ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಹಿಂಸಾಚಾರ; ಮಾತುಕತೆಗೆ ಗಿಲಾನಿ ನಕಾರ (P Chidambaram | Jammu and Kashmir | Syed Ali Geelani | Mehbooba Mufti)
Bookmark and Share Feedback Print
 
ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರದ ಹಿಂದಿನ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಪಿ. ಚಿದಂಬರಂ ನೀಡಿರುವ ಮಾತುಕತೆ ಆಹ್ವಾನವನ್ನು ಪ್ರತ್ಯೇಕತಾವಾದಿ ಮುಖಂಡ ಸೈಯದ್ ಆಲಿ ಗಿಲಾನಿ ತಿರಸ್ಕರಿಸಿದ್ದಾರೆ.

ಮಾತುಕತೆ ಆಹ್ವಾನವನ್ನು ತಾನು ಒಪ್ಪಿಕೊಳ್ಳಲಾರೆ ಎಂದಿರುವ ಅವರು, ಹಾಗೆ ಮಾಡಿದಲ್ಲಿ ನನ್ನ ಗೌರವಕ್ಕೆ ಧಕ್ಕೆಯಾದಂತಾಗುತ್ತದೆ. ಯಾವುದೇ ಕಾರಣಕ್ಕೂ ನನ್ನ ಹಿಂದಿನ ನಿಲುವಿನಿಂದ ಹಿಂದಕ್ಕೆ ಸರಿಯಲು ನಾನು ಸಿದ್ಧನಿಲ್ಲ ಎಂದಿದ್ದಾರೆ.

ಕೇಂದ್ರ ಸರಕಾರದ ಮಾತುಕತೆ ಆಹ್ವಾನಕ್ಕೆ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಶುದ್ಧ ಕಪಟತನದಿಂದ ಕೂಡಿದ್ದು ಎಂದು ಬಣ್ಣಿಸಿರುವ ಸಂಘಟನೆ, ಮಾತುಕತೆ ಮತ್ತು ಹತ್ಯೆಗಳು ಜತೆಯಾಗಿ ಸಾಗುವುದು ಅಸಾಧ್ಯ ಎಂದಿದೆ.

ಮಾತುಕತೆ ಆರಂಭಿಸುವ ಮೊದಲು ವಿಶ್ವಾಸವನ್ನು ಮರಳಿಸುವ ನಿಟ್ಟಿನಲ್ಲಿ ವಾಸ್ತವ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅತ್ತ ಪ್ರತಿಪಕ್ಷದ ನಾಯಕಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.

ಹುರಿಯತ್ ಗುಂಪಿನ ನಾಯಕ ಗಿಲಾನಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮಾತುಕತೆಗೆ ಯಾವುದೇ ಕಾರಣಕ್ಕೂ ನಾನು ಬರಲಾರೆ ಎಂದಿದ್ದಾರೆ.

ಕಾಶ್ಮೀರವನ್ನು ವಿವಾದಿತ ಪ್ರಾಂತ್ಯವೆಂದು ಭಾರತ ಪರಿಗಣಿಸಿ, ಕಣಿವೆಯಲ್ಲಿನ ರಕ್ಷಣಾ ಪಡೆಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಗೊತ್ತುವಳಿಗಳನ್ನು ಜಾರಿಗೆ ತರಲು ಯತ್ನಿಸದ ಹೊರತು ಭಾರತವು ಕರೆಯುವ ಯಾವುದೇ ಮಾತುಕತೆಗಳಲ್ಲಿ ನಾನು ಭಾಗಿಯಾಗಲಾರೆ ಎಂದು ಅವರು ಹೇಳಿದ್ದಾರೆ.

ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ಕೇಂದ್ರ ಸರಕಾರವು ಮಾತುಕತೆಯ ಆಹ್ವಾನ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದೂ ಗಿಲಾನಿ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ