ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐದು ವರ್ಷದಲ್ಲಿ 19 'ಮಿಗ್-21' ವಿಮಾನಗಳ ಪತನ! (MiG 21 fighter aircraft | IAF | Rajya Sabha | A K Antony)
Bookmark and Share Feedback Print
 
ಯಾರೋ ಮಾಡಿದ ತಪ್ಪಿಗೆ ಭಾರತೀಯ ವಾಯು ಸೇನೆಯ ಪೈಲಟ್‌ಗಳ ಕುಟುಂಬಗಳು ಗೋಳಿಡುತ್ತಿವೆ. ಹೌದು, ಸತತ ತಾಂತ್ರಿಕ ವೈಫಲ್ಯಗಳನ್ನು ಕಾಣುತ್ತಿರುವ ಮಿಗ್-21 ಯುದ್ಧ ವಿಮಾನಗಳಿಂದಾಗಿ ಅದೆಷ್ಟೋ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಇಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತೀಯ ವಾಯು ಪಡೆಯ 19 ಮಿಗ್-21 ಯುದ್ಧ ವಿಮಾನಗಳು ಪತನಗೊಂಡಿವೆ ಮತ್ತು ಅದರಲ್ಲಿ ಏಳು ಪೈಲಟ್‌ಗಳು ಮೃತರಾಗಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿಕೆ ನೀಡಿದ್ದಾರೆ.

2005ರ ಏಪ್ರಿಲ್ ತಿಂಗಳಿನಿಂದ ಇದುವರೆಗೆ 19 ಮಿಗ್-21 ವಿಮಾನಗಳು ಪತನಗೊಂಡಿವೆ. ಅಪಘಾತಗಳಲ್ಲಿ ಏಳು ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 28 ತಿಂಗಳುಗಳ ಅವಧಿಯಲ್ಲಿ ಇನ್ನಿತರ 29 ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ರಾಜ್ಯಸಭೆಗೆ ತಿಳಿಸಿದ್ದಾರೆ.

2008-09ರ ಸಾಲಿನಲ್ಲಿ 13 ಯುದ್ಧ ವಿಮಾನಗಳು, 2009-10ರಲ್ಲಿ 14 ಹಾಗೂ ಈ ವರ್ಷದ ಆಗಸ್ಟ್ ಐದರವರೆಗೆ ಎರಡು ಘಟನೆಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರಾದರೂ, ಸಾವನ್ನಪ್ಪಿದ ಪೈಲಟ್‌ಗಳ ಕುರಿತು ವಿವರಣೆ ನೀಡಿಲ್ಲ.

ಯುದ್ಧದಿಂದಾಗ ಗಾಯಾಳುಗಳ ಕುರಿತ ಪ್ರಶ್ನೆಯೊಂದಕ್ಕೆ ರಕ್ಷಣಾ ಸಚಿವಾಲಯದ ಎಂ.ಎಂ. ಪಲ್ಲಂರಾಜು ಉತ್ತರಿಸಿದ್ದು ಹೀಗೆ.

ದೇಶದ ವಿರುದ್ಧ ವಿವಿಧ ರೀತಿಯ ದಾಳಿಗಳು ನಡೆದಾಗ ಹೋರಾಟ ನಡೆಸಿದ ಸಂದರ್ಭದಲ್ಲಿ 23,001 ಅಧಿಕಾರಿಗಳು ಮತ್ತು ಜವಾನರು ಗಾಯಗೊಂಡಿದ್ದಾರೆ. 2,515 ಅಧಿಕಾರಿಗಳು, 1,253 ಕಿರಿಯ ಅಧಿಕಾರಿಗಳು ಮತ್ತು 19,233 ಇತರ ರ‌್ಯಾಂಕುಗಳಿಗೆ ಸೇರಿದ ಜವಾನರು ದೈಹಿಕ ಊನತೆಗಳಿಗೊಳಗಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ