ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ಭಾಷೆ, ಪ್ರಾದೇಶಿಕತೆ ರಾಜಕೀಯವಲ್ಲ: ಗಡ್ಕರಿ (BJP | language | Nitin Gadkari | Marathi)
Bookmark and Share Feedback Print
 
ಭಾಷೆ ಮತ್ತು ಪ್ರಾದೇಶಿಕತೆಯನ್ನು ಆಧರಿಸಿದ ರಾಜಕೀಯ ಸಂಸ್ಕೃತಿಯನ್ನು ತೀವ್ರವಾಗಿ ವಿರೋಧಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ನಮ್ಮ ಪಕ್ಷ ಅಂತಹ ವಿಚಾರಗಳನ್ನು ಆಧರಿಸಿ ರಾಜಕಾರಣ ಮಾಡುತ್ತಿಲ್ಲ ಎಂದಿದ್ದಾರೆ.
PTI

ಪ್ರಾದೇಶಿಕತೆ ಅಥವಾ ಭಾಷೆಯನ್ನು ಆಧರಿಸಿದ ಯಾವುದೇ ಸಮೀಪದೃಷ್ಟಿಯ ರಾಜಕೀಯ ಮಾಡಲು ಬಿಜೆಪಿ ಬಯಸುತ್ತಿಲ್ಲ. ನಾವೆಲ್ಲರೂ ಭಾರತೀಯರು ಎನ್ನುವುದೇ ನಮ್ಮ ನಿಲುವು ಎಂದು ಮುಂಬೈಯಲ್ಲಿ ಬಿಜೆಪಿಯ ಉತ್ತರ ಭಾರತೀಯ ವಿಭಾಗದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

ನಾನು ಮರಾಠಿ ಕುಟುಂಬದಲ್ಲಿ ಹುಟ್ಟಿದವನು ಮತ್ತು ಆ ಸಂಸ್ಕೃತಿಯನ್ನು ಪ್ರೀತಿಸುವವನು. ಸಂತ ತುಕರಾಮ್ ಮತ್ತು ಜ್ಞಾನೇಶ್ವರ್ ಅವರ ಸಿದ್ಧಾಂತಗಳನ್ನು ನಾನು ಅನುಸರಿಸುತ್ತಿದ್ದೇನೆ. ಹಾಗೆಂದು ನಾನು ಹಿಂದಿ ಭಾಷೆಯನ್ನು ಯಾವತ್ತೂ ವಿರೋಧಿಸಿದವನಲ್ಲ ಎಂದರು.

ಇತ್ತೀಚಿನ ವರ್ಷಗಳಲ್ಲಿ ಬಾಳಾ ಠಾಕ್ರೆಯವರ ಶಿವಸೇನೆ ಮತ್ತು ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಮರಾಠಿಯೇತರರ ವಿರುದ್ಧ ಮಹಾರಾಷ್ಟ್ರದಲ್ಲಿ ದೌರ್ಜನ್ಯ ನಡೆಸುತ್ತಾ ಬಂದಿದ್ದು, ಇತರ ಭಾಷಿಗರನ್ನು ತುಳಿಯಲು ಯತ್ನಿಸುತ್ತಿದೆ. ಆದರೆ ಇದ್ಯಾವುದನ್ನೂ ಉಲ್ಲೇಖಿಸದೆ, ಪರೋಕ್ಷವಾಗಿ ಅಂತವರ ವಿರುದ್ಧ ಬಿಜೆಪಿ ನಾಯಕ ವಾಗ್ದಾಳಿ ನಡೆಸಿದರು.

ಭಾಷೆಯ ಆಧಾರದಲ್ಲಿ ಜನತೆಯನ್ನು ವಿಭಜಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹಿಂದಿ ಮತ್ತು ಮರಾಠಿಯ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ