ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಪಾಕ್ ಸ್ವಾತಂತ್ರ್ಯ ಆಚರಿಸಿ, ಭಾರತ ಸ್ವಾತಂತ್ರ್ಯ ಬಹಿಷ್ಕರಿಸಿ' (Syed Ali Shah Geelani | India | Pakistan | Independence Day)
Bookmark and Share Feedback Print
 
ಪಾಕಿಸ್ತಾನ ಸಂಸ್ಥಾಪನಾ ದಿನವಾದ ಆಗಸ್ಟ್ 14ನ್ನು ಏಕತೆಯ ದಿನವೆಂದು ಆಚರಿಸಿ ಮತ್ತು ಆಗಸ್ಟ್ 15ನ್ನು ಕರಾಳ ದಿನವನ್ನಾಗಿ ಆಚರಿಸಿ ಎಂದು ಕೇಂದ್ರ ಸರಕಾರದ ಮಾತುಕತೆ ಆಹ್ವಾನವನ್ನು ತಳ್ಳಿ ಹಾಕಿದ ಬಳಿಕ ಮತ್ತೊಂದು ಸುತ್ತಿನ ಕದನಕ್ಕಿಳಿದಿರುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಆಲಿ ಶಾ ಗಿಲಾನಿ ಕಾಶ್ಮೀರ ಜನತೆಗೆ ಕರೆ ನೀಡಿದ್ದಾರೆ.

ಕೇಂದ್ರ ಸರಕಾರವು ನೀಡಿರುವ ಭರವಸೆಯಂತೆ ಕಾಶ್ಮೀರಿಗಳಿಗೆ ಸ್ವಾಯತ್ತತೆಯ ಹಕ್ಕನ್ನು ನೀಡಬೇಕು ಎಂದು ಗಿಲಾನಿ ಮತ್ತೊಮ್ಮೆ ಆಗ್ರಹಿಸುತ್ತಾ ಈ ಕೆಳಗಿನಂತೆ ಭಾರತ ಸರಕಾರವನ್ನು ಟೀಕಿಸಿದರು.

ತಮ್ಮ ರಾಜ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ವತಃ ಕಾಶ್ಮೀರಿಗಳಿಗೇ ನೀಡಲಾಗುತ್ತದೆ ಎಂದು 1948ರಲ್ಲಿ ಪಂಡಿತ್ ನೆಹರೂ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಸಲಿಲ್ಲ. ನೆಹರೂ ನಮಗೆ ಆಕಾಶ ತೋರಿಸಿದರು, ಆದರೆ ನಮ್ಮ ಪದತಳವನ್ನೇ ಕಿತ್ತರು ಎಂದಿರುವ ಪ್ರತ್ಯೇಕತಾವಾದಿ ಹೋರಾಟಗಾರ, ಪಾಕಿಸ್ತಾನದ ಸ್ವಾತಂತ್ರ್ಯೋತ್ಸವವನ್ನು ಏಕತೆಯ ದಿನಾಚರಣೆಯನ್ನಾಗಿ ಆಚರಿಸಿ; ಭಾರತದ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿ ಎಂದು ಕಾಶ್ಮೀರಿ ಜನತೆಗೆ ಕರೆ ನೀಡಿದ್ದಾರೆ.

ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರು ನೀಡಿದ್ದ ಮಾತುಕತೆಯ ಆಹ್ವಾನವನ್ನು ಇತ್ತೀಚೆಗಷ್ಟೇ ಗಿಲಾನಿ ತಿರಸ್ಕರಿಸಿದ್ದರು. ಅದರ ಬೆನ್ನಿಗೆ ಹುರಿಯತ್ ಮತ್ತೊಂದು ಬಣದ ನಾಯಕ ಮಿರ್ವಾಯಿಜ್ ಉಮರ್ ಫಾರೂಕ್ ಕೂಡ ಮಾತುಕತೆಗೆ ನಕಾರ ಸೂಚಿಸಿದ್ದಾರೆ.

ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಕಠಿಣ ಕಾನೂನುಗಳನ್ನು ರದ್ದು ಮಾಡುವುದು ಮತ್ತು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದರ ಕುರಿತು ಸರಕಾರ ಕ್ರಮಗಳನ್ನು ಕೈಗೊಳ್ಳದ ಹೊರತು ಯಾವುದೇ ಮಾತುಕತೆಗೆ ನಾವು ಸಿದ್ಧರಿಲ್ಲ ಎಂದು ಮಿರ್ವಾಯಿಜ್ ಸ್ಪಷ್ಟಪಡಿಸಿದ್ದಾರೆ.

ಕಾಶ್ಮೀರವನ್ನು ಭಾರತದ ಹಿಡಿತದಿಂದ ಬಿಡಬೇಕು, ಈ ಕುರಿತು ನಿರ್ಧರಿಸುವ ಹಕ್ಕನ್ನು ಸ್ವತಃ ಕಾಶ್ಮೀರದ ಜನತೆಗೆ ನೀಡಬೇಕೆನ್ನುವುದು ಹುರಿಯತ್ ಸಂಘಟನೆಯ 26ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಇದರೊಂದಿಗೆ ಕಾಶ್ಮೀರ ಕುರಿತ ವಿವಾದ ಮತ್ತಷ್ಟು ಜಟಿಲವಾಗಿದೆ. ಹಾಗಾಗಿ ಕೇಂದ್ರ ಸರಕಾರದ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ