ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಹಿನೂರ್ ವಜ್ರ ಭಾರತಕ್ಕೆ ವಾಪಸ್ ತರುವುದಿಲ್ಲ: ಕೇಂದ್ರ (Kohinoor | Britain | Peacock Throne | UNESCO | Lok Sabha,)
Bookmark and Share Feedback Print
 
ಬೆಲೆ ಕಟ್ಟಲಾರದ ಕೊಹಿನೂರ್ ವಜ್ರ ಭಾರತಕ್ಕೆ ಮರಳಿ ತರಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರಕಾರ ಮೌನ ಮುರಿದಿದ್ದು, ಕೊಹಿನೂರ್ ವಜ್ರ ವಾಪಸ್ ತರುವ ಯಾವುದೇ ಯೋಜನೆ ಸರಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ದೇಶದಿಂದ ವಶಪಡಿಸಿಕೊಂಡಿರುವ ಅತ್ಯಮೂಲ್ಯ ಕೊಹಿನೂರ್ ವಜ್ರವಾಗಲಿ ಅಥವಾ ಮಯೂರ ಸಿಂಹಾಸನ ವಾಪಸ್ ತರುವ ಒಪ್ಪಂದ ಕೂಡ ಯುನೆಸ್ಕೋ ಪಟ್ಟಿಯಲ್ಲಿ ಇಲ್ಲ. ಅದು ಸಾಂಸ್ಕೃತಿಕ ಆಸ್ತಿ ಎಂದು ಪರಿಗಣಿಗತವಾಗಿದೆ.

ಬ್ರಿಟಿಷರು ಭಾರತದಿಂದ ಹೊರ ಹೋಗುವ ಸಂದರ್ಭದಲ್ಲಿ ಕೊಹಿನೂರ್ ವಜ್ರ, ಮಯೂರ ಸಿಂಹಾಸನ ಸೇರಿದಂತೆ ಹಲವು ಅತ್ಯಮೂಲ್ಯ ವಸ್ತುಗಳನ್ನು ಹೊತ್ತೊಯ್ದಿದ್ದರು. ಆ ನಿಟ್ಟಿನಲ್ಲಿ ಆ ಎಲ್ಲಾ ಅಮೂಲ್ಯ ವಸ್ತುಗಳನ್ನು ಭಾರತಕ್ಕೆ ವಾಪಸ್ ತರಬೇಕೆಂದು ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು.

ಈ ಕುರಿತು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಜನಾ ಸಚಿವಾಲಯದ ರಾಜ್ಯ ಸಚಿವ ನಾರಾಯಣ ಸ್ವಾಮಿ, ಕೊಹಿನೂರ್ ವಜ್ರ ಮತ್ತು ಮಯೂರ ಸಿಂಹಾಸನ ಭಾರತಕ್ಕೆ ಮರಳಿ ತರುವ ಯಾವುದೇ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ತಿಳಿಸಿದರು.

ಈ ಅತ್ಯಮೂಲ್ಯ ವಸ್ತು ಯುನೆಸ್ಕೋ ಒಪ್ಪಂದದಲ್ಲಿ ಸೇರ್ಪಡೆಗೊಂಡಿಲ್ಲ, ಅಲ್ಲದೇ 1972ರ ಒಪ್ಪಂದದ ಪ್ರಕಾರ 'ವಶಪಡಿಸಿಕೊಂಡ ವಸ್ತು ಸಾಂಸ್ಕೃತಿಕ ಆಸ್ತಿ'ಯಾಗಿದೆ ಎಂದು ನಾರಾಯಣ ಸ್ವಾಮಿ ವಿವರಿಸಿದರು.

ಕಳೆದ ತಿಂಗಳು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ಕೂಡ ಬೆಲೆಕಟ್ಟಲಾರದ ಕೊಹಿನೂರ್ ವಜ್ರವನ್ನು ಮರಳಿ ಭಾರತಕ್ಕೆ ನೀಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿದ್ದಾರೆ.

ಕೊಹಿನೂರ್ ವಜ್ರ ಹಿಂದೂ, ಮೊಘಲ್ ಹಾಗೂ ಬ್ರಿಟಿಷ್ ಆಡಳಿತಗಾರರ ವಶದಲ್ಲಿತ್ತು. ಕೊನೆಗೆ ಕೊಹಿನೂರ್ ವಜ್ರ ಈಸ್ಟ್ ಇಂಡಿಯಾ ಕಂಪನಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಕೊಹಿನೂರ್ ವಜ್ರ ಬ್ರಿಟಿಷ್ ರಾಣಿಯ ಕಿರೀಟದಲ್ಲಿ ರಾರಾಜಿಸತೊಡಗಿತ್ತು. 1877ರಲ್ಲಿ ಬ್ರಿಟಿಷ್ ರಾಣಿ ವಿಕ್ಟೋರಿಯಾ ತನ್ನ ಕಿರೀಟದಲ್ಲಿ ಕೊಹಿನೂರ್ ಅನ್ನು ಅಳವಡಿಸಿಕೊಂಡು ಧರಿಸಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ