ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಹೇಳಿಕೆ ಬಹಿರಂಗವಿಲ್ಲ; ಗಲಭೆ ತನಿಖೆ ನಡೆಯಲಿ (Narendra Modi | Gujarat riots | Ehsan Jafri case | Sohrabuddin Sheikh)
Bookmark and Share Feedback Print
 
ಗುಜರಾತ್ ಗಲಭೆಯ ಕುರಿತು ವಿಶೇಷ ತನಿಖಾ ತಂಡವು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ವಿಶೇಷ ನ್ಯಾಯಾಲಯ ಹೊರತುಪಡಿಸಿ ಬೇರೆಲ್ಲೂ ಬಹಿರಂಗಪಡಿಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಅಲ್ಲದೆ ತನಗೆ ವಿಶೇಷ ತನಿಖಾ ತಂಡದ (ಸಿಟ್) ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಗುಜರಾತ್ ಗಲಭೆಯ ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಹೇಳಿದೆ.

ಎಹ್ಸಾನ್ ಜಾಫ್ರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಿಟ್ ತನಿಖಾ ತಂಡವು ಮಾರ್ಚ್ ತಿಂಗಳಲ್ಲಿ ಮೋದಿಯವನ್ನು ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಕಾಂಗ್ರೆಸ್ ಮಾಜಿ ಸಂಸದನಾಗಿದ್ದ ಎಹ್ಸಾನ್, 2002ರ ಫೆಬ್ರವರಿಯಲ್ಲಿ ಅಹಮದಾಬಾದ್‌ನಲ್ಲಿನ ಗುಲ್ಬರ್ಗ್ ಸೊಸೈಟಿ ಹಿಂಸಾಚಾರದಲ್ಲಿ ಜೀವಂತವಾಗಿ ದಹನವಾಗಿದ್ದರು.

ಅಲ್ಪಸಂಖ್ಯಾತರ ವಿರುದ್ಧ ನಡೆದಿದ್ದ ಹಿಂಸಾಚಾರದಲ್ಲಿ ಅವರಿಗೆ ರಕ್ಷಣೆ ಸಿಗದಂತೆ ಮೋದಿ ಮತ್ತು 62 ಮಂದಿ ಹಿರಿಯ ಸಚಿವರುಗಳು, ಅಧಿಕಾರಿಗಳು, ಪೊಲೀಸರು ನೋಡಿಕೊಂಡಿದ್ದರು ಎಂದು ಎಹ್ಸಾನ್ ಪತ್ನಿ ಝಾಕಿಯಾ 2006ರಲ್ಲಿ ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ್ದರು.

ಝಾಕಿಯಾ ದೂರಿನಂತೆ ಪ್ರಕರಣವನ್ನು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಗುಜರಾತ್ ಮಾಜಿ ಸವಿಚ ಜಿ. ಜಪಾಫಿಯಾ, ಉನ್ನತ ಪೊಲೀಸ್ ಅಧಿಕಾರಿ ಎಂ.ಕೆ. ಟಂನ್ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಇನ್ನಷ್ಟು ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಬಯಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸುಪ್ರೀಂ ಹೇಳಿದ್ದು, ತನಿಖೆಯನ್ನು ಮುಂದುವರಿಸುವಂತೆ ಸೂಚನೆ ನೀಡಿದೆ.

ರಾಜ್ಯಸಭೆಯಲ್ಲಿ ಮೋದಿ ಗದ್ದಲ...
ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿಯವರನ್ನು ಬಚಾವ್ ಮಾಡಲು ಕಾಂಗ್ರೆಸ್ ಪಕ್ಷವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪವನ್ನು ಮುಂದುವರಿಸಿರುವ ಆರ್‌ಜೆಡಿ ಮತ್ತು ಎಲ್‌ಜೆಪಿ ಸದಸ್ಯರು ಇಂದು ರಾಜ್ಯಸಭಾ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ.

ಬೆಲೆಯೇರಿಕೆ ವಿವಾದವನ್ನು ತಣ್ಣಗೆ ಮಾಡುವುದು ಮತ್ತು ಪರಮಾಣು ಬಾಧ್ಯತಾ ಮಸೂದೆಯಲ್ಲಿ ಸರಕಾರವನ್ನು ಬೆಂಬಲಿಸುವುದನ್ನು ಖಚಿತಪಡಿಸಿಕೊಂಡಿರುವ ಸರಕಾರವು, ಮೋದಿಯವರನ್ನು ಬಚಾವ್ ಮಾಡಲು ಒಪ್ಪಂದ ಮಾಡಿಕೊಂಡಿದೆ ಎನ್ನುವುದು ಸದಸ್ಯರ ಆರೋಪವಾಗಿತ್ತು.

ರಾಜ್ಯಸಭಾ ಸದಸ್ಯರ ಆರೋಪವನ್ನು ತಳ್ಳಿ ಹಾಕುತ್ತಾ, ಅವರನ್ನು ಕಾಂಗ್ರೆಸ್ ಸದಸ್ಯರು ಸಮಾಧಾನಗೊಳಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರ ಜತೆ ವಾಗ್ವಾದ ನಡೆಯಿತು.

ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ