ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯಮೇವ ಜಯತೇ, ಸತ್ಯಂ ಶಿವಂ ಸುಂದರಂ: ಮೋದಿ (Gujarat | Narendra Modi | Satyameva Jayate | Independence Day)
Bookmark and Share Feedback Print
 
ಎಲ್ಲಾ ರೀತಿಯ ಅನ್ಯಾಯ, ನಿರ್ಲಕ್ಷ್ಯಗಳು ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯತ್ನಿಸುವವರ ವಿರುದ್ಧ ಸತ್ಯದ, ನ್ಯಾಯದ ಹಾದಿಯಲ್ಲಿ ಹೋರಾಟ ನಡೆಸಲು ಗುಜರಾತ್ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.

ಸತ್ಯಕ್ಕೆ ಯಾವತ್ತೂ ಜಯವಿದೆ -- 'ಸತ್ಯಮೇವ ಜಯತೇ' ನಮ್ಮ ನಂಬಿಕೆ. 'ಸತ್ಯಂ ಶಿವಂ ಸುಂದರಂ' ನಮ್ಮ ಸಾಂಸ್ಕೃತಿಕ ಪರಂಪರೆ. ವಾಸ್ತವ ಸತ್ಯ ನಮ್ಮ ಸಂಸ್ಕೃತಿಯಲ್ಲಿ ಮೆರುಗು ಪಡೆದುಕೊಂಡಿದೆ ಎಂದು ಸ್ವಾತಂತ್ರ್ಯ ದಿನದಂದು ತನ್ನ ಬ್ಲಾಗಿನಲ್ಲಿ ಮೋದಿ ಬರೆದಿದ್ದಾರೆ.
PTI

ಎಲ್ಲಾ ರೀತಿಯ ಅನ್ಯಾಯಗಳು, ಅಸಮಾನತೆಗಳು, ನಿರ್ಲಕ್ಷ್ಯಗಳು ಮತ್ತು ನಮ್ಮನ್ನು ಅಪಮಾನಗೊಳಿಸಲು ಯತ್ನಿಸುವ ಶಕ್ತಿಗಳ ವಿರುದ್ಧ ಹೋರಾಡಲು ಸೂಕ್ತವಾದ ಅಸ್ತ್ರ ಸತ್ಯ. ಹಾಗಾಗಿ ಅದೇ ಹಾದಿಯ ಮೂಲಕ ನಾವು ಹೋರಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಹಾದಿಯಲ್ಲಿ ನಡೆದವರಿಗೆ ಸೋಲಾಗಿಲ್ಲ. ಅವರ ಹೆಸರುಗಳು ಅಜರಾಮರವಾಗಿ ಉಳಿದಿದೆ ಎಂದಿರುವ ಗುಜರಾತ್ ಮುಖ್ಯಮಂತ್ರಿ ಅದಕ್ಕಾಗಿ ತನ್ನ ಲೇಖನದಲ್ಲಿ ಮಹಾತ್ಮಾ ಗಾಂಧಿ, ಸ್ವಾಮಿ ದಯಾನಂದಜೀ ಸರಸ್ವತಿ ಮತ್ತು ಸಮಾಜ ಸುಧಾರಕ ಕರ್ಸಂದಾಸ್ ಮುಲ್ಜಿ ಮುಂತಾದ ಶ್ರೇಷ್ಠರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದರು. ಒಂದು ನಿರ್ದಿಷ್ಟ ವರ್ಗವು ನನ್ನ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಾ ಬಂತು. ಆದರೂ ನಮ್ಮ ರಾಜ್ಯದ ಜನತೆ ಸುಮ್ಮನಿದ್ದರು ಎಂದು ಬ್ಲಾಗಿನಲ್ಲಿ ಗುಜರಾತಿಗಳ ಮೇಲೆ ಹೊಗಳಿಕೆಯ ಮಳೆಯನ್ನು ಮೋದಿ ಸುರಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ಸ್ವಾತಂತ್ರ್ಯ ದಿನ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆಯನ್ನು ತಡೆಯಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಇದನ್ನು ಬಗೆಹರಿಸುವ ಇಚ್ಛಾಶಕ್ತಿಯೂ ಸರಕಾರಕ್ಕಿಲ್ಲ ಎಂದು ತೀವ್ರವಾಗಿ ಟೀಕಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ