ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋದಾಮು ನಿರ್ಲಕ್ಷಿಸುವ ಅಧಿಕಾರಿಗಳ ಅಮಾನತು: ಪವಾರ್ (Sharad Pawar | Rajya Sabha | foodgrains | India)
Bookmark and Share Feedback Print
 
ಭಾರತೀಯ ಆಹಾರ ನಿಗಮಕ್ಕೆ ಸೇರಿದ ವಿವಿಧ ಗೋದಾಮುಗಳಲ್ಲಿ ಆಹಾರ ವಸ್ತುಗಳು ಕೊಳೆತು ಹೋಗಲು ಕಾರಣವಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮದ ಹಲವು ಗೋದಾಮುಗಳಲ್ಲಿ ಆಹಾರ ಪದಾರ್ಥಗಳು, ಕಾಳುಗಳು ಕೊಳೆಯುತ್ತಿವೆ ಎಂಬ ಸದಸ್ಯರ ಕಳವಳಕ್ಕೆ ಉತ್ತರಿಸುತ್ತಿದ್ದ ಪವಾರ್, 2006ರ ನಂತರ ಕೇಂದ್ರದ ಘಟಕದಲ್ಲಿ ಆಹಾರ ವಸ್ತುಗಳ ಶೇಖರಣೆಯನ್ನು ಮೂರು ಪಟ್ಟುಗಳಷ್ಟು ಹೆಚ್ಚಿಸಲಾಗಿದೆ; ಇದರಿಂದಾಗಿ ರೈತರಿಗೆ ಅತ್ಯುತ್ತಮ ಮತ್ತು ನ್ಯಾಯಯುತ ಬೆಲೆಗಳನ್ನು ನೀಡಲು ಸಾಧ್ಯವಾಗುತ್ತಿದೆ ಎಂದರು.

ಗೋದಾಮುಗಳಲ್ಲಿನ ಆಹಾರ ವಸ್ತುಗಳ ಶೇಖರಣೆಯನ್ನು ಹೆಚ್ಚಳಗೊಳಿಸಿರುವುದರಿಂದ ನಿಗಮದ ಗೋದಾಮುಗಳಲ್ಲಿ ಜಾಗದ ಕೊರತೆ ಎದುರಾಗಿದೆ. ಇಲ್ಲಿರುವ ಮತ್ತೊಂದು ಕಾರಣ ರಾಜ್ಯ ಸರಕಾರಗಳು ಕೂಡ ಇದನ್ನು ಬಳಸುತ್ತಿರುವುದು. ಕನಿಷ್ಠ ಬೆಂಬಲ ಬೆಲೆಗಳನ್ನು ನೀಡುತ್ತಿರುವ ಪ್ರಮಾಣವೂ ಹೆಚ್ಚಾಗಿರುವುದರಿಂದ ಸಂಗ್ರಹಣೆ ಪ್ರಮಾಣವು ಕಳೆದ ಮೂರು ವರ್ಷಗಳಲ್ಲಿ ಏರಿಕೆಯಾಗಿದೆ ಎಂದರು.

ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಮತ್ತು ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ತಾನ ಮತ್ತು ಉತ್ತರಾಖಂಡಗಳಲ್ಲಿ ಮಳೆ ಮತ್ತು ನೆರೆಯಿಂದಾಗಿ ಆಹಾರ ವಸ್ತುಗಳು ಹಾಳಾಗಿರುವುದರ ಕುರಿತ ವರದಿಗಳು ಬಂದಿವೆ ಎಂದೂ ಸಚಿವರು ತಿಳಿಸಿದರು.

ಆದರೂ ಹಾನಿಗೀಡಾದ ಆಹಾರ ವಸ್ತುಗಳ ಕುರಿತು ನಿರ್ಧಾರಕ್ಕೆ ಬರುವಾಗ ಗೋದಾಮುಗಳಲ್ಲಿ ಶೇಖರಣೆ ಮಾಡಲಾಗಿದ್ದ ಆಹಾರ ಪದಾರ್ಥಗಳ ಪ್ರಮಾಣ ಮತ್ತು ಅದನ್ನು ಹೇಗೆ ಶೇಖರಣೆ ಮಾಡಲಾಗಿತ್ತು ಎಂಬ ವಿಧಾನವನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಈ ಕುರಿತು ನಿಗಮದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಉತ್ತರ ಪ್ರದೇಷ ಪಂಜಾಬ್, ಹರ್ಯಾಣ ಮತ್ತು ಉತ್ತರಾಖಂಡಗಳಲ್ಲಿನ ವಿವಿಧ ಗೋದಾಮುಗಳಲ್ಲಿನ ಗೋಧಿ ಸಂಗ್ರಹಣೆಗಾಗಿರುವ ಹಾನಿಯನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸುಮಾರು ಎಂಟು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆಹಾರ ವಸ್ತುಗಳ ಕೊಳೆಯದಂತೆ ಜಾಗರೂಕತೆ ವಹಿಸಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ