ಸಹಜ ಸ್ಥಿತಿಯತ್ತ ಕಾಶ್ಮೀರ ಕಣಿವೆ ಪ್ರದೇಶ; ಕರ್ಫ್ಯೂ ಹಿಂತೆಗೆತ
ಶ್ರೀನಗರ, ಭಾನುವಾರ, 8 ಆಗಸ್ಟ್ 2010( 11:52 IST )
ಹಲವು ದಿನಗಳಿಂದ ಹಿಂಸಾಚಾರ ಪೀಡಿತವಾಗಿದ್ದ ಜಮ್ಮು ಕಾಶ್ಮೀರ ಕಣಿವೆ ಪ್ರದೇಶ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಕರ್ಫ್ಯೂ ಹಿಂತೆಗೆಯಲಾಗಿದೆ.
ಕರ್ಫ್ಯೂ ಹಿಂತೆಗೆಯುವ ಮೂಲಕ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತಿದೆ. ಕಣಿವೆ ಪ್ರದೇಶದಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ.
ಶ್ರೀನಗರದ ಬುದ್ಗಾಂಮ್, ಗಂಧರ್‌ಬಲ್ ಮತ್ತು ಕುಪ್ವಾರಾ ಪ್ರದೇಶದಲ್ಲಿ ಶನಿವಾರದಂದೇ ಕರ್ಫ್ಯೂನಲ್ಲಿ ಸಡಿಲಿಕೆ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಹಿನ್ನೆಲೆಯಲ್ಲಿ ಜುಲೈ 31ರಂದು ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಹಿಂಸಾಚಾರದಲ್ಲಿ 33 ಮಂದಿ ಮೃತಪಟ್ಟಿದ್ದರೆ ಹಲವಾರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದರು.