ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ನಾನು ತಂದೆಯಲ್ಲ' ಎಂದ ತಿವಾರಿಗೆ ಕೋರ್ಟ್ ದಂಡ (N D Tiwari | Rohit Shekhar | Paternity Suit | Congress)
Bookmark and Share Feedback Print
 
PTI
ತನ್ನ ಮಗ ಎಂದು ಹೇಳಿಕೊಳ್ಳುತ್ತಿರುವ ದೆಹಲಿಯ ವಕೀಲರೊಬ್ಬರು ಸಲ್ಲಿಸಿದ್ದ ಪಿತೃತ್ವ ಕೇಸಿಗೆ ಸಂಬಂಧಿಸಿ ಬದಲಾವಣೆ ಕೋರಿ ಕಾಂಗ್ರೆಸ್ ಹಿರಿಯ ನೇತಾರ, ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ಎನ್.ಡಿ.ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಲೈಂಗಿಕ ಕಾಂಡಕ್ಕೆ ಸಂಬಂಧಿಸಿ ರಾಜ್ಯಪಾಲ ಹುದ್ದೆ ತೊರೆಯಬೇಕಾಗಿಬಂದಿದ್ದ ವಯೋವೃದ್ಧ ನಾರಾಯಣ ದತ್ತ ತಿವಾರಿ ಅವರಿಗೆ ನ್ಯಾಯಾಧೀಶ ರವೀಂದ್ರ ಭಟ್ ಅವರು 75 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ಆದೇಶ ಹೊರಡಿಸಿದ್ದಾರೆ.

ರೋಹಿತ್ ಶೇಖರ್ ಎಂಬವರು, ತಿವಾರಿ ತನ್ನ ತಂದೆ ಎಂದು ಘೋಷಿಸಿ ಸಲ್ಲಿಸಿದ್ದ ಪಿತೃತ್ವ ಕೇಸಿಗೆ ಮತ್ತಷ್ಟು ಹೆಚ್ಚುವರಿ ಅಂಶಗಳನ್ನು ಸೇರಿಸಿರುವುದನ್ನು ಪ್ರಶ್ನಿಸಿ ತಿವಾರಿ ಅರ್ಜಿ ಸಲ್ಲಿಸಿದ್ದರು. 2005ರಲ್ಲಿ ತಿವಾರಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಲು ಪ್ರಯತ್ನಿಸಿದ್ದೆ ಎಂಬ ಹೊಸ ಅಂಶವನ್ನು ಕೇಸಿನಲ್ಲಿ ಸೇರಿಸುವ ಮೊದಲು ನ್ಯಾಯಾಲಯದ ಅನುಮತಿ ಕೇಳಬೇಕಾಗಿತ್ತು ಎಂಬುದು ತಿವಾರಿ ಆಕ್ಷೇಪ.

ತಾಯಿ ಉಜ್ವಲಾ ಶರ್ಮಾ ಮತ್ತು ತಿವಾರಿ ನಡುವಿನ ಸಂಬಂಧದಿಂದಾಗಿ ತಾನು ಹುಟ್ಟಿದ್ದಾಗಿ ರೋಹಿತ್ ಅವರು ದಾವೆಯಲ್ಲಿ ತಿಳಿಸಿದ್ದರೆ, ಕಾಂಗ್ರೆಸ್ ನಾಯಕ ತಿವಾರಿ ಇದನ್ನು ನಿರಾಕರಿಸಿದ್ದರು. ಈ ಬಗ್ಗೆ ಡಿಎನ್ಎ ಪರೀಕ್ಷೆಗೂ ನಿರಾಕರಿಸಿದ್ದ ತಿವಾರಿ, ತಾನೆಂದಿಗೂ ರೋಹಿತ್ ತಾಯಿ ಜೊತೆ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ವಾದಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ