಿತ ರಾಜ್ಯ ಸರಕಾರದ ಮೇಲ್ಮನವಿ ಪ್ರಕರಣಗಳು ವಿಚಾರಣೆಗೆ ಬರಲಿವೆ.

ಖುಲಾಸೆಗೊಂಡಿರುವ ಇಬ್ಬರು ಭಾರತೀಯ ಉಗ್ರರಾದ ಫಹೀಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ವಿರುದ್ಧದ ಮೇಲ್ಮನವಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುತ್ತದೆ, ಇದಕ್ಕಾಗಿ ಇನ್ನೂ ಕೆಲವು ದಿನಗಳ ಅಗತ್ಯವಿದೆ ಎಂದು ಮಹಾರಾಷ್ಟ್ರ ರಾಜ್ಯ ಸರಕಾರ ಕೇಳಿಕೊಂಡಿದ್ದರೆ, ಕಸಬ್ ವಕೀಲರೂ ಹೆಚ್ಚಿನ ಸಮಯಾವಕಾಶ ಕೇಳಿದ್ದರು.

ಸರಕಾರ ಮತ್ತು ಕಸಬ್ ಪರ ವಕೀಲರ ಮನವಿಯಂತೆ ಹೈಕೋರ್ಟ್ ಆಗಸ್ಟ್ 12ಕ್ಕೆ ವಿಚಾರಣೆ ಆರಂಭಿಸಲು ನಿರ್ಧರಿಸಿದ್ದು, ಅದಕ್ಕೂ ಮೊದಲು ಮೇಲ್ಮನವಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ