ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ ತೀರ್ಪು ಬರುವಾಗ ಸಂತ್ರಸ್ತರು ಇರಲ್ಲ: ಸುಪ್ರೀಂ (Supreme Court | Bhopal gas tragedy | Markandeya Katju | judicial proceedings)
Bookmark and Share Feedback Print
 
ಭೋಪಾಲ್ ಅನಿಲ ದುರಂತ ಪ್ರಕರಣವು ಕೆಳಗಿನ ನ್ಯಾಯಾಲಯದಲ್ಲಿ ಇತ್ಯರ್ಥವಾಗಲು ಇನ್ನೂ 25 ವರ್ಷಗಳೇ ಬೇಕು ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಚ ನ್ಯಾಯಾಲಯ, ಆ ಹೊತ್ತಿಗೆ ದುರಂತದ ಸಂತ್ರಸ್ತರು ಸತ್ತಿರುತ್ತಾರೆ ಎಂದು ಆಮೆಗತಿಯ ನ್ಯಾಯಾಂಗ ಪ್ರಕ್ರಿಯೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣದ ಕುರಿತು ಕೆಳಗಿನ ನ್ಯಾಯಾಯಲದಲ್ಲಿ ಅಂತಿಮ ತೀರ್ಪು ಬರಲು 25 ವರ್ಷಗಳೇ ಬೇಕು. ನಂತರ ಅದು ಹೈಕೋರ್ಟ್‌ನಲ್ಲಿ ಮೇಲ್ಮನವಿಗಾಗಿ ವಿಚಾರಣೆಗೆ ಬರಬಹುದು. ಆಗ ಮತ್ತೆ 15 ವರ್ಷಗಳು ಬೇಕಾಗುತ್ತವೆ. ಬಳಿಕ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ 10 ವರ್ಷಗಳು ಬೇಕು. ಆ ಹೊತ್ತಿಗೆ ದುರಂತದ ಸಂತ್ರಸ್ತರೆಲ್ಲರೂ ಸತ್ತಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ವಾಸ್ತವದ ಮಾತುಗಳನ್ನಾಡಿದೆ.

ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಮತ್ತು ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠವು ಮೇಲಿನಂತೆ ಖಾರವಾಗಿ ಪ್ರತಿಕ್ರಿಯಿಸಿದೆ.

ಪ್ರಕರಣಗಳು ತೀರಾ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಕಾನೂನು ವ್ಯವಸ್ಥೆಯಲ್ಲಿನ ಕೆಲವು ಲೋಪಗಳ ಲಾಭಗಳನ್ನು ವಕೀಲರು ಬಳಸಿಕೊಳ್ಳುತ್ತಿದ್ದಾರೆ ಎಂದೂ ಹೇಳಿದೆ.

ಇದೇ ಸಂದರ್ಭದಲ್ಲಿ ಚಾರ್ಲ್ಸ್ ಡಿಕನ್ ಅವರ ಕಾದಂಬರಿಯೊಂದರಲ್ಲಿನ ಉಲ್ಲೇಖವನ್ನೂ ಪೀಠ ಮಾಡಿದೆ. ಜಾರ್ಡಿಂಸ್ ಮತ್ತು ಜಾರ್ಡಿಂಸ್ ಎಂಬ ಎರಡು ಕುಟುಂಬಗಳ ನಡುವಿನ ಸಿವಿಲ್ ಪ್ರಕರಣವೊಂದು ನೂರು ವರ್ಷಗಳ ಕಾಲ ನಡೆಯುವುದು ಕಾದಂಬರಿಯ ತಿರುಳು.

ಆ ಪ್ರಕರಣವು 100 ವರ್ಷಗಳ ಕಾಲ ಎಳೆಯಲ್ಪಟ್ಟಿತ್ತು. ಆಗ ಹಲವು ಪೀಳಿಗೆಗಳೇ ನಶಿಸಿ ಹೋಗಿದ್ದವು. ವಂಶಜರು, ನ್ಯಾಯವಾದಿಗಳು ಮತ್ತು ನ್ಯಾಯಾಧೀಶರಿಗೆ ತಮ್ಮ ಪ್ರಕರಣದ ಕುರಿತು ಯಾವುದೂ ತಿಳಿದಿರಲಿಲ್ಲ, ಆದರೂ ಅವರು ಪರಸ್ಪರ ಹೋರಾಡುತ್ತಿದ್ದರು. ಭಾರತ ಕೂಡ ಅದೇ ರೀತಿಯಲ್ಲಿ ಸಾಗುತ್ತಿದೆ. ಪ್ರಕರಣಗಳು ಎಳೆದಾಡದಲ್ಲಿ ತೊಡಗಿವೆ ಎಂದು ನ್ಯಾಯಾಧೀಶರುಗಳು ಉಲ್ಲೇಖಿಸಿದರು.
ಸಂಬಂಧಿತ ಮಾಹಿತಿ ಹುಡುಕಿ