ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೇಹ್ ಮೇಘ ಸ್ಫೋಟ; ಸಾವಿನ ಸಂಖ್ಯೆ 183ಕ್ಕೇರಿಕೆ (Leh | India | Kashmir | Missing)
Bookmark and Share Feedback Print
 
ಜಮ್ಮು ಕಾಶ್ಮೀರದ ಲೇಹ್ ಪಟ್ಟಣದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಮೇಘ ಸ್ಫೋಟದಲ್ಲಿ ಬಲಿಯಾದವರ ಸಂಖ್ಯೆ 183ಕ್ಕೇರಿದೆ. ಇನ್ನು ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಐದು ವಿದೇಶಿಯರ ಸಹಿತ ಒಟ್ಟು 183 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಐಜಿ ಫಾರೂಕ್ ಅಹ್ಮದ್ ತಿಳಿಸಿದ್ದಾರೆ. ಇವರಲ್ಲಿ ಇಬ್ಬರು ಫ್ರೆಂಚ್, ತಲಾ ಒಬ್ಬರಂತೆ ಸ್ಪಾನಿಷ್, ಇಟೆಲಿ ಮತ್ತು ರೊಮಾನಿಯಾದವರು ಸೇರಿಕೊಂಡಿದ್ದಾರೆ.

ನೆರೆ ಸಂತ್ರಸ್ತ ಗ್ರಾಮಗಳಲ್ಲಿನ ರಕ್ಷಣಾ ಕಾರ್ಯಾಚರಣೆಯು ಮುಂದುವರಿದಿದೆ. ಆದರೆ ಕಾಣೆಯಾದವ ಸಂಖ್ಯೆ ಖಚಿತವಾಗಿಲ್ಲವಾದುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮಣ್ಣಿನ ರಾಶಿ ಮತ್ತು ಅವಶೇಷಗಳ ನಡುವೆ ರಕ್ಷಣಾ ಕಾರ್ಯಕರ್ತರು ಶೋಧ ಮುಂದುವರಿಸಿದ್ದಾರೆ. ಕಾಣೆಯಾದವರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟು 163 ವಿದೇಶಿಯರು ಅಲ್ಲಿ ಇದ್ದರು. ಆದರೆ ಅವರೀಗಲೂ ಹೋಟೆಲ್‌ಗಳಿಗೆ ಮರಳಿ ತಲುಪಿಲ್ಲ ಎಂದು ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಾ ನಿಯೋಗ ಭಾರತಕ್ಕೆ...
ಅದೇ ವೇಳೆ 100 ಮಂದಿ ಅಮೆರಿಕನ್ನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಅಮೆರಿಕಾ ರಾಯಭಾರಿಯು ಸಂತ್ರಸ್ತರ ನೆರವಿಗಾಗಿ ತನ್ನ ನಿಯೋಗವನ್ನು ಭಾರತಕ್ಕೆ ರವಾನಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೇಹ್, ಕಾಶ್ಮೀರ, ಭಾರತ, ಮೇಘ ಸ್ಫೋಟ