ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರದಕ್ಷಿಣೆ ಕಾಯ್ದೆಗೆ ತಿದ್ದುಪಡಿ ತನ್ನಿ: ಕೇಂದ್ರಕ್ಕೆ ಸುಪ್ರೀಂ (Supreme Court | Change dowry law | Dalveer Bhandari | Ranchi,)
Bookmark and Share Feedback Print
 
ವರದಕ್ಷಿಣೆ ವಿರೋಧಿ ಕಾನೂನು ದುರ್ಬಳಕೆ ಆಗುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿರುವ ಸರ್ವೊಚ್ಚನ್ಯಾಯಾಲಯ, ಈ ಕಾನೂನಿನ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಕೇಂದ್ರ ಸರಕಾರ ವರದಕ್ಷಿಣೆ ವಿರೋಧಿ ಕಾನೂನಿಗೆ ಸೂಕ್ತ ತಿದ್ದುಪಡಿ ತರುವುದು ಸೂಕ್ತ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

ವರದಕ್ಷಿಣೆ ವಿರೋಧಿ ಕಾಯ್ದೆ ತಿದ್ದುಪಡಿ ಮೊದಲು ಇದನ್ನು ಕಾನೂನು ಸಚಿವಾಲಯ ಪರಿಶೀಲಿಸಿ ಸೂಕ್ತ ಬದಲಾವಣೆ ಮಾಡಬೇಕು ಎಂದು ಸರ್ವೊಚ್ಚ ನ್ಯಾಯಾಲಯದ ದಲ್ವೀರ್ ಭಂಡಾರಿ ನೇತೃತ್ವದ ಪೀಠ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ಇತ್ತೀಚೆಗೆ ವರದಕ್ಷಿಣೆ ವಿರೋಧಿ ಕಾನೂನು ದುರ್ಬಳಕೆ ಆಗುತ್ತಿರುವ ಪ್ರಕರಣವೇ ಹೆಚ್ಚಾಗಿದೆ. ಅಮಾಯಕರು ಕೂಡ ಈ ಕಾನೂನಿನ ಬಲೆಯೊಳಗೆ ಸಿಕ್ಕಿ ಕಠಿಣ ಕ್ರಮದ ಆತಂಕ ಎದುರಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲು ಸೂಕ್ತ ಸಮಯ ಎಂದು ತಿಳಿಸಿದ್ದಾರೆ.

ಈ ಕಾನೂನಿಗೆ ತಿದ್ದುಪಡಿ ತರುವ ಮೊದಲು ಕೇಂದ್ರ ಸರಕಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯಾಕೆಂದರೆ ಸಮಾಜದ ಬಹುದೊಡ್ಡ ವರ್ಗದ ಹಿತಾಸಕ್ತಿಗೆ ಅನುಗುಣವಾಗಿ ಕಾನೂನು ತಿದ್ದುಪಡಿ ಮಾಡುವ ಅಗತ್ಯವಿರುವುದರಿಂದ ಸಾರ್ವಜನಿಕರ ಅಭಿಪ್ರಾಯ ಮುಖ್ಯ ಎಂದು ಪೀಠ ಹೇಳಿದೆ.

ಅಷ್ಟೇ ಅಲ್ಲ ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಕೂಡ ಆ ಬಗ್ಗೆ ಪೋಷಕರಿಗೆ ಸರಿಯಾದ ತಿಳಿವಳಿಕೆ ಹೇಳಿ ಅಂತಹ ಜೋಡಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವಂತೆಯೂ ಸಲಹೆ ನೀಡಿದರು. ರಾಂಚಿಯ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ವಿಚಾರಣೆ ವೇಳೆ ಅಪೆಕ್ಸ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ