ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ ಮಹಿಳೆ ನ್ಯಾಯಾಧೀಶೆಯಾಗಬಾರದು; ಫತ್ವಾ (Fatwa against women judges | Islamic seminary | Darul Uloom Deoband | Muslim women)
Bookmark and Share Feedback Print
 
ಮುಸ್ಲಿಂ ಧಾರ್ಮಿಕ ಸಂಘಟನೆಗಳು ಇದೀಗ ಫತ್ವಾಗಳಿಂದಲೇ ಸುದ್ದಿ ಮಾಡುತ್ತಿವೆ. ಮುಸ್ಲಿಂ ಮಹಿಳೆಯರು ನ್ಯಾಯಾಧೀಶೆಯರಾಗುವುದು ಇಸ್ಲಾಂ ಪ್ರಕಾರ ನಿಷಿದ್ಧ ಎಂದು ದಾರುಲ್ ಉಲೂಮ್ ದಿಯೋಬಂದ್ ಆಜ್ಞಾಪಿಸಿರುವುದೇ ಲೇಟೆಸ್ಟ್. ಆದರೆ ಇದಕ್ಕೆ ಮುಸ್ಲಿಮರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಸ್ಲಿಂ ಮಹಿಳೆಯೊಬ್ಬಳು ನ್ಯಾಯಾಂಗದ ಅಧಿಕಾರಿಯಾಗುವುದನ್ನು ಪ್ರತಿಬಂಧಿಸುವ ಫತ್ವಾವನ್ನು ಇಸ್ಲಾಮಿಕ್ ಧಾರ್ಮಿಕ ಸಂಘಟನೆ ದಾರೂಲ್ ಉಲೂಮ್ ದಿಯೋಬಂದ್ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ. ಇಸ್ಲಾಂ ಮತಾನುಯಾಯಿಯೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಇದರ ಮೂಲಕ ಸಂಘಟನೆ ಕಟುವಾಗಿ ಉತ್ತರಿಸಿದೆ.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬನ/ಳ ಅರ್ಹತೆಯನ್ನು ಶಿಕ್ಷಣದ ಮೂಲಕ ನಿರ್ಧರಿಸಬೇಕೇ ಹೊರತು ಲಿಂಗೀಯವಾಗಿ ಅಲ್ಲ. ಇದು ಪೂರ್ವಗ್ರಹಪೀಡಿತವಾಗಿದೆ ಎಂದು ವಕೀಲೆ ಹಾಗೂ ಮಹಿಳಾ ಕಾರ್ಯಕರ್ತೆ ಮಮ್ತಾಜ್ ಅಖ್ತರ್ ಆಕ್ರೋಶ ತೋಡಿಕೊಂಡಿದ್ದಾರೆ.

ಇಂತಹ ಫತ್ವಾಗಳನ್ನು ಹೇರುವ ಮೊದಲು ಮುಸ್ಲಿಂ ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಾದಿಸಿರುವ ಅವರು, ಓರ್ವ ಮಹಿಳೆಯ ಸ್ಥಿತಿಯನ್ನು ಮತ್ತೊಬ್ಬ ಮಹಿಳೆಯೇ ಅತ್ಯುತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ; ಇಂತಹ ಆಜ್ಞೆಗಳನ್ನು ನೀಡುವುದರಿಂದ ನ್ಯಾಯಾಂಗ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯರು ಮಾಡುವ ಕೆಲಸಗಳಿಗೆ ಅಗೌರವಗಳೇ ಹೊರತು ಬೇರೇನಲ್ಲ ಎಂದಿದ್ದಾರೆ.

1989ರಲ್ಲಿ ಕೇರಳದ ಎಂ. ಫಾತಿಮಾ ಬೀವಿ ಎಂಬವರು ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಮುಸ್ಲಿಂ ಮಹಿಳೆಯೊಬ್ಬರು ನ್ಯಾಯಾಂಗ ವೃತ್ತಿ ಕೈಗೊಂಡ ದಾಖಲೆ ನಿರ್ಮಿಸಿದ್ದರು. ನಂತರ 2006ರಲ್ಲಿ ಪಾಟ್ನಾ ಹೈಕೋರ್ಟಿಗೆ ಸೀಮಾ ಆಲಿ ಖಾನ್ ಎಂಬವರು ಶಾಶ್ವತ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು.

ಸುಪ್ರೀಂ ಕೋರ್ಟ್ ವಕೀಲ ಕಮಲೇಶ್ ಜೈನ್ ಪ್ರಕಾರ, ಇಂತಹ ಫತ್ವಾಗಳು ನ್ಯಾಯಾಂಗ ಕ್ಷೇತ್ರವನ್ನು ಆರಿಸಿಕೊಳ್ಳಬಯಸುವ ವ್ಯಕ್ತಿಗಳ ಅಥವಾ ಮಹಿಳೆಯರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ ಮತ್ತು ಅಡಚಣೆಗಳನ್ನುಂಟು ಮಾಡುತ್ತದೆ.

ಪ್ರಸಕ್ತ ನ್ಯಾಯಾಂಗ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಸೇ.10-15ರಷ್ಟು ಮಹಿಳೆಯರು ಮಾತ್ರ ಇದ್ದು, ಅವರು ಅತ್ಯುತ್ತಮವಾಗಿ ತಮ್ಮ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಮಹಿಳೆಯರಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಮಹಿಳಾ ನ್ಯಾಯವಾದಿ ಅಥವಾ ನ್ಯಾಯಾಧೀಶೆಯರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ಪ್ರಸಕ್ತ ಈ ಕ್ಷೇತ್ರದಲ್ಲಿ ಸಾಕಷ್ಟು ಮಹಿಳೆಯರಿಲ್ಲ ಎಂದು ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ