ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಿಶಿಷ್ಟ ಜನರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ: ಕೇಂದ್ರ (Crime | Scheduled Castes | Scheduled Tribes | Ministry of Home Affairs)
Bookmark and Share Feedback Print
 
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. 2007ರಲ್ಲಿ ದಾಖಲಾಗಿರುವುದಕ್ಕಿಂತ 3,600 ಪ್ರಕರಣಗಳು, ಅಂದರೆ 2008ರಲ್ಲಿ 40,000 ಪ್ರಕರಣಗಳು ದಾಖಲಾಗಿರುವುದನ್ನು ಉಲ್ಲೇಖಿಸಿ ಸರಕಾರ ವಿವರಣೆ ನೀಡಿದೆ. ಇದರಲ್ಲಿ ಕರ್ನಾಟಕದ ಪಾಲು 2,361 ಕೇಸುಗಳು.

ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿಗಳ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಜನರ ಮೇಲಿನ ದೌರ್ಜನ್ಯಗಳಿಗಾಗಿ 2007ರಲ್ಲಿ ವಿವಿಧ ಸಮುದಾಯಗಳ ಜನರ ವಿರುದ್ಧ 30,031 ಪ್ರಕರಣಗಳು ದಾಖಲಾಗಿದ್ದವು. ಅದು 2008ರ ಹೊತ್ತಿಗೆ 33,615ಕ್ಕೆ ತಲುಪಿದೆ.

ಪರಿಶಿಷ್ಟ ಪಂಗಡಗಳ ಸಮುದಾಯಗಳ ಜನರ ಮೇಲಿನ ಪ್ರಕರಣಗಳಲ್ಲೂ ಇದೇ ರೀತಿಯ ಏರಿಕೆ ಕಂಡು ಬಂದಿದೆ. 2007ರಲ್ಲಿ 5,532ರಲ್ಲಿದ್ದ ಪ್ರಕರಣಗಳು 2008ರ ಹೊತ್ತಿಗೆ 5,608ಕ್ಕೆ ಹೆಚ್ಚಳವಾಗಿದೆ.

ಒಟ್ಟಾರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ವಿವಿಧ ರೀತಿಯ ಅಪರಾಧಗಳ ಕುರಿತು 2008ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು 39,197. ಅದಕ್ಕಿಂತ ಹಿಂದಿನ ವರ್ಷ ಇದು 35,563ರಲ್ಲಿತ್ತು.

ಈ ಮಾಹಿತಿಯ ಪ್ರಕಾರ ಪರಿಶಿಷ್ಟರ ವಿರುದ್ಧ ದೌರ್ಜನ್ಯವೆಸಗಿರುವ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವುದು ಉತ್ತರ ಪ್ರದೇಶ. ಇಲ್ಲಿ 8,009 ಪ್ರಕರಣಗಳು ದಾಖಲಾಗಿವೆ.

ಉಳಿದಂತೆ ಆಂಧ್ರಪ್ರದೇಶದಲ್ಲಿ 3,998, ಬಿಹಾರದಲ್ಲಿ 3,617, ಗುಜರಾತಿನಲ್ಲಿ 1,231, ಕರ್ನಾಟಕದಲ್ಲಿ 2,361, ಮಧ್ಯಪ್ರದೇಶದಲ್ಲಿ 2,965, ಮಹಾರಾಷ್ಟ್ರದಲ್ಲಿ 1,192, ಒರಿಸ್ಸಾದಲ್ಲಿ 1,836, ರಾಜಸ್ತಾನದಲ್ಲಿ 4,302 ಹಾಗೂ ತಮಿಳುನಾಡಿನಲ್ಲಿ 1,618 ಪ್ರಕರಣಗಳು ಪರಿಶಿಷ್ಟರ ವಿರುದ್ಧದ ದೌರ್ಜನ್ಯಗಳಿಗಾಗಿ ದಾಖಲಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ