ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ಮಮತಾ ರ‌್ಯಾಲಿ; ಸಿಪಿಎಂ ಕಿಡಿ (Lalgarh | Mamata Banerjee | Rally | West Bengal government)
Bookmark and Share Feedback Print
 
ಪಶ್ಚಿಮ ಬಂಗಾಳದ ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ಬೃಹತ್ ರ‌್ಯಾಲಿಯನ್ನು ಆಯೋಜಿಸಲು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.

ಲಾಲ್‌ಗರ್‌ನಲ್ಲಿ ಆಗಸ್ಟ್ 9, ಸೋಮವಾರದಂದು ನಡೆಯಲಿರುವ ರ‌್ಯಾಲಿಗೆ ರಾಜ್ಯ ಸರಾಕರದ ಒಪ್ಪಿಗೆಯನ್ನು ಕೂಡಾ ಪಡೆದುಕೊಂಡಿದೆ. ಆದರೂ ಸಮಾವೇಶವನ್ನು ಕತ್ತಲಾಗುವ ಮುನ್ನ ಕೊನೆಗೊಳಿಸಬೇಕು ಎಂಬ ಕೆಲವು ಷರತ್ತುಗಳನ್ನು ಬಂಗಾಳ ಸರಕಾರ ವಿಧಿಸಿದೆ.

ರಾಜಕೀಯ ದೃಷ್ಟಿಕೋಣದಲ್ಲಿ ರ‌್ಯಾಲಿ ನಡೆಸುತ್ತಿಲ್ಲ. ಹಾಗಾಗಿ ಹಿಂಸಾಚಾರ ವಿರೋಧಿ ಎಲ್ಲಾ ಸಂಸ್ಥೆಗಳಿಗೂ ರ‌್ಯಾಲಿಗೆ ಸ್ವಾಗತ ಎಂದು ಕೇಂದ್ರ ರೈಲ್ವೇ ಸಚಿವೆ ಕೂಡಾ ಆಗಿರುವ ಮಮತಾ ತಿಳಿಸಿದರು. ಲಾಲ್‌ಗರ್‌ನ ರಾಮಕೃಷ್ಣ ವಿದ್ಯಾಲಯ ಮೈದಾನದಲ್ಲಿ ರ‌್ಯಾಲಿ ನಡೆಯಲಿದೆ ಎಂದವರು ಸೇರಿಸಿದರು.

ಅದೇ ವೇಳೆ ಮಮತಾ ಕೈಗೊಳ್ಳುತ್ತಿರುವ ರ‌್ಯಾಲಿಯನ್ನು ಸಿಪಿಎಂ ಕಟುವಾಗಿ ವಿರೋಧಿಸಿದೆ. ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ರ‌್ಯಾಲಿ ನಡೆಸುವ ಮೂಲಕ ನಕ್ಸಲ್ ಜತೆ ನಂಟು ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ