ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಸಂಪೂರ್ಣವಾಗಿ ಬರಗಾಲ ಪೀಡಿತ: ನಿತೀಶ್ ಕುಮಾರ್ (Nitish Kumar | Bihar | drought | Patna | government)
Bookmark and Share Feedback Print
 
ಬಿಹಾರ ರಾಜ್ಯ ಸಂಪೂರ್ಣ ಬರಗಾಲ ಪೀಡಿತವಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಘೋಷಿಸಿದ್ದು, ಆ ನಿಟ್ಟಿನಲ್ಲಿ ತೊಂದರೆಗೊಳಗಾದ ರೈತರಿಗೆ ನೆರವು ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿಹಾರ ಸಂಪೂರ್ಣವಾಗಿ ಸತತ ನಾಲ್ಕು ವರ್ಷಗಳಿಂದ ನೈಸರ್ಗಿಕ ಆಪತ್ತಿಗೆ ಒಳಗಾಗಿದೆ. 2007ರಲ್ಲಿ ಪ್ರವಾಹಕ್ಕೆ ತುತ್ತಾಗಿದೆ. 2008ರಲ್ಲಿಯೂ ಅದೇ ಸ್ಥಿತಿ ಆಗಿತ್ತು. ಆ ನಂತರ ರಾಜ್ಯ ಬರಗಾಲ ಸ್ಥಿತಿ ಎದುರಿಸುವಂತಾಗಿದೆ. ಇವೆಲ್ಲ ಸಮಸ್ಯೆಗಳ ನಡುವೆ ಬಿಹಾರ ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ಇಲ್ಲಿನ ಗಾಂಧಿಮೈದಾನದಲ್ಲಿ 64ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ನಿತೀಶ್ ಮಾತನಾಡುತ್ತ ಹೇಳಿದರು.

ರಾಜ್ಯದ 38 ಜಿಲ್ಲೆಗಳಲ್ಲಿ 28 ಬರಗಾಲ ಪೀಡಿತ ಜಿಲ್ಲೆಗಳು ಎಂದು ಆಗೋಸ್ಟ್ 3ರಂದು ಸರಕಾರ ಘೋಷಿಸಿತ್ತು. ಇದರಲ್ಲಿ ಸಾಹರ್ಸಾ, ಸುಪೌಲ್, ಪುರ್ನೆಯಾ, ಮಾದೇಪುರಾ, ಪಶ್ಚಿಮ ಚಂಪಾರಣ್ಯ, ಗೋಪಾಲ್‌ಗಂಜ್, ಖಾಗಾರಿಯಾ, ಕಿಶನ್‌ಗಂಜ್, ಅರಾರಿಯಾ ಮತ್ತು ಕಾತಿಹಾರ್ ಸೇರಿದೆ.

ಆ ನಿಟ್ಟಿನಲ್ಲಿ ಮೊದಲಿಗೆ ಪ್ರವಾಹ ಪೀಡಿತ ಪ್ರದೇಶದಲ್ಲಿನ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಸರಕಾರ ಬದ್ದವಾಗಿದೆ ಎಂದು ತಿಳಿಸಿದ ನಿತೀಶ್ ಕುಮಾರ್, ಅದೇ ರೀತಿ ರೈತರು ಕೋ ಆಪರೇಟಿವ್ ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿ ದಿನಾಂಕವನ್ನು ಕೂಡ ಮುಂದೂಡಲಾಗಿದೆ ಎಂದರು.

ಅಷ್ಟೇ ಅಲ್ಲ ರೈತರಿಗಾಗಿ ಪ್ರತಿ ಒಂದು ಲೀಟರ್ ಡಿಸೇಲ್ ಅನ್ನು 20 ರೂಪಾಯಿಯಲ್ಲಿ ನೀಡುವ ನೆಲೆಯಲ್ಲಿ 570 ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಹಾಗಾಗಿ ಅವರು ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಇಂಜಿನ್‌ಗೆ ಡಿಸೇಲ್ ಉಪಯೋಗಿಸುತ್ತಾರೆ. ಅದಕ್ಕಾಗಿ ಸಹಾಯಧನ ನೀಡಿರುವುದಾಗಿ ಸ್ಪಷ್ಟಪಡಿಸಿದರು.

ಬರಗಾಲ ಪೀಡಿತ ಬಿಹಾರ ರಾಜ್ಯಕ್ಕಾಗಿ 5062 ಕೋಟಿ ರೂಪಾಯಿಯನ್ನು ವಿಶೇಷ ಪ್ಯಾಕೇಜ್ ಅಡಿಯಲ್ಲಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಆದರೆ ಈ ಸಂದರ್ಭದಲ್ಲಿ ಜನರು ಯಾವುದೇ ರೀತಿಯಲ್ಲೂ ಕೆಟ್ಟ ಭಾವನೆ ತಳೆಯಬಾರದು. ಸಮಸ್ಯೆ ನಿವಾರಣೆಗಾಗಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸರಕಾರ ಶಕ್ತಿ ಮೀರಿ ಶ್ರಮಿಸುತ್ತಿರುವುದಾಗಿ ನಿತೀಶ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ