ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಗುಂಡಿನ ಕಾಳಗ ಅಂತ್ಯ; ಇನ್ನೊಬ್ಬ ಉಗ್ರ ಬಲಿ (Kashmir gunbattle ends | Army | Rajouri | Lashkar-e-Taiba militant)
Bookmark and Share Feedback Print
 
ರಾಜೌರಿ ಜಿಲ್ಲೆಯಲ್ಲಿ ಕಳೆದ 50 ಗಂಟೆಗಳಿಂದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿದ್ದ ಸುದೀರ್ಘ ಗುಂಡಿನ ಕಾಳಗ ಸೋಮವಾರ ಓರ್ವ ಲಷ್ಕರ್ ಇ ತೋಯ್ಬಾ ಉಗ್ರ ಹಾಗೂ ಯೋಧನೊಬ್ಬನ ಸಾವಿನೊಂದಿಗೆ ಕೊನೆಗೊಂಡಿದೆ. ಘಟನೆಯಲ್ಲಿ ಓರ್ವ ಮೇಜರ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಕಳೆದ ವಾರ ರಾಜೌರಿಯಲ್ಲಿ ಬಸ್ಸೊಂದರ ಮೇಲೆ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿರುವ ಮೂವರು ಲಷ್ಕರ್ ಭಯೋತ್ಪಾದಕರಿಗಾಗಿ ಶನಿವಾರ ಶಾರಾ ವಾಲಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹುಡುಕಾಟ ನಡೆಸಿ ಅವರನ್ನು ಕೊಂದು ಹಾಕಿವೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ವೀರ ಮರಣವನ್ನಪ್ಪಿರುವ ಯೋಧನನ್ನು ಸಿಪಾಯ್ ಎಸ್.ಕೆ. ಸಿಂಘ ಎಂದು ಗುರುತಿಸಲಾಗಿದೆ. 30 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಸುಶೀಲ್ ಮಹಾಪಾತ್ರ, ವಿಶೇಷ ಪೊಲೀಸ್ ಅಧಿಕಾರಿ ಇಫ್ತಿಕಾರ್ ಮಲಿಕ್ ಮತ್ತು ನಾಗರಿಕ ಅಬ್ದುಲ್ ರಜಾಕ್ ಗಾಯಗೊಂಡವರು.

ಸೋಮವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಉಗ್ರನನ್ನು ಜರ್ಗರ್ ಎಂದು ಗುರುತಿಸಲಾಗಿದೆ. ಭಾನುವಾರ ಸಾಜ್ಜಾದ್ ಕಾಶ್ಮೀರಿ ಮತ್ತು ಅಬೂ ಕಮ್ರಾನ್ ಎಂಬಿಬ್ಬರು ಉಗ್ರರು ಕೊಲ್ಲಲ್ಪಟ್ಟಿದ್ದರು. ಈ ಸಂದರ್ಭದಲ್ಲಿ ನಾಸಿರ್ ಅಹ್ಮದ್ ಎಂಬ ಪೊಲೀಸ್ ಕಾನ್ಸ್‌ಟೇಬಲ್ ಕೂಡ ಗಾಯಗೊಂಡಿದ್ದ.

ಸಾವನ್ನಪ್ಪಿದ ಭಯೋತ್ಪಾದಕರು ರಾಜೌರಿಯ ಡೇರ್-ಕೀ-ಗಾಲಿ ಎಂಬಲ್ಲಿ ಪ್ರಯಾಣಿಕರ ಬಸ್ ಮೇಲೆ ದಾಳಿ ನಡೆಸಿದ ಲಷ್ಕರ್ ಇ ತೋಯ್ಬಾ ಗುಂಪಿನಲ್ಲಿದ್ದವರು ಎಂದು ಹೇಳಲಾಗಿದೆ. ಬುಧವಾರ ನಡೆದಿದ್ದ ಈ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಇಬ್ಬರು ಜವಾನರು ಸೇರಿದಂತೆ 18 ಮಂದಿ ಇತರರು ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ