ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಇಸ್ಲಾಮ್‌ ಧರ್ಮ ಸ್ವೀಕರಿಸಿ, ಇಲ್ಲ ಕಾಶ್ಮೀರ ಬಿಟ್ಟು ತೊಲಗಿ':ಉಗ್ರರ ಧಮಕಿ (Sikhs threatened | Embrace Islam | Kashmir Valley | Islamic)
Bookmark and Share Feedback Print
 
ಪ್ರತ್ಯೇಕತವಾದಿಗಳ ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಜಮ್ಮು-ಕಾಶ್ಮೀರದಲ್ಲಿನ ಸಿಖ್ ಸಮುದಾಯ ಮತ್ತೊಂದು ಅಡ ಕತ್ತರಿಯಲ್ಲಿ ಸಿಲುಕಿಕೊಂಡಿದೆ. 'ನೀವು ಇಸ್ಲಾಮ್ ಅನ್ನು ಸ್ವೀಕರಿಸಬೇಕು ಹಾಗೂ ಕಣಿವೆಯಲ್ಲಿನ ನಾಗರಿಕರ ಹತ್ಯೆಯನ್ನು ವಿರೋಧಿಸುವ ಪ್ರತಿಭಟನೆಯಲ್ಲಿ ಕೈಜೋಡಿಸಬೇಕು. ಇಲ್ಲದಿದ್ದರೆ ಕಾಶ್ಮೀರ ಬಿಟ್ಟು ತೆರಳಿ' ಎಂದು ಇಸ್ಲಾಮಿಕ್ ಉಗ್ರರು ಇಲ್ಲಿನ ಸಿಖ್ ಸಮುದಾಯಕ್ಕೆ ಅನಾಮಧೇಯ ಪತ್ರವೊಂದನ್ನು ರವಾನಿಸಿ ಬೆದರಿಕೆ ಒಡ್ಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಸುಮಾರು 60ಸಾವಿರ ಸಿಖ್ ಸಮುದಾಯದ ಜನರಿದ್ದಾರೆ. ಕಾಶ್ಮೀರದಲ್ಲಿರುವ ಏಕೈಕ ದೊಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಸಿಖ್ ಜನಾಂಗದ ಮೇಲೂ ಉಗ್ರರು ಕೆಂಗಣ್ಣು ಬೀರಿದ್ದಾರೆ.

'ಸಿಖ್ ಸಮುದಾಯದವರು ಇಸ್ಲಾಮ್ ಸೇರಬೇಕು, ನಮ್ಮ ಪ್ರತಿಭಟನೆಯಲ್ಲಿ ಕೈಜೋಡಿಸಬೇಕು. ಇಲ್ಲದಿದ್ದರೆ ಕಣಿವೆ ಪ್ರದೇಶ ಬಿಟ್ಟು ತೆರಳಿ' ಎಂಬ ಬೆದರಿಕೆಯ ಪತ್ರ ಹಲವು ಸಿಖ್ ಮುಖಂಡರಿಗೆ ತಲುಪಿರುವುದಾಗಿ ಕಾಶ್ಮೀರಿ ಸಿಖ್ ಸಂಘಟನೆ ತಿಳಿಸಿದೆ. ಆದರೆ ನಾವು ಉಗ್ರರ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿಯೇ ಇದ್ದು ಇಂತಹ ರಾಕ್ಷಸಿ ಪ್ರವೃತ್ತಿ ಉಗ್ರರ ವಿರುದ್ಧ ಹೋರಾಡಲು ಸಿಖ್ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಲ್ ಪಾರ್ಟಿ ಸಿಖ್ ಕೋ ಆರ್ಡಿನೇಷನ್ ಕಮಿಟಿಯ ಸಂಚಾಲಕ ಜಗಮೋಹನ್ ಸಿಂಗ್ ರೈನಾ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾನೆ.

'ನೀವು ಕಾಶ್ಮೀರದಲ್ಲೇ ಇದ್ದುಕೊಂಡು ಎಲ್ಲ ರೀತಿ ಸುಖ-ಸಂತೋಷ ಅನುಭವಿಸುತ್ತೀರಿ. ಹಾಗಿದ್ದ ಮೇಲೆ ಕಾಶ್ಮೀರಿಗಳಿಗೆ ಎದುರಾದ ಸಂಕಷ್ಟಗಳಿಗೆ ನೀವು ಯಾಕೆ ಸ್ಪಂದಿಸಬಾರದು? ನಮಗೆ ಗೊತ್ತು ನೀವು ಬಂದೂಕಿನ ಬುಲೆಟ್‌ಗೆ ಹೆದರುತ್ತೀರಿ...ಹಾಗಾಗಿ ನಿಮ್ಮ ಗುರುದ್ವಾರದಲ್ಲಿ ಪ್ರತಿಭಟನೆ ನಡೆಸಿ. ಇಲ್ಲದಿದ್ದರೆ ಕಾಶ್ಮೀರ ಬಿಟ್ಟು ತೊಲಗಿ' ಎಂದು ಪತ್ರದಲ್ಲಿ ಬೆದರಿಕೆಯೊಡ್ಡಲಾಗಿದೆ ಎಂದು ಸಿಂಗ್ ವಿವರಿಸಿದ್ದಾರೆ.

ಆ ನಿಟ್ಟಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಸೌಹಾರ್ದತೆಯಿಂದ ಬಾಳುತ್ತಿರುವ ಸಿಖ್ ಸಮುದಾಯಕ್ಕೆ ಬಂದಿರುವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ರೈನಾ ಅವರು ಹುರಿಯತ್, ಜೆಕಿಎಲ್‌ಎಫ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಿ ಮೂಲದ ಯುನೈಟೆಡ್ ಜಿಹಾದ್ ಕೌನ್ಸಿಲ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ