ಜಾಗತಿಕ ನಗರಗಳ (ಗ್ಲೋಬಲ್ ಸಿಟೀಸ್) ಪಟ್ಟಿಯಲ್ಲಿ ಭಾರತದ ವಾಣಿಜ್ಯ ನಗರಿ ಮುಂಬೈ 45 ಹಾಗೂ ದೆಹಲಿ 46ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಅದೇ ರೀತಿ ಕೋಲ್ಕತಾ 63ನೇ ಸ್ಥಾನವನ್ನು ಪಡೆದಿದೆ. ಇದೇ ವೇಳೆ ನ್ಯೂಯಾರ್ಕ್, ಲಂಡನ್ ಮತ್ತು ಟೋಕಿಯೋ ಮೊದಲ ಮೂರು ಸ್ಥಾನಗಳನ್ನು ಗಳಿಸಿದೆ.
ಅಷ್ಟೇ ಅಲ್ಲ ಪಾಕಿಸ್ತಾನದ ಕರಾಚಿ ನಗರ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 60ನೇ ಕ್ರಮಾಂಕದಲ್ಲಿದೆ. ಬಾಂಗ್ಲಾದ ಢಾಕಾ 64ನೇ ಸ್ಥಾನದಲ್ಲಿದ್ದು, ಒಲಿಂಪಿಕ್ ಆತಿಥ್ಯದಿಂದ ವಿಶ್ವದ ಗಮನ ಸೆಳೆದಿದ್ದ ಚೀನಾದ ಬೀಜಿಂಗ್ 15ನೇ ಸ್ಥಾನವನ್ನು ತನ್ನ ಬಗಲಿಗೆ ಹಾಕಿಕೊಂಡಿದೆ ಎಂದು ಸಮೀಕ್ಷೆ ನಡೆಸಿದ ಫೋರೈನ್ ಪಾಲಿಸಿ ಮ್ಯಾಗಜಿನ್ ಹೇಳಿದೆ.
21ನೇ ಶತಮಾನವನ್ನು ಅಮೆರಿಕ, ಬ್ರಿಟನ್ ಬ್ರಿಜಿಲ್ ಅಥವಾ ಭಾರತ ನಿಯಂತ್ರಿಸುವುದಿಲ್ಲ. ಬದಲಾಗಿ ನಗರಗಳು ನಿಯಂತ್ರಿಸಲಿವೆ ಎಂದು ಮ್ಯಾಗಜಿನ್ ತಿಳಿಸಿದೆ.