ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನಿ ಸೇನಿಯಿಂದ ಭಾರತದತ್ತ ಅಪ್ರಚೋದಿತ ದಾಳಿ (violates ceasefire | LoC | Pakistani Army | Indian posts)
Bookmark and Share Feedback Print
 
ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಭಾರತವನ್ನು ಗುರಿಯಾಗಿಟ್ಟುಕೊಂಡ ಪಾಕಿಸ್ತಾನಿ ಪಡೆಗಳು ರಾತೋರಾತ್ರಿ ಫಿರಂಗಿ ಮತ್ತು ಕ್ಷಿಪಣಿಗಳ ಮೂಲಕ ಅಪ್ರಚೋದಿತ ದಾಳಿಗಳನ್ನು ನಡೆಸುವ ಮೂಲಕ ಕದನ ವಿರಾಮ ಒಪ್ಪಂದ ಉಲ್ಲಂಘನೆಯನ್ನು ಎಗ್ಗಿಲ್ಲದೆ ಮುಂದುವರಿಸಿದೆ.

ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ. ಇದು ನಡೆದಿರುವುದು ಪೂಂಛ್ ಜಿಲ್ಲೆಯ ಮೆಂದಾರ್ ಪ್ರದೇಶದ ಕೃಷ್ಣ ಘಾಟಿ ವಲಯದಲ್ಲಿ. ಇಲ್ಲಿ ಭಾರತೀಯ ಪೋಸ್ಟ್‌ಗಳತ್ತ ಪಾಕಿಸ್ತಾನಿ ಸೇನೆಯು ಗುರುವಾರ ತಡರಾತ್ರಿ ದಾಳಿಗಳನ್ನು ನಡೆದೆ.

ಭಾರತೀಯ ಸೇನೆಯ ಮೂಲಗಳ ಪ್ರಕಾರ ಕಳೆದೊಂದು ವರ್ಷದ ಅವಧಿಯಲ್ಲಿ ನಡೆದಿರುವ ಅತಿ ದೊಡ್ಡ ಕದನ ವಿರಾಮ ಒಪ್ಪಂದ ಉಲ್ಲಂಘನೆಯ ಪ್ರಕರಣವಿದು. ಮೋರ್ಟಾರುಗಳು ಮತ್ತು ರಾಕೆಟ್‌ಗಳನ್ನು ಭಾರತದತ್ತ ಗುರಿ ಮಾಡಿ ಸುಮಾರು ಒಂದು ಗಂಟೆಯಷ್ಟು ಹೊತ್ತು ನಡೆಸಿದ ದಾಳಿಯ ಹಿಂದೆ ನುಸುಳುಕೋರರಿಗೆ ಬೆಂಬಲ ನೀಡುವ ಸಂಚು ಅಡಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಗುರುವಾರ ರಾತ್ರಿ ಒಂದು ಗಂಟೆಯಿಂದ ಎರಡೂವರೆ ಗಂಟೆಯ ನಡುವೆ ಈ ಘಟನೆ ನಡೆದಿದೆ. ಪಾಕಿಸ್ತಾನಿ ಭಯೋತ್ಪಾದಕರನ್ನು ಭಾರತದ ಗಡಿ ಪ್ರದೇಶದತ್ತ ಸೇರಿಸುವ ಸಲುವಾಗಿ ಗಡಿಯಲ್ಲಿನ ರಕ್ಷಣಾ ಪಡೆಗಳನ್ನು ಒಂದೆಡೆ ಆಕರ್ಷಿಸಲು ಈ ರೀತಿಯ ದಾಳಿಗಳನ್ನು ಪಾಕ್ ಸೇನೆ ನಡೆಸುವುದು ಸಾಮಾನ್ಯ ಎಂದು ಭಾರತೀಯ ಸೇನೆ ಅಭಿಪ್ರಾಯಪಟ್ಟಿದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ 2003ರ ನವೆಂಬರ್ ತಿಂಗಳಲ್ಲಿ ಕದನ ವಿರಾಮ ಒಪ್ಪಂದವಾಗಿತ್ತು. ಆದರೆ ಪಾಕ್ ಸತತವಾಗಿ ಇದನ್ನು ಉಲ್ಲಂಘಿಸುತ್ತಾ ಬಂದಿದೆ. ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ನಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವುದೇ ಪಾಕ್ ಉದ್ದೇಶ.

ಈ ವರ್ಷ ಜುಲೈ ಆರರಂದು ಪಾಕಿಸ್ತಾನಿ ಪಡೆಗಳು ಜಮ್ಮುವಿನಲ್ಲಿನ ಪಿಂಡಿ, ಮಾಲಾ ಬೇಲಾ ಮತ್ತು ಚಕ್ ಫಾಗ್ವಾರಿ ಪ್ರದೇಶಗಳಲ್ಲಿ ದಾಳಿ ನಡೆಸಿ ಓರ್ವ ಗಡಿ ಭದ್ರತಾ ಪಡೆ ಯೋಧನನ್ನು ಕೊಂದು ಹಾಕಿತ್ತು. ಘಟನೆಯಲ್ಲಿ ಗ್ರಾಮಸ್ಥನೊಬ್ಬ ಗಾಯಗೊಂಡಿದ್ದ.

ಅದರ ಮರುದಿನ ಮತ್ತೊಂದು ದಾಳಿಯಲ್ಲಿ ಪರ್ಗ್ವಾಲ್ ಪ್ರದೇಶದಲ್ಲಿ ಮತ್ತೊಬ್ಬ ಬಿಎಸ್ಎಫ್ ಜವಾನನ್ನು ಪಾಕ್ ಪಡೆಗಳು ಕೊಂದು ಹಾಕಿದ್ದವು.

ಜುಲೈ 15ರಂದು ಮತ್ತೆ ಗಡಿ ನಿಯಂತ್ರಣಾ ರೇಖೆಯನ್ನು ಉಲ್ಲಂಖಿಸಿ ಪೂಂಛ್ ವಲಯದ ಐದು ಭಾರತದ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿರಲಿಲ್ಲ.

ಜುಲೈ 21ರಂದು ಜಮ್ಮು ವಲಯದಲ್ಲಿ ನಡೆಸಿದ ಮತ್ತೊಂದು ದಾಳಿಯಲ್ಲಿ ಬಿಎಸ್ಎಫ್ ಜವಾನನೊಬ್ಬ ಗಾಯಗೊಂಡಿದ್ದ.
ಸಂಬಂಧಿತ ಮಾಹಿತಿ ಹುಡುಕಿ