ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರಿಗೆ ಮಮತಾ ಬೆಂಬಲ; ಸಂಸತ್ತಿನಲ್ಲಿ ಕೋಲಾಹಲ (Maoists | Trinamool Congress | Mamata Banerjee | India)
Bookmark and Share Feedback Print
 
ಕೇಂದ್ರ ಸಚಿವೆ ಮಮತಾ ಬ್ಯಾನರ್ಜಿಯವರು ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪರೋಕ್ಷವಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುವಂತೆ, ಅತ್ತ ಸಂಸತ್ತಿನಲ್ಲಿ ಸರಕಾರದ ನಡೆಯನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷಗಳು ಕೇಂದ್ರವನ್ನು ಆಗ್ರಹಿಸಿ ಕೋಲಾಹಲ ಎಬ್ಬಿಸಿವೆ.

ಮಾವೋವಾದಿಗಳ ಕೇಂದ್ರ ಎನಿಸಿರುವ ಪಶ್ಚಿಮ ಬಂಗಾಲದ ಲಾಲ್‌ಗಢದಲ್ಲಿ ಇಂದು ತೃಣಮೂಲ ಕಾಂಗ್ರೆಸ್ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಹಿಂಸಾಚಾರವನ್ನು ನಿಲ್ಲಿಸುವಂತೆ ನಕ್ಸಲರಿಗೆ ಮನವಿ ಮಾಡಿಕೊಂಡಿದ್ದು, ಸರಕಾರದೊಂದಿಗೆ ಮಾತುಕತೆಗೆ ಮುಂದಾಗುವಂತೆ ಸಲಹೆ ಮಾಡಿದ್ದಾರೆ.

ಇಂದಿನಿಂದಲೇ ಶಾಂತಿ ಪ್ರಕ್ರಿಯೆಗಳು ಆರಂಭವಾಗಲಿ. ಆ ಮೂಲಕ ಇಡೀ ಭಾರತಕ್ಕೆ ಪಶ್ಚಿಮ ಬಂಗಾಲವು ಮಾದರಿಯಾಗಲಿ. ಹಿಂಸಾಚಾರ ಮತ್ತು ಹತ್ಯೆಗಳನ್ನು ನಿಲ್ಲಿಸಿ. ನಿಮಗೆ ನನ್ನ ಜತೆ ಸಮಸ್ಯೆಗಳಿದ್ದರೆ, ನೀವು ಸಾಮಾಜಿಕ ಸೇವಾ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಸ್ವಾಮಿ ಅಗ್ನಿವೇಶ್ ಅವರ ನಾಯಕತ್ವವನ್ನು ಒಪ್ಪಿಕೊಳ್ಳಿ. ಆದರೆ ಮಾತುಕತೆ ಮಾತ್ರ ಆರಂಭವಾಗಬೇಕು ಎಂದು 'ಸಂತ್ರಾಸ್ ಬಿರೋಧಿ ಮಂಚ್'ಯಲ್ಲಿ (ಹಿಂಸಾ ವಿರೋಧಿ ವೇದಿಕೆ) ಬ್ಯಾನರ್ಜಿ ಕರೆ ನೀಡಿದರು.

ಅದೇ ಹೊತ್ತಿಗೆ ಇತ್ತೀಚೆಗಷ್ಟೇ ಆಂಧ್ರಪ್ರದೇಶದಲ್ಲಿ ನಕ್ಸಲ್ ಅಗ್ರ ನಾಯಕ ಚೆರುಕುರಿ ರಾಜಕುಮಾರ್ ಆಲಿಯಾಸ್ ಆಜಾದ್ ಹತ್ಯೆ ಮಾಡಿರುವ ಸರಕಾರದ ಕ್ರಮವನ್ನು ಬ್ಯಾನರ್ಜಿ ತೀವ್ರವಾಗಿ ಖಂಡಿಸಿದರು.

ನನ್ನ ಪ್ರಕಾರ ಆಜಾದ್ ಅವರನ್ನು ಕೊಂದ ರೀತಿ ಸರಿಯಾಗಿಲ್ಲ. ಅವರು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಮುಂದಾಗಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

ಸರಕಾರ ಮತ್ತು ಎಡರಂಗದ ಬಂಡುಕೋರರ ನಡುವಿನ ಮಾತುಕತೆಗಾಗಿ ಆಜಾದ್ ಅವರನ್ನು ಸಾಮಾಜಿಕ ಸೇವಾಕರ್ತ ಸ್ವಾಮಿ ಅಗ್ನಿವೇಶ್ ಒಪ್ಪಿಸಿದ್ದರು. ಅದೇ ಕ್ರಮವಾಗಿ ಆಜಾದ್ ಕಾರ್ಯಪ್ರವೃತ್ತರಾಗಿದ್ದಾಗಲೇ ಕೊಂದು ಹಾಕಲಾಯಿತು. ಇದು ನನ್ನ ಪ್ರಕಾರ ಸರಿಯಲ್ಲ ಎಂದರು.

ಲೋಕಸಭೆಯಲ್ಲಿ ಗದ್ದಲ...
ಬ್ಯಾನರ್ಜಿಯವರ ಸಮಾವೇಶ ಅತ್ತ ಲೋಕಸಭೆಯಲ್ಲೂ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಆಡಳಿತದ ಪಾಲುದಾರ ಪಕ್ಷ ಮತ್ತು ಅದರ ಸಚಿವರುಗಳು ಮಾವೋವಾದಿಗಳ ಕಡೆ ಹೊಂದಿರುವ ನಿಲುವಿನ ಕುರಿತು ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ತೃಣಮೂಲ ಕಾಂಗ್ರೆಸ್, ಕೇಂದ್ರ ರೈಲ್ವೇ ಸಚಿವೆಯವರು ಶಾಂತಿ ಮತ್ತು ಸೌಹಾರ್ದತೆ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆಯೇ ಹೊರತು ಪ್ರತಿಪಕ್ಷಗಳ ಆರೋಪಗಳಂತೆ ಅಲ್ಲ ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ