ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಜಾದ್ 'ಹತ್ಯೆ'; ಕಿಶನ್‌ಜೀಯಿಂದ ಮಮತಾ ಸಮರ್ಥನೆ (Kishenji | Maoist leader | Trinamool Congress | Mamata Banerjee)
Bookmark and Share Feedback Print
 
ನಕ್ಸಲರ ವಕ್ತಾರ ಚೆರುಕುರಿ ರಾಜಕುಮಾರ್ ಆಲಿಯಾಸ್ ಆಜಾದ್ ಎನ್‌ಕೌಂಟರ್ ಸರಿಯಲ್ಲ ಎಂದಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾವೋವಾದಿ ನಾಯಕ ಕಿಶನ್‌ಜೀ, ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದುಕೊಂಡ ನಂತರವಷ್ಟೇ ಮಾತುಕತೆ ಸಾಧ್ಯ ಎಂದಿದ್ದಾನೆ.

ಆಜಾದ್ ಅವರನ್ನು ಮೋಸದಿಂದ ಕೊಲ್ಲಲಾಯಿತು ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ. ಮಮತಾ ಅವರು ಸತ್ಯವಾದುದನ್ನೇ ಮಾತನಾಡಿದ್ದಾರೆ. ಅದಕ್ಕಾಗಿ ಸಂಸತ್ತಿನಲ್ಲಿ ಯಾಕೆ ಕೋಲಾಹಲ ಸೃಷ್ಟಿಯಾಗಬೇಕು ಎಂದು ಅಜ್ಞಾತ ಸ್ಥಳವೊಂದರಿಂದ ದೂರವಾಣಿಯಲ್ಲಿ ಪ್ರಶ್ನಿಸಿದ್ದಾನೆ.

ಮಮತಾ ಅವರ ಹೇಳಿಕೆ ಬಗ್ಗೆ ಬಿಜೆಪಿ ಮತ್ತು ಸಿಪಿಎಂಗಳು ಬೊಬ್ಬೆ ಹಾಕುತ್ತಿವೆ. ಆದರೆ ಸರಕಾರದ ಪ್ರಸ್ತಾಪದಂತೆ ಆಜಾದ್ ಮಾತುಕತೆಯ ಕುರಿತು ಕಾರ್ಯಪ್ರವೃತ್ತರಾಗಿದ್ದಾಗ ಅವರನ್ನು ಕೊಂದಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅವರು ಹೇಳುತ್ತಿಲ್ಲ ಎಂದು ಕಿಶನ್‌ಜೀ ಅಸಹನೆ ವ್ಯಕ್ತಪಡಿಸಿದ್ದಾನೆ.

ಅದೇ ಹೊತ್ತಿಗೆ ಆಜಾದ್ ಹತ್ಯೆಗಾಗಿ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ ರಾಜೀನಾಮೆ ನೀಡಬೇಕೆಂದು ನಕ್ಸಲ್ ನಾಯಕ ಆಗ್ರಹಿಸಿದ್ದಾನೆ.

ಸರಕಾರದ ಮಾತುಕತೆ ಪ್ರಸ್ತಾಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಆತ, ನಮಗೆ ಸಾಕಷ್ಟು ಮೋಸವಾಗಿರುವ ನಂತರವೂ ನಾವು ಕೇಂದ್ರ ಸರಕಾರದ ಮಾತುಕತೆ ಆಹ್ವಾನಕ್ಕೆ ನಮ್ಮ ಕೇಂದ್ರೀಯ ಮತ್ತು ರಾಜ್ಯದ ಸಮಿತಿಗಳು ಸಿದ್ಧ. ಆದರೆ ಕೇಂದ್ರವು ಮೊದಲು ತನ್ನ ಆಪರೇಷನ್ ಗ್ರೀನ್ ಹಂಟ್ ಮತ್ತು ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ನಿಬಂಧನೆ ಮುಂದಿಟ್ಟಿದ್ದಾನೆ.

ಅದೇ ಹೊತ್ತಿಗೆ ಮಮತಾ ಬ್ಯಾನರ್ಜಿಯವರು ಆಜಾದ್ ಹತ್ಯೆಯ ಕುರಿತು ಸರಕಾರದ ನೀತಿಗಳ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ ಎಂದು ಮತ್ತೊಂದು ಸುತ್ತಿನ ಸಮರ್ಥನೆ ಮಾಡಿಕೊಂಡಿದ್ದಾನೆ ಕಿಶನ್.

ಬ್ಯಾನರ್ಜಿಯವರು ಶಸ್ತ್ರಾಸ್ತ್ರ ತ್ಯಾಗ ಮಾಡಿ, ಮಾತುಕತೆಗೆ ಮುಂದಾಗುವಂತೆ ಹೇಳಿದ್ದಾರೆ. ಅವರು ನಮ್ಮ ಉದ್ದೇಶಗಳಲ್ಲದ ವಿಚಾರಗಳನ್ನು ಮಾಡುವಂತೆ ಸೂಚನೆ ನೀಡುತ್ತಿದ್ದಾರೆ. ಅವರು ನಮ್ಮಲ್ಲಿ ಶಸ್ತ್ರಾಸ್ತ್ರ ತ್ಯಾಗ ಮಾಡಬೇಕೆಂದು ಹೇಳುತ್ತಿದ್ದಾರೆಯೇ ಹೊರತು, ಕೇಂದ್ರದಲ್ಲಿ ಹಿಂಸಾಚಾರವನ್ನು ನಿಲ್ಲಿಸಿ ಎಂದು ಹೇಳುತ್ತಿಲ್ಲ. ಪ್ರಸಕ್ತ ಸ್ಥಿತಿಯಲ್ಲಿ ಅವರಿಗದು ಸಾಧ್ಯವಿಲ್ಲ ಎಂದು ಕಿಶನ್‌ಜೀ ಪರಿಸ್ಥಿತಿಯನ್ನೂ ವಿಶ್ಲೇಷಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ