ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೀನ್ಸ್-ಟಾಪ್ ನಿಷೇಧ; ವಿದ್ಯಾರ್ಥಿನಿಯರಿಂದ ಆಕ್ರೋಶ (Jeans-top ban | Bareilly | Uttar Pradesh | girls)
Bookmark and Share Feedback Print
 
ಚುಡಾವಣೆ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಆಧುನಿಕ ಯುವತಿಯರ ದಿರಿಸುಗಳೇ ಕಾರಣ ಎಂಬ ವಾದಕ್ಕೆ ತಲೆದೂಗಿರುವ ಉತ್ತರ ಪ್ರದೇಶದ ಕಾಲೇಜೊಂದು ಜೀನ್ಸ್ ಮತ್ತು ಟಾಪ್‌ಗಳನ್ನು ಧರಿಸ ಬಾರದೆಂದು ವಿದ್ಯಾರ್ಥಿನಿಯರಿಗೆ ಫರ್ಮಾನು ಹೊರಡಿಸಿದೆ.
PTI

ಬರೇಲಿ ಜಿಲ್ಲೆಯ ಕಾಲೇಜೊಂದು ಇಂತಹ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿನಿಯರು ಜೀನ್ಸ್ ಪ್ಯಾಂಟ್ ಮತ್ತು ಶರ್ಟುಗಳನ್ನು ಧರಿಸುವುದರ ಮೇಲೆ ನಿಷೇಧ ಹೇರಿದೆ.

ಇದನ್ನು ಕಾಲೇಜಿನ ಮೇಲ್ವಿಚಾರಕ ಜೋಗಾ ಸಿಂಗ್ ಹೋತಿಯವರು ಸಮರ್ಥಿಸಿಕೊಂಡಿದ್ದಾರೆ. ಕಾಲೇಜಿನ ನಿಯಮಗಳ ಪ್ರಕಾರ ಇಂತಹ ಯಾವುದೇ ನಿಬಂಧನೆಗಳು ಇಲ್ಲದೇ ಇದ್ದರೂ ಹುಡುಗಿಯರು ಜೀನ್ಸ್ ಮತ್ತು ಶರ್ಟ್‌ಗಳನ್ನು ಧರಿಸುವುದು ಹಾಗೂ ಯಾರೇ ಆಗಲಿ ಮೊಬೈಲ್ ಫೋನುಗಳನ್ನು ಕಾಲೇಜಿನ ಕ್ಯಾಂಪಸ್ಸಿನೊಳಗೆ ತರುವುದರ ಮೇಲೆ ನಿಷೇಧ ಹೇರಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಮಗೆ ಇಷ್ಟವಾದ ಬಟ್ಟೆಗಳನ್ನು ಧರಿಸಲು ಸ್ವತಂತ್ರರು. ಆದರೆ ಹುಡುಗಿಯರು ಜೀನ್ಸ್ ಧರಿಸುವ ಮೂಲಕ ಕಾಲೇಜಿನ ವಾತಾವರಣವನ್ನು ಕುಲಗೆಡಿಸುತ್ತಿದ್ದಾರೆ. ಇದರಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ನಡುವೆ ಅತ್ಯುತ್ತಮ ಸಂಬಂಧವನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಅದೇ ರೀತಿ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಮೊಬೈಲ್ ಫೋನ್ ರಿಂಗಾಗುತ್ತಿರುವುದು ಅಥವಾ ಅದರ ಬಳಕೆಯು ಕೂಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗಮನ ವಿಕೇಂದ್ರೀಕರಣಕ್ಕೆ ಕಾರಣವಾಗುತ್ತಿದೆ ಎಂದು ಕಾಲೇಜಿನ ನಡೆಗೆ ಅವರು ಕಾರಣ ನೀಡಿದ್ದಾರೆ.

ವಿದ್ಯಾರ್ಥಿನಿಯರ ತೀವ್ರ ಆಕ್ರೋಶ...
ಜೀನ್ಸ್ ಪ್ಯಾಂಟ್ ಮತ್ತು ಶರ್ಟುಗಳ ಮೇಲೆ ಕಾಲೇಜು ನಿಷೇಧ ಹೇರಿರುವ ಕುರಿತು ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.

ಕಾಲೇಜು ಹುಡುಗಿಯರು ಜೀನ್ಸ್ ಪ್ಯಾಂಟ್ ಮತ್ತು ಶರ್ಟುಗಳನ್ನು ಧರಿಸುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದಿರುವ ರೀಟಾ ಎನ್ನುವ ವಿದ್ಯಾರ್ಥಿನಿ, ಸೆಲ್ ಫೋನುಗಳನ್ನು ಬಳಸುವುದರಿಂದಲೂ ನಮಗೆ ಉಪಯೋಗವಿದೆ ಎಂದು ನಿಷೇಧದ ವಿರುದ್ಧ ದನಿಯೆತ್ತಿದ್ದಾಳೆ.

ನಮ್ಮ ಕಾಲೇಜಿಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರುತ್ತಾರೆ. ಹಾಗಾಗಿ ಹೆತ್ತವರ ಜತೆ ಸಂಪರ್ಕದಲ್ಲಿರಲು ಇದು ಸಹಕಾರಿ. ಅಲ್ಲದೆ ಕಾಲೇಜು ಬಿಟ್ಟ ನಂತರ ಮನೆಗೆ ಹೋಗುವಾಗ ತಡವಾದಲ್ಲಿ, ಮನೆಯವರನ್ನು ಸಂಪರ್ಕಿಸಲು ಕೂಡ ಸುಲಭವಾಗುತ್ತದೆ ಎಂದು ಮೊಬೈಲ್ ಫೋನ್ ಬಳಕೆ ಪರವಾಗಿ ಆಕೆ ಮಾತನಾಡಿದ್ದಾಳೆ.

ಅದೇ ಹೊತ್ತಿಗೆ ಮತ್ತೊಬ್ಬ ವಿದ್ಯಾರ್ಥಿನಿ ಮೀನಾಕ್ಷಿ ಕಾಲೇಜಿನ ನಿಯಮವನ್ನು ಪಾಲಿಸಲು ಯಾವುದೇ ಅಡ್ಡಿಯಿಲ್ಲ ಎಂದಿದ್ದಾಳೆ.

ಕಾಲೇಜು ಆವರಣದಲ್ಲಿ ನಮ್ಮ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಕಾಲೇಜಿನ ನಿರ್ದೇಶನಗಳನ್ನು, ನಿಷೇಧಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ನಾವು ಅದನ್ನು ಪಾಲಿಸುತ್ತೇವೆ ಎಂದು ಮೀನಾಕ್ಷಿ ತಿಳಿಸಿದ್ದಾಳೆ.

ವರದಿಗಳ ಪ್ರಕಾರ ಇಲ್ಲಿನ 10ಕ್ಕೂ ಹೆಚ್ಚು ಕಾಲೇಜುಗಳು ಜೀನ್ಸು, ಶರ್ಟುಗಳು ಮತ್ತು ಮೊಬೈಲ್ ಫೋನುಗಳ ಮೇಲೆ ಈಗಾಗಲೇ ನಿಷೇಧ ಹೇರಿವೆ. ಕರ್ನಾಟಕದಲ್ಲೂ ಕೆಲವು ಕಾಲೇಜುಗಳಲ್ಲಿ ಇಂತಹ ನಿಯಮಗಳನ್ನು ಪಾಲಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ