ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂಬೇಡ್ಕರ್ ಹೆಸರು ದುರುಪಯೋಗವಾಗುತ್ತಿದೆ: ಬಿಜೆಪಿ (BSP | BJP | BR Ambedkar | Dalit icon)
Bookmark and Share Feedback Print
 
ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಗಳಿಗಾಗಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ತಾನು ಜನರ ಮುಂದೆ ದಲಿತರ ಆರಾಧ್ಯದೈವವಾಗಿರುವ ಸಂವಿಧಾನ ಶಿಲ್ಪಿಯ 'ರಾಷ್ಟ್ರೀಯತಾವಾದಿ ಮುಖ'ವನ್ನು ಇಡುವುದಾಗಿ ಹೇಳಿಕೊಂಡಿದೆ.

ಬಿಎಸ್‌ಪಿಯು ಅಂಬೇಡ್ಕರ್ ಅವರ ಹೆಸರನ್ನು ತನ್ನ ಮತಬ್ಯಾಂಕ್ ಹೆಚ್ಚಳಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದು, ಬಹುಮುಖಿ ವ್ಯಕ್ತಿತ್ವ ಹೊಂದಿರುವ ಅವರ ಕೇವಲ ಒಂದು ಭಾಗವನ್ನಷ್ಟೇ ಜನರ ಮುಂದಿಟ್ಟಿದೆ. ಅಂಬೇಡ್ಕರ್ ಓರ್ವ ಅಪ್ಟಟ ದೇಶಭಕ್ತರು. ಹಾಗಾಗಿ ಅವರ ರಾಷ್ಟ್ರೀಯತಾವಾದದ ಮುಖವನ್ನು ಬಿಜೆಪಿಯು ಜನರ ಮುಂದೆ ಎತ್ತಿ ತೋರಿಸಲಿದೆ ಎಂದು ಬಿಜೆಪಿಯ ಮಧ್ಯಪ್ರದೇಶ ಅನುಸೂಚಿತ ಜಾತಿ (ಪರಿಶಿಷ್ಟ ಜಾತಿ) ಮೋರ್ಚಾ ಅಧ್ಯಕ್ಷ ದುಶ್ಯಂತ್ ಕುಮಾರ್ ಗೌತಮ್ ತಿಳಿಸಿದ್ದಾರೆ.

ಆದರೆ ಈ ಮೂಲಕ ಅಂಬೇಡ್ಕರ್ ಹೆಸರಿನ ಲಾಭವನ್ನು ಕೇಸರಿ ಪಾಳಯವು ಪಡೆಯಲು ಯತ್ನಿಸುತ್ತಿದೆ ಮತ್ತು ಪಕ್ಷಕ್ಕೆ ದಲಿತರನ್ನು ಇನ್ನಷ್ಟು ಸೆಳೆಯಲು ಯತ್ನಿಸುತ್ತಿದೆ ಎಂಬ ವಾದವನ್ನು ಗೌತಮ್ ತಳ್ಳಿ ಹಾಕಿದರು.

ಬಿಜೆಪಿ ಯಾವತ್ತೂ ದಲಿತರ ಚಾಂಪಿಯನ್ ಎಂದೇ ಗುರುತಿಸಿಕೊಂಡು ಬಂದಿದೆ ಎಂದು ವ್ಯಾಖ್ಯಾನಿಸಿದರು.

ಬಿಜೆಪಿಯು ಯಾವತ್ತೂ ದಲಿತರ ಪರವಾಗಿಯೇ ಇದೆ. ಇಂದೋರ್ ಜಿಲ್ಲೆಯ ಮಾಹೋ ಸಮೀಪವಿರುವ ಅಂಬೇಡ್ಕರ್ ಸ್ಮಾರಕ ನಿರ್ಮಾಣವಾಗಿರುವುದು ಬಿಜೆಪಿ ಆಡಳಿತದ ಸಂದರ್ಭದಲ್ಲಿ. ಆದರೆ ಅದು ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ನಲುಗಿ ಹೋಗಿದ್ದುದನ್ನು ಎಲ್ಲರೂ ನೋಡಿದ್ದಾರೆ ಎಂದು ಬೆಟ್ಟು ಮಾಡಿ ತೋರಿಸಿದರು.

ಅಲ್ಲದೆ ಸಂವಿಧಾನ ಶಿಲ್ಪಿ ಕೊನೆಯುಸಿರೆಳೆದ ದೆಹಲಿಯಲ್ಲಿರುವ ಅವರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವೇ ಹೊರತು ಬೇರೆ ಸರಕಾರವಲ್ಲ ಎಂದರು.

ದಲಿತರ ಪರ ಎಂದು ಗುರುತಿಸಿಕೊಳ್ಳುತ್ತಿರುವ ಪಕ್ಷಗಳ ವಿರುದ್ದ ಇದೇ ಸಂದರ್ಭದಲ್ಲಿ ಅವರು ಪರೋಕ್ಷವಾಗಿ ದಾಳಿ ನಡೆಸುತ್ತಾ, ಅಂಬೇಡ್ಕರ್ ಅವರು ಕಾಲವಾದ 34 ವರ್ಷಗಳ ನಂತರ ಅವರಿಗೆ ಭಾರತ ರತ್ನ ಗೌರವವನ್ನು ನೀಡಿದ್ದು ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ 1990ರಲ್ಲಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ