ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಜಯ ಮಲ್ಯ ವೆಬ್‌ಸೈಟ್‌ ಹ್ಯಾಕ್: ಪಾಕ್ ಎಚ್ಚರಿಕೆ ಸಂದೇಶ! (Vijay Mallya | website | Pak group hacks | Pakistan Cyber Army)
Bookmark and Share Feedback Print
 
PTI
ಅಕ್ರಮವಾಗಿ ಗಡಿಯೊಳಗಿನಿಂದ ನುಸುಳಿ ದಾಳಿ ನಡೆಸುವುದು, ಉಗ್ರರಿಗೆ ನೆರವು ನೀಡಿ ದಾಳಿ ನಡೆಸುವುದು ಪಾಕಿಸ್ತಾನದ ಮಾಮೂಲಿ ಚಾಳಿ. ಆದರೆ ಇದೀಗ ರಾಜ್ಯಸಭಾ ಸದಸ್ಯ, ಮದ್ಯ ದೊರೆ ವಿಜಯ್ ಮಲ್ಯ ಅವರ ವೆಬ್‌ಸೈಟ್ ಅನ್ನೇ ಪಾಕಿಸ್ತಾನದ ಸೈಬರ್ ಸೇನೆ ವಿರೂಪಗೊಳಿಸಿ, ಅದರಲ್ಲಿ ಪಾಕಿಸ್ತಾನದ ಧ್ವಜವನ್ನು ಚಿತ್ರಿಸಿ ಭಾರತದ ಸೈಬರ್ ಕ್ಷೇತ್ರಕ್ಕೆ ಬೆದರಿಕೆ ಒಡ್ಡುವ ಸಂದೇಶ ರವಾನಿಸಿರುವ ಆಘಾತಕಾರಿ ಅಂಶ ಭಾನುವಾರ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ತನ್ನ ಖಾಸಗಿ ವೆಬ್‌ಸೈಟ್ ಅನ್ನು ಪಾಕಿಸ್ತಾನದ ಸೈಬರ್ ಸೇನೆ ಈ ರೀತಿ ದುರ್ಬಳಕೆ ಮಾಡಿ, ಬೆದರಿಕೆಯ ಸಂದೇಶ ರವಾನಿಸಿರುವ ಬಗ್ಗೆ ಪೊಲೀಸ್ ಇಲಾಖೆಗೆ ದೊರು ಸಲ್ಲಿಸಲಾಗಿದೆ ಎಂದು ಮಲ್ಯ ಅವರ ವಕ್ತಾರ ಮೀರ್‌ಪುರಿ ತಿಳಿಸಿದ್ದಾರೆ.

ವಿಜಯ್ ಮಲ್ಯ ಅವರು ಭಾನುವಾರ ಬೆಳಿಗ್ಗೆ ವೆಬ್‌ಸೈಟ್ ತೆರೆದಾಗ ಅದರಲ್ಲಿ ಪಾಕಿಸ್ತಾನದ ಧ್ವಜ ಮತ್ತು ಸಂದೇಶ ಕಂಡು ತಾನು ಆಘಾತಕ್ಕೊಳಗಾಗಿರುವುದಾಗಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಪಾಕ್ ಕಿಡಿಗೇಡಿಗಳ ಈ ಕೃತ್ಯವನ್ನು ಕೇಂದ್ರ ಸರಕಾರದ ಗಮನಕ್ಕೂ ತರುವುದಾಗಿ ಹೇಳಿದ್ದಾರೆ.

'ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ. ಇದು ಹುಡುಗಾಟವಲ್ಲ, ಕೊನೆಯ ಬಾರಿಗೆ ನಿಮ್ಮನ್ನು ಎಚ್ಚರಿಸುತ್ತಿದ್ದೇವೆ. ಸೈಬರ್ ಕ್ಷೇತ್ರದಲ್ಲಿ ನೀವು ಭದ್ರವಾಗಿದ್ದೀರಿ ಎಂದು ಬೀಗಬೇಡಿ. ನಿಮ್ಮ ಸೈಬರ್ ಸ್ಪೇಸ್ ಅನ್ನು ನರಕ ಮಾಡಿ ನಿಮ್ಮನ್ನು ನಾವು ಸಮುದ್ರದಾಳಕ್ಕೆ ಎಸೆಯುತ್ತೇವೆ. ಪಾಕಿಸ್ತಾನದ ಯಾವುದೇ ವೆಬ್‌ಸೈಟ್ ಅನ್ನು ಭಾರತೀಯರು ವಿರೂಪಗೊಳಿಸಿದ್ದೇ ಆದಲ್ಲಿ ನಾವು ಪ್ರತೀಕಾರ ತೀರಿಸಿಕೊಳ್ಳದೆ ಬಿಡಲಾರೆವು' ಎಂದು ಸಂದೇಶದಲ್ಲಿ ಎಚ್ಚರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ