ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೀತಿ ಮಾಡಿದ ತಪ್ಪಿಗೆ ಯುವತಿಯ ಬೆತ್ತಲೆ ಮೆರವಣಿಗೆ (Girl forced to walk nude | Love affair | West Bengal | Suri)
Bookmark and Share Feedback Print
 
ತನ್ನದಲ್ಲದ ಜಾತಿಯವನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳ ಮೇಲೆ ನಡೆಸಲಾಗಿರುವ ದೌರ್ಜನ್ಯವಿದು. ಆಕೆಗೆ ಮನಬಂದಂತೆ ಥಳಿಸಿ, ಬಟ್ಟೆ ಬಿಚ್ಚಿ ಸುಮಾರು ಎಂಟು ಕಿಲೋ ಮೀಟರ್ ದೂರ ಬೆತ್ತಲೆ ಮೆರವಣಿಗೆ ಮಾಡಲಾಗಿದೆ.

ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಲದ ಬಿರ್ಬಮ್ ಜಿಲ್ಲೆಯ ಸಿಯೂರಿ ಎಂಬಲ್ಲಿ. ನಾಲ್ಕು ತಿಂಗಳ ಹಿಂದೆಯೇ ಈ ಹೀನ ಕೃತ್ಯ ನಡೆದಿತ್ತು. ಆದರೆ ಇದುವರೆಗೆ ಬಹಿರಂಗವಾಗಿರಲಿಲ್ಲ. ಈ ಸಂಬಂಧದ ಎಂಎಂಎಸ್ ಪೊಲೀಸರ ಕೈಗೆ ಸೇರಿದ ಬಳಿಕ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ.

ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಏಕೈಕ ಕಾರಣವನ್ನು ಮುಂದಿಟ್ಟುಕೊಂಡ ನೂರಾರು ಗ್ರಾಮಸ್ಥರು ಸೇರಿಕೊಂಡು 17ರ ಹರೆಯದ ಯುವತಿಯನ್ನು ಬೆತ್ತಲೆ ಮಾಡಿ ಸುಮಾರು ಎಂಟು ಕಿಲೋ ಮೀಟರ್ ದೂರ ಮೆರವಣಿಗೆ ಮಾಡಿದ್ದರು. ಈ ಸಂದರ್ಭದಲ್ಲಿ ಆಕೆಯ ಸುತ್ತ ಡ್ರಮ್ಮುಗಳನ್ನು ಬಡಿಯುತ್ತಾ, ಆಕೆ ಬಳಲಿ ನಿಂತಾಗಲೆಲ್ಲ ಹಿಂದಿನಿಂದ ಅಮಾನವೀಯವಾಗಿ ಹೊಡೆಯಲಾಗುತ್ತಿತ್ತು.

ನೆರೆದಿದ್ದ ಮಕ್ಕಳೆಲ್ಲ ಆಕೆಯತ್ತ ಕಲ್ಲು ತೂರುತ್ತಿದ್ದರು. ಯುವತಿ ತನ್ನ ಎದೆಯ ಭಾಗವನ್ನು ಕೈಗಳಲ್ಲಿ ಮುಚ್ಚಿಕೊಳ್ಳಲು ಯತ್ನಿಸಿದಾಗ ಕ್ರೂರಿ ಜನರು ಅದಕ್ಕೂ ಅವಕಾಶ ಕೊಡದೆ ಎಳೆದಾಡುತ್ತಿದ್ದರು. ಇಷ್ಟೇ ಅಲ್ಲದೆ, ಚುಡಾಯಿಸಿ ಈ ರೀತಿ ರಾಕ್ಷಸರಂತೆ ವರ್ತಿಸಿದ ಮಂದಿಯೇ ತಮ್ಮ ಮೊಬೈಲುಗಳಿಂದ ಕೃತ್ಯದ ಚಿತ್ರೀಕರಣವನ್ನೂ ನಡೆಸಿದ್ದರು.

ವೀಡಿಯೋ ಬಹಿರಂಗವಾದ ನಂತರ ಘಟನೆಯ ಕುರಿತು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಪತ್ರಕರ್ತರು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಒತ್ತಾಯಿಸಿದ್ದರು.

'ಆದಿವಾಸಿ ಗರ್ಲ್ ಎಂಎಂಎಸ್' ಹೆಸರಿನ 11 ನಿಮಿಷದ ಈ ವೀಡಿಯೋ ತುಣುಕುಗಳು ಮೊಬೈಲುಗಳಲ್ಲಿ ಹರಿದಾಡುತ್ತಿದೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈಗಾಗಲೇ ಐವರನ್ನು ನಾವು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ