ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೆ ಎಲ್ಲವೂ ವಿದೇಶದಿಂದಲೇ ಆಮದಾಗ್ಬೇಕು: ಉದ್ಧವ್ (Uddhav Thackeray | Shivsena | Congress | Coach | Import)
Bookmark and Share Feedback Print
 
ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೂ ಸೇರಿದಂತೆ ಎಲ್ಲವೂ ವಿದೇಶದಿಂದಲೇ ಆಮದಾಗಬೇಕಿದೆ ಎಂದು ಲೇವಡಿ ಮಾಡಿದ್ದಾರೆ ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ರಾಜ್ಯದ ಕ್ರೀಡಾಳುಗಳಿಗೆ ವಿದೇಶೀ ಕೋಚ್‌ಗಳನ್ನು ನೇಮಿಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉದ್ಧವ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ದೇಶವು ಈಗಾಗಲೇ ಗೋಧಿ ಮತ್ತು ಹಾಲು ಮುಂತಾದ ಆಹಾರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ಗೆ ಎಲ್ಲವೂ ವಿದೇಶದಿಂದಲೇ ಆಮದಾಗಬೇಕು, ಆಮದಾದ ನಾಯಕರೂ ಬೇಕು ಎಂದು ಉದ್ಧವ್ ಅವರು ಪಕ್ಷದ ಸಾಪ್ತಾಹಿಕ 'ಮಾರ್ಮಿಕ' ಪತ್ರಿಕೆಯ 50ನೇ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಚಿನ್ನ ಗೆದ್ದ ಶೂಟರ್ ತೇಜಸ್ವಿನಿ ಸಾವಂತ್ ಅವರ ಸನ್ಮಾನ ಸಮಾರಂಭದಲ್ಲಿ ಚವಾಣ್ ಅವರು ವಿದೇಶೀ ಕೋಚ್‌ಗಳ ನೇಮಕದ ಕುರಿತು ಮಾತುಗಳನ್ನಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ