ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಯೋತ್ಪಾದನೆ ತಡೆದರೆ ಪಾಕ್ ಜತೆ ಮಾತುಕತೆ: ಕೃಷ್ಣ (anti-India attacks | Pakistan | SM Krishna | Hafiz Saeed)
Bookmark and Share Feedback Print
 
ಭಾರತದ ವಿರುದ್ಧದ ದಾಳಿಗಳಿಗೆ ತನ್ನ ನೆಲವನ್ನು ಬಳಸಲು ಅವಕಾಶ ನೀಡುವುದಿಲ್ಲ ಮತ್ತು ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದಿಲ್ಲ ಎಂಬ ಭರವಸೆಯನ್ನು ಪಾಕಿಸ್ತಾನ ನೀಡಿದಲ್ಲಿ ಮಾತುಕತೆ ಜೀವಂತವಾಗಿರಿಸಲು ನವದೆಹಲಿ ಬದ್ಧವಾಗಿದೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಯಲ್ಲಿನ ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಚಿವರು, 2004ರಿಂದ ಮುಂಬೈ ಭಯೋತ್ಪಾದನಾ ದಾಳಿಯವರೆಗೆ ಅಡೆತಡೆಯಿಲ್ಲದೆ ಮಾತುಕತೆಗಳು ಸಾಗಿದ್ದವು. ಆದರೆ ಮುಂಬೈ ದಾಳಿಯ ನಂತರ ನಾವು ಸಮಗ್ರ ದ್ವಿಪಕ್ಷೀಯ ಮಾತುಕತೆಯನ್ನು ಅಮಾನತುಗೊಳಿಸಲು ನಿರ್ಧರಿಸಿದ್ದೆವು ಎಂದರು.

ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಜೀವಂತವಾಗಿರಿಸಲು ಬದ್ಧವಾಗಿದೆ. ಆದರೆ ಇಸ್ಲಾಮಿಕ್ ರಾಷ್ಟ್ರವು ತನ್ನ ನೆಲದಿಂದ ಭಾರತದ ವಿರುದ್ಧ ಯಾವುದೇ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಮತ್ತು ಭಾರತ ವಿರೋಧಿ ಚಳುವಳಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದರೆ ಮಾತ್ರ ಎಂದು ನುಡಿದರು.

ಈ ಸಂಬಂಧ ದೊಡ್ಡ ಪ್ರಮಾಣದಲ್ಲಿ ನಂಬಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಮುಂದಿನ ದಿನಗಳಲ್ಲಿ ನಡೆಯಬಹುದಾದ ಯಾವುದೇ ದಾಳಿಯನ್ನು ಮತ್ತು ಜಿಹಾದಿ ಪಡೆಗಳು ಮಾಡುತ್ತಿರುವ ಪ್ರಚೋದನಾಕಾರಿ ಭಾಷಣಗಳನ್ನು ತಡೆಯಬೇಕಾಗಿದೆ ಎಂದಿರುವ ಕೃಷ್ಣ, ನಾವು ಪಾಕಿಸ್ತಾನದ ಜತೆ ಸ್ನೇಹಪರ, ಪರಸ್ಪರ ಸಹಕಾರಯುತ ಸಂಬಂಧವನ್ನು ಬಯಸುತ್ತಿದ್ದೇವೆ ಎಂದರು.

ಉಭಯ ದೇಶಗಳ ಪ್ರಧಾನ ಮಂತ್ರಿಗಳು ತಿಂಫುವಿನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ, ತಮ್ಮ ನಡುವಿನ ವಿಶ್ವಾಸದ ಕೊರತೆಯನ್ನು ನೀಗಿಸಲು ಶ್ರಮಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ನಂತರದ ದಿನದಗಳಲ್ಲಿ ವಿದೇಶಾಂಗ ಕಾರ್ಯದರ್ಶಿಗಳು ಮತ್ತು ವಿದೇಶಾಂಗ ಸಚಿವರುಗಳ ಮಾತುಕತೆ ನಡೆದಿತ್ತು.

ಮುಂಬೈ ದಾಳಿಯ ಹಿಂದೆ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಹೊಂದಿರುವ ಪಾಕಿಸ್ತಾನದ ಸಂಘಟನೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಭಾರತ ಪರಿಗಣಿಸುತ್ತದೆ. ಆದರೂ ಪ್ರಧಾನ ಮಂತ್ರಿಯವರು ನಮಗೆ ನೀಡಿದ ಹೊಣೆಗಾರಿಕೆಯನ್ನು ಈಡೇರಿಸುವ ಕುರಿತು ನಾವು ಯತ್ನಿಸುತ್ತಿದ್ದೇವೆ ಎಂದು ಕೃಷ್ಣ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ